ಸಾಮಾಜಿಕ ತಾಣ

ಯೋಗಿ ಆದಿತ್ಯನಾಥ್ ಪಾದ ಸ್ಪರ್ಷಿಸಿ ಗೌರವ ಸೂಚಿಸಿದ ಪತ್ರಕರ್ತ!!

ಅಧಿಕಾರದಲ್ಲಿರುವವರ ಕಾಲಿಗೆ ಬೀಳುವವರಿಂದ ನಿಷ್ಪಕ್ಷ ವರದಿಯನ್ನು ನಿರೀಕ್ಷಿಸಬಹುದೇ??

ಪತ್ರಕರ್ತನೋರ್ವನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರ ಪಾದವನ್ನು ಸ್ಪರ್ಷಿಸುತ್ತಿರುವ ವೀಡಿಯೋ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ಯೋಗಿ ಮೇಲಿರುವ ಕೇಸನ್ನು ಕೈಬಿಡಲು ಯೋಗಿ ಸರಕಾರವು ತೀರ್ಮಾನಿಸಿದ ಸುದ್ದಿಯನ್ನು ಬಿತ್ತರಿಸಿದ NDTV ಚಾನೆಲ್ ನ ವೀಡಿಯೋದಲ್ಲಿ ANI ಸುದ್ದಿ ಸಂಸ್ಥೆಯ ಪತ್ರಕರ್ತನೋರ್ವನು ಯೋಗಿ ಆದಿತ್ಯನಾಥ್ ರ ಪಾದ ಸ್ಪರ್ಷಿಸುತ್ತಿರುವುದು ಕಂಡುಬಂದಿದೆ.

ಯಾರೇ ಅಧಿಕಾರದಲ್ಲಿದ್ದರೂ ಮಾಧ್ಯಮಗಳು ಯಾವತ್ತೂ ವಿರೋಧ ಪಕ್ಷದಲ್ಲಿರಬೇಕೆಂದು ನಾವು ಕೇಳಿ ಬಂದಿದ್ದೇವೆ. ಆದರೆ, ಈ ರೀತಿ ರಾಜಕಾರಣಿಗಳ ಕಾಲಿಗೆ ಬೀಳುವವರಿಂದ ನಿಷ್ಪಕ್ಷ ವರದಿಯನ್ನು ನಿರೀಕ್ಷಿಸುವುದು ಸರಿಯೇ??

Click to comment

Leave a Reply

Your email address will not be published. Required fields are marked *

To Top
error: Content is protected !!
WhatsApp chat Join our WhatsApp group