ರಾಜ್ಯ ಸುದ್ದಿ

ರಾಷ್ಟ್ರಕವಿ ಕುವೆಂಪುರವರ ಹುಟ್ಟುಹಬ್ಬಕೆ ಗೂಗಲ್ ಗೌರವ !

ವರದಿಗಾರ (ಡಿ 29 ) : ಗೂಗಲ್ ಜಾಲತಾಣ ಇಂದು ರಾಷ್ಟ್ರಕವಿ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪರ 113 ನೇ ಜನ್ಮದಿನಾಚರಣೆಯ ಪ್ರಯುಕ್ತ, ತನ್ನ ತಾಣದ ಮುಖಪುಟದಲ್ಲಿ ಕುವೆಂಪುರವರ ಡೂಡಲ್ ನ್ನು ವಿನ್ಯಾಸಗೊಳಿಸಿ, ಶ್ರೇಷ್ಟ ಕವಿಗೆ ಸೂಕ್ತ ಗೌರವ ಸಲ್ಲಿಸಿದೆ. ಗೂಗಲ್ ತಾಣದ ಮುಖಪುಟದಲ್ಲಿ ಯಾವತ್ತೂ ತನ್ನ ಹೆಗ್ಗುರುತಾದ ಗೂಗಲ್ ವಿನ್ಯಾಸವನ್ನೇ ಹೆಚ್ಚಾಗಿ ಬಳಸಿಕೊಳ್ಳುತ್ತದೆ. ಹಾಗೆಯೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿರುವ ಶ್ರೇಷ್ಟ ವ್ಯಕ್ತಿಗಳ ಜನ್ಮ ದಿನ ಅಥವಾ ಯಾವುದಾದರೂ ವಿಶಿಷ್ಟ ದಿನಗಳ ನೆನಪಿಗಾಗಿ ಅದಕ್ಕೆ ತಕ್ಕುದಾದ ಡೂಡಲನ್ನು ವಿನ್ಯಾಸಗೊಳಿಸಿ ತನ್ನ ಮುಖಪುಟದಲ್ಲಿಡುವುದು ಇತ್ತೀಚೆಗೆ ನಡೆಸಿಕೊಂಡು ಬರಲಾಗುತ್ತಿದೆ. ಕುವೆಂಪುರವರಿಗೆ ಈ ಗೌರವ ಸಿಕ್ಕಿರುವುದು ನಿಜಕ್ಕೂ ಅದು ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ.

ಮಲೆನಾಡಿನ ಹಚ್ಚಹಸಿರು ಪರಿಸರ, ಕಾಜಾಣ, ಕವಿಶೈಲ, ಬಂಡೆ ಕಲ್ಲಿನ ಮೇಲೆ ಕುಳಿತಿರುವ ಕುವೆಂಪು ಅವರು ಬರೆಯುವುದರಲ್ಲಿ ಮಗ್ನರಾಗಿದ್ದಾರೆ. ಚಿತ್ರದ ಹಿಂಬದಿ ಕನ್ನಡದಲ್ಲಿ ಗೂಗಲ್‌ ಎಂದು ಬರೆಯಲಾಗಿದೆ.

ಕುವೆಂಪುರವರು 1904 ಡಿಸಂಬರ್ 29 ರಂದು ತೀರ್ಥಹಳ್ಳಿ ತಾಲೂಕಿನ ಕುಪ್ಪಳ್ಳಿಯಲ್ಲಿ ಹುಟ್ಟಿದ್ದರು. 1994 ರ ನವಂಬರ್ 11 ರಂದು ಇಹಲೋಕ ತ್ಯಜಿಸಿದ್ದರು. ಕುವೆಂಪುರವರಿಗೆ ಜ್ಞಾನಪೀಠ, ರಾಜ್ಯ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಪದ್ಮಭೂಷಣ, ಪಂಪ ಪ್ರಶಸ್ತಿ ಸೇರಿ ಅನೇಕ ಗೌರವಗಳು ಸಂದಿವೆ.

Click to comment

Leave a Reply

Your email address will not be published. Required fields are marked *

To Top
error: Content is protected !!
WhatsApp chat Join our WhatsApp group