ಸಾಮಾಜಿಕ ತಾಣ

‘ರಿಯಲ್ ಸಿಂಗಂ’ ಪ್ರಕಾಶ್ ರೈ ಭಾರತದ ‘ಉತ್ತಮ ನಟ’ನ ಬಗ್ಗೆ ಸತ್ಯವನ್ನೇ ಹೇಳಿದ್ದಾರೆ : ಜಿಗ್ನೇಶ್ ಮೇವಾನಿ

ವರದಿಗಾರ (ಜ 19 ) : ದಲಿತ ಚಳವಳಿಯ ನಾಯಕ ಹಾಗೂ ಗುಜರಾತಿನ ವಡ್ಗಾಂವ್ ಕ್ಷೇತ್ರದ ಶಾಸಕ ಜಿಗ್ನೇಷ್ ಮೇವಾನಿ ಪ್ರಧಾನಿ ನರೇಂದ್ರ ಮೋದಿಯ ವಿರುದ್ಧ ತನ್ನ ತೀಕ್ಷ್ಣ ವಾಗ್ದಾಳಿಗಳನ್ನು ಮುಂದುವರಿಸಿದ್ದು, ಬಹುಭಾಷಾ ನಟ ಪ್ರಕಾಶ್ ರೈಯವರು ಓರ್ವ ‘ರಿಯಲ್ ಸಿಂಗಂ’ ಎಂದು ಬಣ್ಣಿಸಿದ್ದಾರೆ. ಅವರು ಇತ್ತೀಚೆಗಿನ ‘ಇಂಡಿಯಾ ಟುಡೇ’ ಕಾರ್ಯಕ್ರಮದಲ್ಲಿ ಪ್ರಧಾನಿ ಮತ್ತು ಇತರರ ಬಗ್ಗೆ ಹೇಳಿದ ಮಾತುಗಳು ನೈಜತೆಯಿಂದ ಕೂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಭಾರತದ ‘ರಿಯಲ್ ನಟ’ ಎಂದು ಉಲ್ಲೇಖಿಸಿ ಟ್ವೀಟ್ ಮಾಡಿದ್ದಾರೆ.

ಪ್ರಕಾಶ್ ರೈ ಯವರು ಇತ್ತೀಚೆಗೆ ‘ಇಂಡಿಯಾ ಟುಡೇ ಕಾಂಕ್ಲೇವ್’ ವಿಶೇಷ ಕಾರ್ಯಕ್ರಮದ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಆ ವೇಳೆ ಅವರು, ನನ್ನನ್ನು ‘ಹಿಂದೂ ವಿರೋಧಿ’ ಎನ್ನುತ್ತಾರೆ. ಆದರೆ ಒಂದು ಸಮುದಾಯವನ್ನೇ ಇಲ್ಲವಾಗಿಸಲು ಪ್ರಯತ್ನಿಸುತ್ತಿರುವವರು ಹಿಂದೂಗಳೇ ಅಲ್ಲವೆಂದು ನರೇಂದ್ರ ಮೋದಿ, ಅನಂತಕುಮಾರ್ ಹೆಗ್ಡೆ, ಅಮಿತ್ ಶಾರ ಹೆಸರನ್ನು ಉಲ್ಲೇಖಿಸಿ ಹೇಳಿದ್ದರು. ಜಿಗ್ನೇಶ್ ಮೇವಾನಿ, ಪ್ರಕಾಶ್ ರೈಯವರ ಹೇಳಿಕೆಗೆ ಬೆಂಬಲವಾಗಿ ನಿಂತು, ಪ್ರಕಾಶ್ ರೈ ಯವರು ಓರ್ವ ‘ರಿಯಲ್ ಸಿಂಗಂ’ ಎಂದು ಶಹಬ್ಬಾಶ್ ಗಿರಿ ನೀಡಿದ್ದಾರೆ. ನಾನು ಕಾಂಗ್ರೆಸ್ ಸರ್ಕಾರದಿಂದ ಸೈಟ್ ಪಡೆದುಕೊಂಡಿದ್ದೇನೆಂದು ಪುಕಾರು ಹಬ್ಬಿಸುವವರು, ಪಂಚ ಭಾಷೆಗಳಲ್ಲಿ 300 ಕ್ಕೂ ಹೆಚ್ಚು ಸಿನೆಮಾಗಳಲ್ಲಿ ಅಭಿನಯಿಸಿರುವ ನನ್ನೊಂದಿಗೆ ಇರುವ ಸಂಪತ್ತಿನ ಕುರಿತು ಯೋಚಿಸುವುದಿಲ್ಲ. ನಾನು 6 ಎಕರೆಗಳನ್ನು ವಿನಿಯೋಗಿಸಿ ಒಂದು ಗ್ರಾಮವನ್ನೇ ದತ್ತು ತೆಗೆದುಕೊಂಡಿದ್ದೇನೆ. ಎರಡು ಎಕರೆಗಳನ್ನು ಒಂದು ಸಮುದಾಯ ಭವನವನ್ನು ನಿರ್ಮಿಸಲು ಕೊಟ್ಟಿದ್ದೇನೆ. ಆದರೆ ನನ್ನನ್ನು ವಿರೋಧಿಸುವವರು ಜುಜುಬಿ ಒಂದು ಸೈಟ್ ಬಗ್ಗೆ ಮಾತನಾಡುತ್ತಿರುವುದು ಹಾಸ್ಯಾಸ್ಪದ ಎಂದು ಪ್ರಕಾಶ್ ರೈ ಕಾರ್ಯಕ್ರಮದಲ್ಲಿ ಹೇಳಿದ್ದರು.

Click to comment

Leave a Reply

Your email address will not be published. Required fields are marked *

To Top
error: Content is protected !!
WhatsApp chat Join our WhatsApp group