ರಾಜ್ಯ ಸುದ್ದಿ

ಹೆಣದ ಮೇಲೆ ರಾಜಕೀಯ ಮಾಡುವುದನ್ನು ನಿಲ್ಲಿಸಿ: ಸಿದ್ದರಾಮಯ್ಯ ಮನವಿ

ವರದಿಗಾರ (ಜ.7): ಮಾನವ ದ್ವೇಷಿಗಳಿಂದ ಕರಾವಳಿಯಲ್ಲಿ ಹತ್ಯೆಗಳು ನಡೆಯುತ್ತಿವೆ. ಬುದ್ದಿವಂತರ ಜಿಲ್ಲೆಯೆಂದು ಹೇಳಲಾಗುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲವರು ಹೆಣದ ಮೇಲೆ ರಾಜಕೀಯ ಮಾಡುತ್ತಿರುವುದನ್ನು ನಿಲ್ಲಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

ಅವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ಶಿಲಾನ್ಯಾಸಕ್ಕಾಗಿ ಬೆಳ್ತಂಗಡಿಗೆ ಆಗಮಿಸಿದ ಸಂದರ್ಭ ದುಷ್ಕರ್ಮಿಗಳ ಕೃತ್ಯಕ್ಕೆ ಬಲಿಯಾಗಿರುವ ದೀಪಕ್ ರಾವ್ ಮತ್ತು ಅಹ್ಮದ್ ಬಶೀರ್ ಘಟನೆಗೆ ಸಂಬಂಧಿಸಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಸಂದರ್ಭ ಮನವಿ ಮಾಡಿಕೊಂಡಿದ್ದಾರೆ.

ಕೋಮುವಾದಿಗಳಿಂದ ಹತ್ಯೆ ನಡೆದಿದೆ. ಇಂತಹ ಮಾನವ ವಿರೋಧಿ ಕೃತ್ಯಗಳು ಕರಾವಳಿಯಲ್ಲಿ ಮರುಕಳಿಸುತ್ತಿರುವುದು ಬೇಸರ ತಂದಿದೆ. ಸಮಾಜದಲ್ಲಿ ಸಾಮರಸ್ಯ ಮೂಡಬೇಕಿದೆ. ಇದಕ್ಕೆ ಎಲ್ಲರೂ ಕೈ ಜೋಡಿಸುವಂತೆ ಕೇಳಿಕೊಂಡರು.

ಸಂಘಪರಿವಾರದಿಂದಲೇ ಹಿಂದೂಗಳ ಹತ್ಯೆ: ರಮಾನಾಥ ರೈ
ಬೆಳ್ತಂಗಡಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಸಂದರ್ಭ ಜತೆಗಿದ್ದ ಅರಣ್ಯ ಸಚಿವ ರಮಾನಾಥ ರೈ, ‘ಸಂಘಪರಿವಾರದವರೇ ಹಿಂದೂಗಳ ಹತ್ಯೆ ಮಾಡಿದ್ದಾರೆ’ ಎಂದು ಮುಖ್ಯಮಂತ್ರಿ ಅವರ ಕಿವಿಯಲ್ಲಿ ಹೇಳುತ್ತಿರುವುದು ಕಂಡು ಬಂದಿದೆ.

To Top
error: Content is protected !!
WhatsApp chat Join our WhatsApp group