ಹನಿ ಸುದ್ದಿ

ಎಲ್ಲಾ ಜೀವವೂ ಅಮೂಲ್ಯ; ಕೋಮುಗಲಭೆಗೆ ಬಿಜೆಪಿಯೇ ಕಾರಣ, ಅವರು ಎಲ್ಲದಕ್ಕೂ ಹುಳಿ ಹಿಂಡುತ್ತಿದ್ದಾರೆ: ಸಿದ್ದರಾಮಯ್ಯ

ವರದಿಗಾರ (ಜ.4): ಮಂಗಳೂರಿನಲ್ಲಿ  ಹತ್ಯೆಯಂತಹ ಘಟನೆ ನಡೆಯಬಾರದಿತ್ತು, ಎಲ್ಲಾ ಜೀವವೂ ಅಮೂಲ್ಯ. ಸಮಾಜದಲ್ಲಿ ಕೋಮುಗಲಭೆ ನಡೆಯಲು ಬಿಜೆಪಿಯೇ ಕಾರಣ, ಅವರೇ ಎಲ್ಲದಕ್ಕೂ ಹುಳಿ ಹಿಂಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಅವರು ಹಾಸನದ ಅರಸೀಕೆರೆಯಲ್ಲಿ ಮಾತನಾಡುತ್ತಾ,  ಹಂತಕರಿಗೆ ಶಿಕ್ಷೆಯಾಗಬೇಕು, ದೀಪಕ್ ಹತ್ಯೆ ಪ್ರಕರಣದಲ್ಲಿ ಈಗಾಗಲೇ ನಾಲ್ವರನ್ನು ಬಂಧಿಸಲಾಗಿದ್ದು  ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

‘ಎಲ್ಲದಕ್ಕೂ ಗೃಹ ಸಚಿವರು ರಾಜೀನಾಮೆ ಕೊಡಲು ಆಗುವುದಿಲ್ಲ’ ಎಂದು ಬಿಜೆಪಿ ಟೀಕೆಗೆ ಅವರು ಪ್ರತಿಕ್ರಿಯಿಸಿದ್ದಾರೆ.

To Top
error: Content is protected !!
WhatsApp chat Join our WhatsApp group