ಸಾಮಾಜಿಕ ತಾಣ

“ಸರ್, ಐ ಲವ್ ಯು”: ಕಿಕ್ಕಿರಿದ ಸಭೆಯಿಂದ ಕೇಜ್ರಿವಾಲ್ ಗೆ ಪ್ರೀತಿ ವ್ಯಕ್ತಪಡಿಸಿದ ಅಭಿಮಾನಿ

“ಐ ಲವ್ ಯು ಟೂ” ಹೇಳಿದ ಕೇಜ್ರಿವಾಲ್!

ವರದಿಗಾರ(21-01-2018) : ದೆಹಲಿಯ ಮುಖ್ಯಮಂತ್ರಿ, ಆಮ್ ಆದ್ಮಿ ಪಾರ್ಟಿಯ ನಾಯಕ ಅರವಿಂದ್ ಕೇಜ್ರಿವಾಲ್ ರ ವೀಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಕೇಜ್ರಿವಾಲ್ ಸಭೆಯೊಂದನ್ನುದ್ದೇಶಿಸಿ ಮಾತನಾಡಲು ಪ್ರಾರಂಭಿಸಿದಾಗ ಸಭಿಕರಲ್ಲೋರ್ವನು ಜೋರಾಗಿ ” ಸರ್, ಐ ಲವ್ ಯೂ” ಎಂದು ಹೇಳಿದನು. ಮುಖ್ಯಮಂತ್ರಿ ಕೇಜ್ರಿವಾಲ್ ರನ್ನೊಳಗೊಂಡಂತೆ ಅಲ್ಲಿ ಸೇರಿದವರೆಲ್ಲರೂ ಆಶ್ಚರ್ಯ ಹಾಗೂ ಸಂತೋಷದ ಬಾವನೆಗಳನ್ನು ವ್ಯಕ್ತಪಡಿಸಿದರು. ಆತನಿಗೆ ಉತ್ತರಿಸಿದ ಕೇಜ್ರಿವಾಲ್ ” ಥ್ಯಾಂಕ್ಯೂ ಸೋ ಮಚ್, ಐ ಲವ್ ಯು ಟೂ” ಎಂದಾಗ ಸಭಿಕರೆಲ್ಲರೂ ಸಂತೋಷದಿಂದ ಚೀರಾಡತೊಡಗಿದರು.

ಕೇಜ್ರಿವಾಲ್ ರಿಗಿರುವ ಜನಮನ್ನಣೆ ಕಡಿಮೆಯಾಗುತ್ತಿದೆ ಎಂದು ಮಾಧ್ಯಮಗಳು ಹಾಗೂ ಬಿಜೆಪಿ, ಕಾಂಗ್ರೆಸ್ ಹೇಳುತ್ತಿರುವಾಗಲೇ ನಡೆದ ಈ ಘಟನೆಯು ಜನರ ಮನಸ್ಸಿನಲ್ಲಿ ಇನ್ನೂ ಮಾಸದ ಪ್ರೀತಿಯನ್ನು ಎತ್ತಿ ತೋರಿಸುತ್ತಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

https://twitter.com/ash_aswathi/status/955099145886298114

To Top
error: Content is protected !!
WhatsApp chat Join our WhatsApp group