ಸಾಮಾಜಿಕ ತಾಣ

ಇಂದು ಕೆಲ ಮನುಷ್ಯರು ಶಿಲಾಯುಗದ ಮಂಗನಂತಾಡುತ್ತಿದ್ದಾರೆ : ಬಿಜೆಪಿ ಕೇಂದ್ರ ಸಚಿವರಿಗೆ ಪ್ರಕಾಶ್ ರೈ ಟಾಂಗ್ 

ವರದಿಗಾರ (ಜ 22 ) : ಆಡಳಿತಾರೂಢ ಕೇಂದ್ರ ಸರಕಾರದ ಜನವಿರೋಧಿ ನೀತಿಗಳನ್ನು ಹಾಗೂ ಸಂಘಪರಿವಾರದ ಅಟ್ಟಹಾಸಗಳನ್ನು ಸತತವಾಗಿ ಟೀಕಿಸುತ್ತಾ ಸಾಮಾಜಿಕ ತಾಣಗಳಲ್ಲಿ ಸಂಚಲನ ಸೃಷ್ಟಿಸಿರುವ ಬಹುಭಾಷಾ ನಟ ಪ್ರಕಾಶ್ ರೈ ಯವರು ಇಂದು ಮತ್ತೊಮ್ಮೆ ಕೇಂದ್ರ ಸಚಿವ ಸತ್ಯಪಾಲ್ ಸಿಂಗ್ ವಿರುದ್ಧ ಕುಟುಕಿದ್ದಾರೆ.  ಡಾರ್ವಿನ್ನನ ವಿಕಸನ ಸಿದ್ಧಾಂತ ನಿಜವಲ್ಲ, ಮಂಗನಿಂದ ಮಾನವನಾಗಿದ್ದು ನಮ್ಮ ಪೂರ್ವಜರು ಯಾರೂ ನೋಡಿಲ್ಲ ಎಂದು ಸಿದ್ಧಾಂತವನ್ನೇ ಅಲ್ಲಗಳೆದಿದ್ದರು.

ಇದಕ್ಕೆ ತನ್ನ ಟ್ವಿಟ್ಟರ್ ಖಾತೆಯಲ್ಲಿ ಪ್ರತಿಕ್ರಿಯಿಸಿರುವ ನಟ ಪ್ರಕಾಶ್ ರೈ, ‘ಮಾನ್ಯ ಮಂತ್ರಿಯವರು ಡಾರ್ವಿನ್ ಸಿದ್ಧಾಂತವನ್ನು ನಿಜವಲ್ಲವೆಂದಿದ್ದಾರೆದ್ದಾರೆ, ಆದರೆ ಈಗ ನಾವು ಡಾರ್ವಿನ್ ಸಿದ್ಧಾಂತಕ್ಕೆ ವಿರುದ್ಧವಾಗಿ ನಡೆಯುತ್ತಿರುವ ವಿದ್ಯಮಾನಗಳಿಗೆ ಪ್ರತ್ಯಕ್ಷ ಸಾಕ್ಷಿಯಾಗುತ್ತಿದ್ದೇವೆ. ಮಾನವ ಮಂಗನಂತಾಗುತ್ತಿದ್ದಾನೆ. ಇದನ್ನು ನಿಮಗೆ ನಿರಾಕರಿಸಲು ಸಾಧ್ಯವೇ?  ಇತಿಹಾಸವನ್ನು ಅಗೆದು ನಮ್ಮನ್ನು ಶಿಲಾಯುಗಕ್ಕೆ ಕೊಂಡೊಯ್ಯಲಾಗುತ್ತಿದೆ ಎಂದು ತನ್ನ ಎಂದಿನ ಹ್ಯಾಶ್ ಟ್ಯಾಗ್ ಆದ #JustAsking ಅಭಿಯಾನದ ಮೂಲಕ ಪ್ರತಿಕ್ರಿಯಿಸಿದ್ದಾರೆ.

ಒಟ್ಟಿನಲ್ಲಿ ಪ್ರಕಾಶ್ ರೈ, ತನಗೆ ಸಿಗುವ ಪ್ರತಿಯೊಂದು ಅವಕಾಶಗಳನ್ನು ಬಹಳ ಸೂಕ್ಷ್ಮವಾಗಿ ವಿಮರ್ಶಿಸುತ್ತಾ ಕೇಂದ್ರ ಸರಕಾರ, ಜನಪ್ರತಿನಿಧಿಗಳು ಹಾಗೂ ಅವರ ಹೇಳಿಕೆಗಳನ್ನು ಕಟುವಾಗಿ ಟೀಕಿಸುತ್ತಾ ಜನರನ್ನು ಜಾಗೃತಿಗೊಳಿಸುವ ಅಭಿಯಾನವನ್ನು ವಿಶಿಷ್ಟ ರೀತಿಯಲ್ಲಿ ಮುಂದುವರಿಸುತ್ತಿದ್ದಾರೆ ಎನ್ನಬಹುದು

Click to comment

Leave a Reply

Your email address will not be published. Required fields are marked *

To Top
error: Content is protected !!
WhatsApp chat Join our WhatsApp group