ಸಾಮಾಜಿಕ ತಾಣ

ಸಿದ್ದು ಆತ್ಮೀಯತೆಯನ್ನು ನೀಚವಾಗಿ ಬಿಂಬಿಸಿದ ಬಿಜೆಪಿ ನೇತಾರ; ಐಟಿ ಸೆಲ್ ‘ಚೀಫ್’ ನ ಚೀಪ್ ಗಿಮಿಕ್!!

ರಾಜಕೀಯ ಪಕ್ಷಗಳು ಪರಸ್ಪರ ಕೆಸರೆರಚಿಕೊಳ್ಳುವುದು ಸಾಮಾನ್ಯ. ಆದರೆ ಅದಕ್ಕೂ ಒಂದು ಮಿತಿಯಿದೆಯಲ್ಲವೇ? ಟೀಕೆ, ವಿಮರ್ಶೆಗಳು ಆರೋಗ್ಯಕರವಾಗಿದ್ದರೆ ಉತ್ತಮ. ಪ್ರಜಾಪ್ರಭುತ್ವದಲ್ಲಿ ರಾಜಕಾರಣಿಗಳ ಅರೋಗ್ಯಕರ ಚರ್ಚೆ, ಟೀಕೆ, ವಿಮರ್ಶೆಗಳು ಸಾರ್ವಜನಿಕರಿಗೆ ಪ್ರಜಾಪ್ರಭುತ್ವದ ಮೇಲಿರುವ ಗೌರವವನ್ನು ಹೆಚ್ಚುವಂತೆ ಮಾಡುತ್ತದೆ. ಆದರೆ, ಇನ್ನೊಬ್ಬರನ್ನು ಟೀಕಿಸುವ ಭರದಲ್ಲಿ ರಾಜಕೀಯ ಪಕ್ಷದ ಪದಾಧಿಕಾರಿಗಳು ಅತ್ಯಂತ ನೀಚ ಮಟ್ಟಕ್ಕೆ ಇಳಿದರೆ ಹೇಗೆ??

ಹೌದು, ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಈ ರೀತಿಯ ಕೊಳಕು ಮನೋಸ್ಥಿತಿಯನ್ನು ಪ್ರದರ್ಶಿಸಿದ್ದಾರೆ. ಕೇಂದ್ರದಲ್ಲಿ ಆಡಳಿತದಲ್ಲಿರುವ ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಜನವರಿ 9ರಂದು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯರ ಅತ್ಮೀಯತೆಯನ್ನು ಎತ್ತಿ ತೋರಿಸುತ್ತಿರುವ ವೀಡಿಯೋ ಹಾಕಿ ನೀಚ ರೀತಿಯಲ್ಲಿ ಬಿಂಬಿಸುವ ಪ್ರಯತ್ನ ಮಾಡಿ ತನ್ನ ಕೈ ಸುಟ್ಟುಕೊಂಡಿದ್ದಾರೆ. ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರ ಜೊತೆ ಸೆಲ್ಫೀ ತೆಗೆಯಲು ಪ್ರಯತ್ನಿಸುತ್ತಿದ್ದ ಯುವತಿಯ ಕೈ ಹಿಡಿದು ಮುಖ್ಯಮಂತ್ರಿಯವರು ತನ್ನ ಬಳಿ ನಿಂತು ಸೆಲ್ಫೀ ತೆಗೆಯಲು ಅನುಮತಿಸಿದ್ದರು. ವೀಡಿಯೋ ನೋಡಿದರೆ ನೀವೇ ಅರ್ಥಮಾಡಿಕೊಳ್ಳಬಹುದು.

ಈ ವಿಡಿಯೋ ಟ್ವೀಟ್ ಮಾಡಿದ ಅಮಿತ್ ಮಾಳವೀಯ, “ಸಿದ್ದರಾಮಯ್ಯರು ಆ ಯುವತಿಯ ಮೈಯಿಂದ ಕೈ ತೆಗೆಯಬಹುದೇ” ಎಂದು ಪ್ರಶ್ನಿಸಿದ್ದರು. ಆತನ ಬೆಂಬಲಿಗರು ಅದನ್ನು ರಿಟ್ವೀಟ್ ಮಾಡಿ, ಅದೇ ಭಾಷೆಯಲ್ಲಿ ಕಮೆಂಟ್ ಹಾಕಿ ಆನಂದಿಸಿದರೂ, ಪ್ರಜ್ಞಾವಂತರು ಈ ಟ್ವೀಟ್ ಡಿಲೀಟ್ ಮಾಡಿ ಮುಖ್ಯಮಂತ್ರಿಯವರಲ್ಲಿ ಕ್ಷಮೆ ಕೇಳಬೇಕೆಂದು ಹೇಳಿದ್ದಾರೆ. ಸದನದಲ್ಲಿ ಅಶ್ಲೀಲ ಚಿತ್ರ ವೀಕ್ಷಿಸಿದ ಶಾಸಕರು, ಅತ್ಯಾಚಾರ, ಕಿರುಕುಳ ನೀಡಿರುವ ಶಾಸಕ, ಸಂಸದರನ್ನು ಹೊಂದಿರುವ ಪಕ್ಷದ ಪದಾಧಿಕಾರಿಯೊಬ್ಬನಿಂದ ಇದನ್ನಲ್ಲದೇ ಇನ್ನೇನು ನಿರೀಕ್ಷಿಸಬಹುದು ಎಂದು ಇನ್ನು ಕೆಲವರು ಕಿಡಿಕಾರಿದರು. ಕಾಮಾಲೆ ರೋಗಿಗಳಿಗೆ ಜಗತ್ತೇ ಹಳದಿ ಎಂದೂ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಆಡಿಕೊಂಡಿದ್ದಾರೆ.
ಒಟ್ಟಿನಲ್ಲಿ ಬೆಂಬಲಿಗರು ಮಾತ್ರವಲ್ಲದೇ ವಿರೋಧಿಗಳ ಮನಸ್ಸನ್ನೂ ಗೆದ್ದಿರುವ ಜನಪರ ಮುಖ್ಯಮಂತ್ರಿಯೋರ್ವರನ್ನು ಈ ರೀತಿ ನೀಚ ರೀತಿಯಲ್ಲಿ ಬಿಂಬಿಸಲು ಪ್ರಯತ್ನಿಸಿದ ಬಿಜೆಪಿಯ ಐಟಿ ಸೆಲ್ ನ ರಾಷ್ಟ್ರೀಯ ಮುಖ್ಯಸ್ಥನಿಗೆ, ಇದೀಗ ಸಿದ್ದರಾಮಯ್ಯರಿಗೆ ಜನರ ಮನಸ್ಸಿನಲ್ಲಿರುವ ಪ್ರೀತಿ ಹಾಗೂ ಗೌರವ ತಿಳಿದಿರಬಹುದು.

To Top
error: Content is protected !!
WhatsApp chat Join our WhatsApp group