ಜಿಲ್ಲಾ ಸುದ್ದಿ

ಮಂಗಳೂರು : ತನ್ನ ಮೇಲೆ ತಲವಾರು ದಾಳಿ ಎಂದು ಕೋಮುಗಲಭೆ ನಡೆಸಲು ನೋಡಿ ಸಿಕ್ಕಿ ಬಿದ್ದ ಹಿಂದೂ ಜಾಗರಣಾ ವೇದಿಕೆ ಮುಖಂಡ !!

ವರದಿಗಾರ (ಜ 10 ) : ದಕ್ಷಿಣ ಕನ್ನಡ ಇತ್ತೀಚೆಗೆ ಕೆಲವೊಂದು ಕೋಮು ವಿಚಾರಗಳಿಗೆ ಸುದ್ದಿಯಾಗಿತ್ತು. ಆದರೆ ಈ ಎಲ್ಲಾ ಕೋಮು ಷಡ್ಯಂತ್ರಗಳ ಹಿಂದಿರುವವರು ಯಾರೆಂದು ಪೊಲೀಸರಿಗೂ ತಲೆನೋವಿನ ವಿಚಾರವಾಗಿತ್ತು. ಅದಕ್ಕೆಲ್ಲಾ ಉತ್ತರವೆಂಬಂತೆ ಸುರತ್ಕಲ್ ಘಟಕದ ಹಿಂದೂ ಜಾಗರಣಾ ವೇದಿಕೆಯ ಸಹ ಸಂಚಾಲಕನೋರ್ವ ತನ್ನ ಮೇಲೆ ನಾಲ್ಕು ಮಂದಿ ತಲವಾರು ದಾಳಿ ನಡೆಸಿ ಕೊಲ್ಲಲು ನೋಡಿದ್ದರು ಎಂಬ ದೂರು ಕೇವಲ ಕಟ್ಟುಕತೆಯಾಗಿದ್ದು, ಸಮಾಜದಲ್ಲಿ ಅಶಾಂತಿ ನಿರ್ಮಿಸಲು ನೋಡುವವರ ಕೃತ್ಯವಾಗಿದೆ ಎಂದು ಖುದ್ದು ಪೊಲೀಸ್ ಕಮಿಷನರ್ ಟಿ ಆರ್ ಸುರೇಶ್ ಬಹಿರಂಗಪಡಿಸಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಆಗಾಗ ಮೂಡುವ ಅಶಾಂತಿಯ ಮೂಲವೊಂದು ಬಹಿರಂಗಗೊಂಡಂತಾಗಿದೆ.

ಮಂಗಳೂರಿನ ಹೊರವಲಯದ ಸುರತ್ಕಲ್ ಎಂಬಲ್ಲಿ ತಾನು ಜನವರಿ 8 ರಂದು ರಾತ್ರಿ 7.45 ರ ವೇಳೆಗೆ ಬೈಕಿನಲ್ಲಿ ಹೋಗುತ್ತಿರುವಾಗ ನಾಲ್ಕು ಮಂದಿ ದುಷ್ಕರ್ಮಿಗಳು ತನ್ನ ಮೇಲೆ ತಲವಾರು ದಾಳಿ ಮಾಡಲು ಬಂದಿದ್ದರು. ನಾನು ಓಡಿ ಪಕ್ಕದ ಮನೆಯೊಂದರಲ್ಲಿ ಆಶ್ರಯ ಪಡೆದು ತಪ್ಪಿಸಿಕೊಂಡೆ ಎಂದು ಹಿಂದೂ ಜಾಗರಣಾ ವೇದಿಕೆಯ ಸ್ಥಳೀಯ ಮುಖಂಡ ಭರತ್ ರಾಜ್ ಅದೇ ದಿನ ರಾತ್ರಿ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ.

ಮೊದಲು ನಾಲ್ವರು ತನ್ನ ಮೇಲೆ ದಾಳಿ ಮಾಡಿದ್ದೆಂದೂ, ಅವರಲ್ಲಿ ಮೂವರ ಬಳಿ ತಲವಾರು ಇದ್ದುದಾಗಿಯೂ, ಓರ್ವ ಬೂದು ಬಣ್ಣದ ಟಿ ಶರ್ಟ್ ಶರ್ಟ್ ಧರಿಸಿದ್ದಾಗಿಯೂ ಇನ್ನೋರ್ವ ಪ್ಯಾಂಟ್ ಹಾಗೂ ಶರ್ಟ್ ಧರಿಸಿದ್ದಾಗಿಯೂ, ಓರ್ವನನ್ನು ಸ್ಪಷ್ಟವಾಗಿ ನೋಡಿದ್ದಾಗಿಯೂ ದೂರು ನೀಡಿದ್ದ. ಆದರೆ ಖುದ್ದು ಕಮಿಷನರ್ ಸುರೇಶ್ ರವರು ಸ್ಥಳಕ್ಕೆ ಧಾವಿಸಿ ಭರತ್ ರಾಜ್ ನ ವಿಚಾರಣೆ ನಡೆಸಿದಾಗ, ನಾನು ಒಬ್ಬನ ಬಳಿ ತಲವಾರು ಇದ್ದುದನ್ನು ನೋಡಿದೆ ಎಂದು ಯೂ ಟರ್ನ್ ಹೊಡೆದಿದ್ದ. ಸ್ಥಳದಲ್ಲಿ ಇರುವ ದಟ್ಟ ಕತ್ತಲಿನಲ್ಲಿ ದುಷ್ಕರ್ಮಿಗಳ ಮುಖಚಹರೆ ನೋಡುವುದಾಗಲೀ ಅಥವಾ ಅವರು ಧರಿಸಿದ್ದ ಬಟ್ಟೆಯ ಬಣ್ಣ ಗುರುತಿಸುವುದಾಗಲೀ ಸಾಧ್ಯವಿರಲಿಲ್ಲ. ಈ ಕುರಿತು ಭರತ್ ನಲ್ಲಿ ಪ್ರಶ್ನಿಸಿದಾಗ ಉತ್ತರವಿಲ್ಲದೆ ತಬ್ಬಿಬ್ಬಾಗಿದ್ದ. ಮಾತ್ರವಲ್ಲ ಘಟನೆ ನಡೆದ ಸ್ಥಳದಲ್ಲೇ ತನ್ನ ಮಿತ್ರ ಮಹೇಂದ್ರ ಎಂಬವರ ಮನೆ ಇದ್ದರೂ ಅದನ್ನು ದಾಟಿಕೊಂಡು ಇನ್ನೊಂದು ಮನೆಯಲ್ಲಿ ಆಶ್ರಯ ಪಡೆದದ್ದೇಕೆ ಎಂದು ಪೊಲೀಸರು ಕೇಳಿದ್ದಾಗ, ಮಹೇಂದ್ರರ ಮನೆಯಲ್ಲಿ ಯಾರೂ ಇರಲಿಲ್ಲವೆಂದು ಹೇಳಿದ್ದ. ಆದರೆ ಪೊಲೀಸರು ಹೋಗಿ ನೋಡಿದಾಗ ಮಹೇಂದ್ರರವರು ಮನೆಯಲ್ಲೇ ಇದ್ದುದು ಕಂಡು ಬಂದಿತ್ತು.

ಪೊಲೀಸರ ವಿಚಾರಣೆ ಸರಿಯಾದ ದಿಕ್ಕಿನಲ್ಲಿ ಸಾಗಿ, ತನ್ನ ಕಟ್ಟುಕಥೆ ತನಗೇ ಮುಳುವಾಗುತ್ತಿರುವುದನ್ನು ಅರಿತ ದುಷ್ಕರ್ಮಿ ಭರತ್ ಕೂಡಲೇ ಅಲ್ಲಿಂದ ಪಲಾಯನ ಮಾಡಿದ್ದಾನೆ. ಮತ್ತೊಮ್ಮೆ ಆತನ ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ ಕಮಿಷನರ್ ಸಂಬಂಧಪಟ್ಟ ಪೊಲೀಸರಿಗೆ ಆದೇಶ ನೀಡಿದ್ದಾರೆ.

ಸುಳ್ಳು ಸುದ್ದಿ ನೀಡಿ ಜಿಲ್ಲೆಯ ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಪ್ರಯತ್ನ ಮಾಡಿದ್ದ ಭರತ್ ನ ಮೇಲೆ ಪೊಲೀಸರು ಪ್ರಕರಣ ದಾಖಲಿಸಿ ಕೂಡಲೇ ಕಠಿಣ ಕ್ರಮಗಳನ್ನು ಜರುಗಿಸಬೇಕಾಗಿದೆ. ಇದನ್ನು ಮಾಡಿದರೆ ಪ್ರದೇಶದಲ್ಲಿ ಶಾಂತಿ ಮರುಸ್ಥಾಪಿಸುವ ಹಾಗೂ ಶಾಂತಿ ಕದಡುವ ದುಷ್ಕರ್ಮಿಗಳಿಗೆ ಸ್ಪಷ್ಟ ಸಂದೇಶ ನೀಡಿದಂತಾಗಿವುದು ಎಂದು ಸ್ಥಳೀಯರ ಅಭಿಪ್ರಾಯವಾಗಿದೆ. ಹಿಂದೂ ಜಾಗರಣಾ ವೇದಿಕೆಯ ಭರತ್,  ಸುರತ್ಕಲ್ ಪೊಲೀಸ್ ಠಾಣೆಯ ರೌಡಿ ಪಟ್ಟಿಯಲ್ಲಿದ್ದಾನೆ. ಈತನ ವಿರುದ್ಧ ಐದು ಕ್ರಿಮಿನಲ್ ಪ್ರಕರಣಗಳು ಬಾಕಿ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

To Top
error: Content is protected !!
WhatsApp chat Join our WhatsApp group