ರಾಷ್ಟ್ರೀಯ ಸುದ್ದಿ

ಬಿಜೆಪಿಯೊಂದಿಗಿನ ಮೈತ್ರಿಗಿಂತ ಸಾಮಾಜಿಕ ನ್ಯಾಯಕ್ಕಾಗಿ ಸುಖವಾಗಿ ಮರಣ ಹೊಂದುವುದೇ ಲೇಸು: ಲಾಲು ಪ್ರಸಾದ್

ಆರೆಸ್ಸೆಸ್ ಮತ್ತು ಬಿಜೆಪಿ ನನ್ನ ತಂದೆಯನ್ನು ಕಂಡರೆ ಭಯ ಪಡುತ್ತದೆ. ಹೀಗಾಗಿ ಕುತಂತ್ರದಿಂದ ಅವರನ್ನು ಜೈಲಿಗೆ ಸೇರಿಸಿದ್ದಾರೆ’.

ನನ್ನ ತಂದೆ ಬಿಜೆಪಿಯೊಂದಿಗೆ ಕೈಜೋಡಿಸಿದ್ದರೆ ಅವರನ್ನು ಸತ್ಯ ಹರಿಶ್ಚಂದ್ರರಂತೆ ಬಿಂಬಿಸುತ್ತಿದ್ದರು- ಮಗ ತೇಜಸ್ವಿ ಯಾದವ್‌

ವರದಿಗಾರ (ಜ.7): ಬಹುಕೋಟಿ ಮೇವು ಹಗರಣಕ್ಕೆ ಸಂಬಂಧಿಸಿದ ಎರಡನೇ ಪ್ರಕರಣದಲ್ಲಿ ಜೈಲು ಶಿಕ್ಷೆ ಪ್ರಕಟವಾದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಬಿಹಾರ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್‌ ಯಾದವ್‌, ಬಿಜೆಪಿಯೊಂದಿಗಿನ ಮೈತ್ರಿಗಿಂತ ಸಾಮಾಜಿಕ ನ್ಯಾಯಕ್ಕಾಗಿ ಸುಖವಾಗಿ ಮರಣ ಹೊಂದುವುದೇ ಲೇಸು ಎಂದು ಹೇಳಿಕೊಂಡಿದ್ದಾರೆ.

‘ನಮ್ಮನ್ನು ಅನುಸರಿಸಿ ಇಲ್ಲವೇ ನಿಮ್ಮನ್ನು ಒಳ ತಳ್ಳುತ್ತೇವೆ’ ಎಂಬ ಬಿಜೆಪಿಯ ಸರಳ ನಿಯಮವನ್ನು ಅಭ್ಯಸಿಸುವುದಕ್ಕಿಂತ   ‘ಸಾಮಾಜಿಕ ನ್ಯಾಯ, ಸಾಮರಸ್ಯ ಮತ್ತು ಸಮಾನತೆಗಾಗಿ ನಾನು ಸುಖವಾಗಿ ಮರಣ ಹೊಂದುತ್ತೇನೆ’ ಎಂದು ಬಿಜೆಪಿಗೆ ತಿರುಗೇಟು ನೀಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಲಾಲು ಪ್ರಸಾದ್ ಮಗ ತೇಜಸ್ವಿ ಯಾದವ್‌, ‘ತನ್ನ ತಂದೆಯ ವಿರುದ್ಧ ಬಿಜೆಪಿ ಷಡ್ಯಂತ್ರ ರೂಪಿಸಿ ಜೈಲಿಗೆ ಸೇರುವಂತೆ ಮಾಡಿದೆ. ಒಂದು ವೇಳೆ ನನ್ನ ತಂದೆ ಬಿಜೆಪಿಯೊಂದಿಗೆ ಕೈಜೋಡಿಸಿದ್ದರೆ ಅವರನ್ನು ಸತ್ಯ ಹರಿಶ್ಚಂದ್ರರಂತೆ ಬಿಂಬಿಸುತ್ತಿದ್ದರು. ಆರೆಸ್ಸೆಸ್ ಮತ್ತು ಬಿಜೆಪಿ ನನ್ನ ತಂದೆಯನ್ನು ಕಂಡರೆ ಭಯ ಪಡುತ್ತದೆ. ಹೀಗಾಗಿ ಇಂತಹ ಕುತಂತ್ರದಿಂದ ಅವರನ್ನು ಜೈಲಿಗೆ ಸೇರಿಸಿದ್ದಾರೆ’ ಆರೋಪಿಸಿದ್ದಾರೆ.

Click to comment

Leave a Reply

Your email address will not be published. Required fields are marked *

To Top
error: Content is protected !!