ಜಿಲ್ಲಾ ಸುದ್ದಿ

ಅನಾಥ, ನಿರ್ಗತಿಕ ಮಕ್ಕಳೊಂದಿಗೆ ಕ್ರಿಸ್ಮಸ್ ಆಚರಿಸಿ ಮಾದರಿಯಾದ 92.7 ಬಿಗ್ ಎಫ್.ಎಂ

ವರದಿಗಾರ-ಬೆಂಗಳೂರು (ಡಿ.28): ಭಾರತದ ಪ್ರಸಿದ್ಧ ರೇಡಿಯೋ ನೆಟ್ ವರ್ಕ್ 92.7 ಬಿಗ್ ಎಫ್.ಎಂ, ಅನಾಥ ಮತ್ತು ನಿರ್ಗತಿಕ ಮಕ್ಕಳೊಂದಿಗೆ ಕ್ರಿಸ್ ಮಸ್ ಹಬ್ಬವನ್ನು ಆಚರಿಸಿ ಮಾದರಿಯಾಗಿದೆ.

ಕಳೆದ ವರ್ಷದಂತೆ ಈ ವರ್ಷವೂ ಹಲವು ವ್ಯಕ್ತಿಗಳಿಂದ ಉಡುಗೊರೆಗಳನ್ನು ಸಂಗ್ರಹಿಸಿದ ಬಿಗ್ ಎಫ್. ಎಂ., ಅವುಗಳನ್ನು ಅನಾಥ ಮತ್ತು ನಿರ್ಗತಿಕ ಮಕ್ಕಳಿಗೆ ನೀಡಿ ಮಕ್ಕಳ ಮುಖದಲ್ಲಿ ಸಂತೋಷ ಮೂಡಿಸುವಲ್ಲಿ ಯಶಸ್ವಿಯಾಯಿತು. 92.7 ಬಿಗ್ ಎಫ್.ಎಂ ಬೆಂಗಳೂರು ಮಿಲಾಪ್ ಫೌಂಡೇಶನ್ ಹಾಗೂ ಶಿಶುಮಂದಿರದೊಂದಿಗೆ ಕೈಜೋಡಿಸಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಒಟ್ಟು 6 ಮಂದಿಯ ತಂಡವೊಂದನ್ನು ರಚಿಸಿದ ಬಿಗ್ ಎಫ್.ಎಂ, ‘ಬಿಗ್ ಕಾಫಿ ಬ್ರಿಗೇಡ್’ ಹೆಸರಿನಲ್ಲಿ ಹಲವು ಕಡೆಗಳಿಂದ ಆಟಿಕೆಗಳನ್ನು ಮತ್ತು ಉಡುಗೊರೆಗಳನ್ನು ಸಂಗ್ರಹಿಸಿತ್ತು. ಸಾಮಾಜಿಕ ತಾಣಗಳ ಮೂಲಕವೂ ಈ ಕುರಿತು ಪ್ರಚಾರ ಮಾಡಿ, ಹಲವು ಉಡುಗೊರೆಗಳನ್ನು ಪಡೆದುಕೊಂಡು ಅದನ್ನು ಶಿಶುಮಂದಿರದಲ್ಲಿರುವ ಬಡ ಮಕ್ಕಳಿಗೆ ಹಸ್ತಾಂತರಿಸಲಾಯಿತು. ಶಿಶು ಮಂದಿರದಲ್ಲಿ ಬಡ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುತ್ತದೆ. ಅಲ್ಲದೇ ಬಿಗ್ ಕಾಫಿ ಬ್ರಿಗೇಡ್ ಸದಸ್ಯರು ಸಾಂತಾ ಕ್ಲಾಸ್ ವೇಷವನ್ನು ಧರಿಸಿ ಮಕ್ಕಳ ಮನರಂಜಿಸಿದರು. ನಗರದಲ್ಲಿ ಉಡುಗೊರೆಗಳನ್ನು ಸಂಗ್ರಹಿಸುವ ಜವಾಬ್ದಾರಿಯನ್ನು ಎಂ.ಜೆ ಶ್ರುತಿ ವಹಿಸಿಕೊಂಡಿದ್ದರು.

ಈ ಬಗ್ಗೆ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಎಂಜೆ ಶ್ರುತಿ, ನನಗೆ ನಿಜಕ್ಕೂ 92.7 ಬಿಗ್ ಎಫ್.ಎಂ. ಆಯೋಜಿಸಿದ ಈ ಮಹತ್ತರವಾದ ಕಾರ್ಯಕ್ರಮದ ಭಾಗವಾಗಲು ಸಾಧ್ಯವಾಗಿರುವುದಕ್ಕೆ ಹೆಮ್ಮೆಯಿದೆ ಎಂದಿದ್ಧಾರೆ.  ನಾವು ದೈನಂದಿನ ಬದುಕಿನಲ್ಲಿ ಹಲವರಿಗೆ ಸಹಾಯ ಮಾಡುತ್ತೇವೆ. ಅದೇ ರೀತಿ ಇಂತಹ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮುಕ್ತ ಮನಸ್ಸಿನಿಂದ ಆಟಿಕೆಗಳನ್ನು ಮತ್ತು ಉಡುಗೊರೆಗಳನ್ನು ನಿರ್ಗತಿಕ ಮಕ್ಕಳಿಗೆ ನೀಡುವ ಮೂಲಕ ಸಂತೋಷವನ್ನು ಮತ್ತು ಪ್ರೀತಿಯನ್ನು ಸಮಾಜದಲ್ಲಿ ಪಸರಿಸಬೇಕೆಂದು ಅವರು ಸಲಹೆ ನೀಡಿದರು. 

ಬಿಗ್ ಕಾಫಿ ಬ್ರಿಗೇಡ್ ನಲ್ಲಿ, ಮಂಜು ವಿಕಾಸ್ ಶಾಸ್ತ್ರಿ (ಮಾನವ ಸಂಪನ್ಮೂಲ ಅಧಿಕಾರಿ ಹಾಗೂ ಅಕ್ಷರಾ ಚಾರಿಟೇಬಲ್ ಟ್ರಸ್ಟ್ ನ ಸಂಚಾಲಕ), ಶರತ್ ಗೌಡ( ಕ್ಯಾಬ್ ಚಾಲಕ ಹಾಗೂ ಯುವಶಕ್ತಿ ರಕ್ತದಾನ ಬಳಗ ಸಂಚಾಲಕ), ಡಾ. ಪಿ.ಸಿ ತೇಜಸ್ವಿ, (ಲೇಸರ್ ನೇತ್ರ ಚಿಕಿತ್ಸಕ, ಲಕ್ಷ್ಮೀಕಾಂತ್ ಎ. ಪೂಜಾರ್, (ಹಿರಿಯ ಇಂಜಿನಿಯರ್ ಹಾಗೂ ಮಾತೃಭೂಮಿ ಟ್ರಸ್ಟ್ ಸಂಚಾಲಕರು), ವೀರು ಜಾಧವ್, (ಟೀಮ್ ಲೀಡರ್), ಮಂಜುನಾಥ ಸಲೇರು ( ಅಸಿಸ್ಟೆಂಟ್ ಮ್ಯಾನೇಜರ್ ) ಇನ್ನಿತರರು ಕಾರ್ಯ ನಿರ್ವಹಿಸಿದ್ದಾರೆ. 

ವರದಿ- ನರೇಶ್ ಬಂಡಾರಿ

Click to comment

Leave a Reply

Your email address will not be published. Required fields are marked *

To Top
error: Content is protected !!
WhatsApp chat Join our WhatsApp group