ವರದಿಗಾರ ವಿಶೇಷ

ಗುಜರಾತ್: 26% ಶಾಸಕರು ಕ್ರಿಮಿನಲ್ ಆರೋಪಿಗಳು, 141 ಶಾಸಕರು ಕೋಟ್ಯಾಧಿಪತಿಗಳು!!

ವರದಿಗಾರ (29-12-2017): ಇತ್ತೀಚೆಗೆ ಹೊಸದಾಗಿ ಆಯ್ಕೆಯಾದ ಗುಜರಾತಿನ 182 ಸದಸ್ಯರನ್ನೊಳಗೊಂಡ ವಿಧಾನ ಸಭೆಯಲ್ಲಿ 26% ಸದಸ್ಯರು (47 ಶಾಸಕರು) ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿದ್ದಾರೆ. 18% ಶಾಸಕರು (32 ಶಾಸಕರು) ಕೊಲೆ ಹಾಗೂ ಕೊಲೆ ಯತ್ನಗಳಂತಹ ಗಂಭೀರ ಆರೋಪಗಳನ್ನೆದುರಿಸುತ್ತಿದ್ದಾರೆ ಎಂದು ಅಸೋಸಿಯೇಶನ್ ಫಾರ್ ಡೆಮೋಕ್ರೆಟಿಕ್ ರಿಫೊರ್ಮ್ಸ್ ಎಂಬ ಸಂಸ್ಥೆಯು ನಡೆಸಿದ ಅಧ್ಯಯನದಿಂದ ತಿಳಿದು ಬಂದಿದೆ.

ಗುಜರಾತ್ ನಲ್ಲಿ ಮತ್ತೆ ಅಧಿಕಾರಕ್ಕೇರಿದ ಬಿಜೆಪಿಯ 99 ಶಾಸಕರಲ್ಲಿ 18 ಶಾಸಕರ(18%) ವಿರುದ್ಧ ಕ್ರಿಮಿನಲ್ ಆರೋಪಗಳಿವೆ. 12 ಶಾಸಕರ (12%) ವಿರುದ್ಧ ಗಂಭೀರ ಕ್ರಿಮಿನಲ್ ಆರೋಪಗಳಿವೆ.

ಕಾಂಗ್ರೆಸ್ ನ 77 ಶಾಸಕರಲ್ಲಿ 25 (32%) ಶಾಸಕರ ಮೇಲೆ ಕ್ರಿಮಿನಲ್ ಆರೋಪಗಳಿವೆ. 17 (22%) ಶಾಸಕರ ವಿರುದ್ಧ ಗಂಭೀರ ಕ್ರಿಮಿನಲ್ ಆರೋಪಗಳಿವೆ.

141 ಶಾಸಕರು ಕೋಟ್ಯಾಧಿಪತಿಗಳು!!

ಈ ಬಾರಿಯ 182 ಸದಸ್ಯರ ಗುಜರಾತ್ ವಿಧಾನ ಸಭೆಯಲ್ಲಿ 141 ಶಾಸಕರು ಕೋಟ್ಯಾಧಿಪತಿಗಳಾಗಿದ್ದಾರೆ. ಬಿಜೆಪಿಯ 99 ಶಾಸಕರಲ್ಲಿ 84 (85%) ಹಾಗೂ ಕಾಂಗ್ರೆಸ್ ನ 77 ಶಾಸಕರಲ್ಲಿ 54 (70%) ಹಾಗೂ ಇತರ ಪಕ್ಷಗಳ ಮೂರು ಶಾಸಕರು ಒಂದು ಕೋಟಿಗಿಂತ ಹೆಚ್ಚು ಆಸ್ತಿಯನ್ನು ಘೋಷಿಸಿದ್ದಾರೆ.

ಕೃಪೆ: FactChecker

To Top
error: Content is protected !!
WhatsApp chat Join our WhatsApp group