ರಾಜ್ಯ ಸುದ್ದಿ

ನಾಯಿಗಳು ಕೂಗಿದ್ರೆ ತಲೆ ಕೆಡಿಸಿಕೊಳ್ಳಲ್ಲ: ಪ್ರತಿಭಟನಾಕಾರರನ್ನು ನಾಯಿಗೆ ಹೋಲಿಸಿದ ಅನಂತ್ ಕುಮಾರ್ ಹೆಗಡೆ

ವರದಿಗಾರ (ಜ.20): ‘ರಸ್ತೆಯಲ್ಲಿ ಯಾವುದೋ ನಾಯಿಗಳು ಕೂಗಿದ್ರೆ ತಲೆಕೆಡಿಸಿಕೊಳ್ಳಲ್ಲ’ ಎಂದು ಕೇಂದ್ರ ಕೌಶಲ್ಯಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗಡೆ ಸಂವಿಧಾನ ವಿರೋಧಿ ಹೇಳಿಕೆಯನ್ನು ಖಂಡಿಸಿ ದಲಿತರು ಹಾಗೂ ಸಾರ್ವಜನಿಕರು ನಡೆಸಿದ ಕಾರು ಮತ್ತಿಗೆ ಹಾಗೂ ಪ್ರತಿಭಟನೆಯಲ್ಲಿ ಭಾಗವಹಿಸಿದ ಪ್ರತಿಭಟನಾಕಾರರನ್ನು ನಾಯಿಗೆ ಹೋಲಿಸಿ ಮತ್ತೊಂದು ವಿವಾದವನ್ನು ಸೃಷ್ಟಿಸಿದ್ದಾರೆ.

ಬಳ್ಳಾರಿಯಲ್ಲಿ ಇಂದು ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಅವರು ಪ್ರತಿಭಟನಾಕಾರರನ್ನು ನಾಯಿಗಳಿಗೆ ಹೋಲಿಸಿದ್ದಾರೆ.

ನನ್ನ ಸ್ವಭಾವವೇ ಹೀಗೆ. ಇದ್ದದ್ದನ್ನು ಇದ್ದ ಹಾಗೆಯೇ ಹೇಳುತ್ತೇನೆ ಎಂದು ತನ್ನ ವಿವಾದಾತ್ಮಕ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ನಮ್ಮಲ್ಲಿ ಛಲವಿದೆ. ದೇಶವನ್ನು ಕಟ್ಟುವ ವಿಶ್ವಾಸವಿದೆ ಎಂದು ಇದೇ ಸಂದರ್ಭದಲ್ಲಿ ಅವರು ಹೇಳಿಕೊಂಡಿದ್ದಾರೆ.

ಅನಂತ್ ಕುಮಾರ್ ಹೆಗಡೆಗೆ ಹುಚ್ಚು ನಾಯಿ ಕಡಿದಿದೆ: ಮಾಲಯ್ಯ
‘ರಸ್ತೆಯಲ್ಲಿ ಯಾವುದೋ ನಾಯಿಗಳು ಕೂಗಿದ್ರೆ ತಲೆಕೆಡೆಸಿಕೊಳ್ಳಲ್ಲ’ ಎಂದು ಪ್ರತಿಭಟನಾಕಾರರನ್ನು ನಾಯಿಗೆ ಹೋಲಿಸಿದ ಅನಂತ್ ಕುಮಾರ್ ಹೆಗಡೆಯ ಹೇಳಿಕೆಯ ಬಗ್ಗೆ ಪ್ರತಿಕ್ರಿಸಿರುವ ಸ್ಥಳೀಯ ದಲಿತ ಮುಖಂಡ ಮಾಲಯ್ಯ, ಅನಂತ್ ಕುಮಾರ್ ಹೆಗಡೆಗೆ ಹುಚ್ಚು ನಾಯಿ ಕಡಿದಿದೆ ಎಂದು ರಾಜ್ಯ ಸುದ್ದಿ ವಾಹಿನಿಯೊಂದರಲ್ಲಿ ಮಾತನಾಡುತ್ತಾ ಅವರು ಹೇಳಿದ್ದಾರೆ.

To Top
error: Content is protected !!
WhatsApp chat Join our WhatsApp group