ಸಾಮಾಜಿಕ ತಾಣ

ಹೆಲ್ಮೆಟ್ ಧರಿಸದೆ ಪೊಲೀಸರ ದಂಡ ತಪ್ಪಿಸಲು ಬೈಕ್ ಸವಾರರು ಮಾಡಿದ ತಂತ್ರವೇನು ? ವೀಡಿಯೋ ವೀಕ್ಷಿಸಿ

ವರದಿಗಾರ (ಜ 22 ) :  ಹೆಲ್ಮೆಟ್ ಧರಿಸಿ ಬೈಕ್ ಚಲಾಯಿಸಿ ಹಾಗೂ ಅಪಘಾತಗಳಿಂದ ಹೆಚ್ಚಿನ ಅನಾಹುತಗಳನ್ನು ತಪ್ಪಿಸಿ ಎಂದು ಪೊಲೀಸ್ ಇಲಾಖೆ ಹಲವು ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದೆ. ಆದರೆ ಕೆಲ ಸವಾರರು ಇದನ್ನು ಗಣನೆಗೆ ತಗೆದುಕೊಳ್ಳದೆ ಹೆಲ್ಮೆಟ್ ಧರಿಸದೆ ಬೈಕ್ ಚಲಾಯಿಸುತ್ತಾ ಕಾನೂನು ಮೀರಿ ನಡೆಯುತ್ತಾರೆ. ಇಂತಹಾ ಬೈಕ್ ಸವಾರರನ್ನು ತಡೆದು ಅವರಿಗೆ ಸೂಕ್ತ ದಂಡ ಹಾಕಲು ಪೊಲೀಸರೂ ರಸ್ತೆಗಿಳಿಯುತ್ತಿದ್ದಾರೆ. ಆದರೆ ಪೊಲೀಸರು ಚಾಪೆಯ ಕೆಳಗಡೆ ತೂರಿದ್ರೆ ನಾವು ರಂಗೋಲಿ ಕೆಳಗಡೆ ತೂರುತ್ತೇವೆ ಎನ್ನುತ್ತಾರೆ ಕೆಲ ಬೈಕ್ ಸವಾರರು !!

ಹೆಲ್ಮೆಟ್ ಧರಿಸದ ಹಲವಾರು ಬೈಕ್ ಸವಾರರು ಪೊಲೀಸರ ದಂಡ ತಪ್ಪಿಸಲು ತಾವು ಸಂಚರಿಸುತ್ತಿದ್ದ ಬೈಕನ್ನು ಪೊಲೀಸರೆದುರು ತಳ್ಳಿಕೊಂಡು ಹೋಗುತ್ತಿರುವ ದೃಶ್ಯವೊಂದು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿದೆ. ಪೊಲೀಸರೂ ಅಸಹಾಯಕರಾಗಿ ನೋಡುತ್ತಿರುವುದು ಕಂಡು ಬರುತ್ತಿದೆ. ಯಾಕೆಂದರೆ ಹೆಲ್ಮೆಟ್ ಧರಿಸದೆ ಚಲಾಯಿಸುತ್ತಿರುವ ಬೈಕುಗಳನ್ನು ತಡೆದು ಸವಾರರಿಗೆ ದಂಡ ಹಾಕಬಹುದು, ಆದರೆ ತಳ್ಳಿಕೊಂಡು ಹೋಗುತ್ತಿರುವ ಬೈಕುಗಳನ್ನು ತಡೆಯುವುದು ಹೇಗೆಂದು ಪೊಲೀಸರು ಯೋಚಿಸಿ ಅವರನ್ನು ಹಾಗೆಯೇ ಬಿಟ್ಟು ಬಿಟ್ಟಿದ್ದಾರೆ.

ಈ ವೀಡಿಯೋ ಗೋವಾದಲ್ಲಿ ಸೆರೆ ಹಿಡಿದದ್ದೆಂದು ಹೇಳಲಾಗುತ್ತಿದೆ. ಆದರೆ ಆ ಕುರಿತು ಇನ್ನೂ ಸ್ಪಷ್ಟತೆ ಇಲ್ಲವೆನ್ನಲಾಗಿದೆ.

To Top
error: Content is protected !!
WhatsApp chat Join our WhatsApp group