ರಾಜ್ಯ ಸುದ್ದಿ

ತನ್ನ ರಾಜ್ಯದ ಜನರು ಚಳಿಗೆ ಸಾವನ್ನಪ್ಪುತ್ತಿರುವಾಗ ಯೋಗಿ ಆದಿತ್ಯನಾಥ್ ಸರಕಾರಿ ಕಟ್ಟಡಗಳಿಗೆ ಕೇಸರಿ ಬಣ್ಣ ಬಳಿಯುವುದರಲ್ಲಿ ನಿರತರಾಗಿದ್ದಾರೆ : ಅಬ್ದುಲ್ ಮಜೀದ್

ವರದಿಗಾರ (ಜ 8 ) : ಉತ್ತರಪ್ರದೇಶದಲ್ಲಿ ಕಳೆದೆರಡು ದಿನಗಳಲ್ಲಿ ನೂರಕ್ಕೂ ಹೆಚ್ಚು ಜನರು ತೀವ್ರ ತರದ ಚಳಿಗೆ ಸಾವನ್ನಪ್ಪಿರುವ ವರದಿ ಬಂದಿರುವ ಬೆನ್ನಲ್ಲೇ ಟ್ವಿಟ್ಟರಿನಲ್ಲಿ ಅದಕ್ಕೆ ಪ್ರತಿಕ್ರಿಯಿಸಿರುವ ಎಸ್ ಡಿ ಪಿ ಐ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ರವರು, ‘ರಾಜ್ಯದ ವಿವಿಧ ಭಾಗಗಳಲ್ಲಿ ವೃದ್ಧರು, ವಸತಿರಹಿತರು, ಸ್ಲಂ ಹಾಗೂ ಫುಟ್ ಪಾತಿನಲ್ಲಿ ವಾಸಿಸುವ ನೂರಕ್ಕೂ ಅಧಿಕ ಮಂದಿ ಚಳಿಗೆ ಮೃತಪಟ್ಟಿದ್ದಾರೆ. ಆದರೆ ರಾಜ್ಯದ ಬಡವರ ಬಗ್ಗೆ ಕಾಳಜಿ ವಹಿಸದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಲ್ಲಿನ ಸರಕಾರಿ ಕಟ್ಟಡಗಳಿಗೆ, ಮದ್ರಸಗಳಿಗೆ ಹಾಗೂ ಹಜ್ ಭವನಕ್ಕೆ ಕೇಸರಿ ಬಣ್ಣ ಬಳಿಯುವುದರಲ್ಲಿ ನಿರತರಾಗಿದ್ದಾರೆ’ ಎಂದು ಅಬ್ದುಲ್ ಮಜೀದ್ ರವರು ಖಾರವಾಗಿ ಟ್ವೀಟ್ ಮಾಡಿದ್ದಾರೆ.

ಇತ್ತೀಚೆಗೆ ಉತ್ತರ ಪ್ರದೇಶದ ಹಜ್ ಭವನಕ್ಕೆ ಕೇಸರಿ ಬಣ್ಣ ಬಳಿದದ್ದು ಸುದ್ದಿಯಾಗಿತ್ತು. ಆದರೆ ನಂತರ ಅದಕ್ಕೆ ಸ್ಪಷ್ಟೀಕರಣ ನೀಡಿದ್ದ ಸರಕಾರಿ ಅಧಿಕಾರಿಗಳು, ಅದು ಪೈಂಟಿಂಗ್ ಗುತ್ತಿಗೆದಾರನ ಪ್ರಮಾದದಿಂದಾಗಿ ಆಗಿರುವ ಆಚಾತುರ್ಯ ಎಂದು ಸಮಜಾಯಿಷಿಕೆ ನೀಡಿ ನಂತರ ಬಣ್ಣವನ್ನು ಬದಲಾಯಿಸಲಾಗಿತ್ತು.

ತನ್ನ ರಾಜ್ಯದಲ್ಲಿ ಬಡ ಜನರು ಬದುಕಲು ಹೆಣಗಾಡುತ್ತಿರುವಾಗ ಯೋಗಿ ಇತ್ತೀಚೆಗೆ ಬೆಂಗಳೂರಿಗೆ ಬಂದು ಅಭಿವೃದ್ಧಿಯ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರ ಕಾಲೆಳೆದಿದ್ದರು. ಅದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದ ಮುಖ್ಯಮಂತ್ರಿಯವರು, ಕರ್ನಾಟಕ ಅಭಿವೃದ್ಧಿಯಲ್ಲಿ ಪ್ರಥಮ ಸ್ಥಾನದಲ್ಲಿದೆ, ನಿಮ್ಮ ಉತ್ತರ ಪ್ರದೇಶ ಎಲ್ಲಿದೆ ಎಂದು ಒಮ್ಮೆ ನೋಡಿ ಎಂದು ಯೋಗಿಗೆ ಮರು ಉತ್ತರಿಸಿದ್ದರು. ಇದೀಗ ಅಬ್ದುಲ್ ಮಜೀದ್ ಕೂಡಾ ಯೋಗಿ ಆದಿತ್ಯನಾಥ್ ರವರು ತನ್ನ ರಾಜ್ಯದ ಬಡವರ ಉದ್ಧಾರವನ್ನು ಕಡೆಗಣಿಸಿ ತನ್ನ ಕೇಸರಿ ಪ್ರಚಾರದ ಅಜೆಂಡಾವನ್ನು ಪಾಲಿಸುತ್ತಿದ್ದಾರೆಂದು ಆರೋಪಿಸಿದ್ದಾರೆ.

To Top
error: Content is protected !!
WhatsApp chat Join our WhatsApp group