ರಾಜ್ಯ ಸುದ್ದಿ

ನಟನೆಯನ್ನು ಪ್ರಧಾನಿ ಮೋದಿ  ಹಿಟ್ಲರ್ ನಿಂದ ಕಲಿತರೋ ಎಂಬ ಅನುಮಾನಿದೆ: ಸಾಹಿತಿ ಡಾ. ನಟರಾಜ ಹುಳಿಯಾರ್‌

ವರದಿಗಾರ (ಡಿ.31): ಪ್ರಭುತ್ವವನ್ನು ಟೀಕಿಸುವ ಭರದಲ್ಲಿ ಪ್ರಕಾಶ್ ರೈ, ‘ಪ್ರಧಾನಿ ನರೇಂದ್ರ ಮೋದಿ ನನಗಿಂತಲೂ ದೊಡ್ಡ ನಟ ಎನ್ನುವ ಮೂಲಕ ನಟರಿಗೆ ಅವಮಾನ ಮಾಡಿದ್ದಾರೆ. ನಟನಿಗೆ ಸಮಾಜದ ದುಃಖ ದುಮ್ಮಾನಗಳು ತಿಳಿದಿರಬೇಕು. ಆದರೆ, ಮೋದಿಯವರಿಗೆ ಇದ್ಯಾವುದೂ ಗೊತ್ತಿಲ್ಲ. ಹಾಗಾಗಿ ಅವರು ನಟನೆಯನ್ನು ಹಿಟ್ಲರ್‌ನಿಂದ ಕಲಿತರೊ ಏನೋ ಎಂಬ ಅನುಮಾನ ಬರುತ್ತದೆ’ ಎಂದು ಸಾಹಿತಿ ಡಾ.ನಟರಾಜ ಹುಳಿಯಾರ್‌ ವ್ಯಂಗ್ಯವಾಡಿದ್ದಾರೆ.

ಅವರು ಮೈಸೂರಿನ ರಂಗಾಯಣದಲ್ಲಿ ನಡೆಯುತ್ತಿದ್ದ ‘ನಿರಂತರ ರಂಗ ಉತ್ಸವ’ದ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಿದ್ದರು.

‘ಪ್ರಧಾನಿ ನರೇಂದ್ರ ಮೋದಿ ಅವರನ್ನು ನಟ ಪ್ರಕಾಶ್‌ ರೈ ಅವರು ನಟನಿಗೆ ಹೋಲಿಸಬಾರದಿತ್ತು. ಈ ಮೂಲಕ ನಟರಿಗೆ ಅವಮಾನ ಮಾಡಿದಂತಾಗಿದೆ’ ಎಂದೂ  ಅಭಿಪ್ರಾಯ‍‍ಟ್ಟಿದ್ದಾರೆ.

‘ನಟನಿಗೆ ಆತ್ಮ ವಿಮರ್ಶೆ ಮೊದಲ ಮಾನದಂಡವಾಗಬೇಕು. ಆತ್ಮ ವಿಮರ್ಶೆಯ ಅರ್ಥವೇ ಗೊತ್ತಿಲ್ಲದ ಮೋದಿ ಒಳ್ಳೆಯ ನಟನಾಗಲು ಹೇಗೆ ಸಾಧ್ಯ?’ ಎಂದು ಇದೇ ಸಂದರ್ಭದಲ್ಲಿ ಅವರು ಪ್ರಶ್ನಿಸಿದ್ದಾರೆ.

To Top
error: Content is protected !!
WhatsApp chat Join our WhatsApp group