ರಾಜ್ಯ ಸುದ್ದಿ

ದೀಪಕ್ ರಾವ್ ಹತ್ಯೆಗೆ  ಸುಪಾರಿ ನೀಡಿದ್ದು ಬಿಜೆಪಿ ಕಾರ್ಪೋರೇಟರ್: ಕುಮಾರಸ್ವಾಮಿ ಆರೋಪ

ವರದಿಗಾರ (ಜ.8): ದಕ್ಷಿಣ ಕನ್ನಡ ಜಿಲ್ಲೆಯ ಕಾಟಿಪಳ್ಳದಲ್ಲಿ ಜನವರಿ 3ರಂದು ಮಧ್ಯಾಹ್ನ ದುಷ್ಕರ್ಮಿಗಳಿಂದ ಹತ್ಯೆಗೊಳಗಾದ ಬಜರಂಗದಳ ಕಾರ್ಯಕರ್ತರೆನ್ನಲಾದ ದೀಪಕ್ ರಾವ್ ಹತ್ಯೆಗೆ ಸುಪಾರಿಯನ್ನು ನೀಡಿದ್ದು ಭಾರತೀಯ ಜನತಾ ಪಾರ್ಟಿ (ಬಿಜೆಪಿ)ಯ ಸ್ಥಳೀಯ ಕಾರ್ಪೋರೇಟರ್ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.

ಅವರು ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ದೀಪಕ್ ರಾವ್ ಹತ್ಯೆ ಹಿಂದೆ ಸ್ಥಳೀಯ ಬಿಜೆಪಿ ಕಾರ್ಪೋರೇಟರ್ ಸುಪಾರಿ ನೀಡಿರುವುದು ನನಗೆ ಮಾಹಿತೆಯಿದೆ.

ಆದರೆ ಈ ಸತ್ಯಗಳೆಲ್ಲವನ್ನೂ ತನಿಖಾ ಸಂಸ್ಥೆಗಳ ಮೂಲಗಳಿಂದ ಮಾಹಿತಿ ಪಡೆದಿರುವ ಆಡಳಿತಾರೂಢ ಕಾಂಗ್ರೆಸ್ ಯಾಕಿನ್ನೂ ಮೌನವಾಗಿದೆಯೆನ್ನುವುದು ಜನರ ಸಂಶಯಗಳಿಗೆ ಕಾರಣವಾಗಿದೆ ಎಂದವರು ಇದೇ ವೇಳೆ ತಿಳಿಸಿದ್ದಾರೆ

To Top
error: Content is protected !!
WhatsApp chat Join our WhatsApp group