ಹನಿ ಸುದ್ದಿ

ಲೋಕಸಭೆ: ತ್ರಿವಳಿ ತಲಾಖ್ ವಿಧೇಯಕ ಮಂಡನೆಗೆ ತೀವ್ರ ವಿರೋಧ

ವರದಿಗಾರ (ಡಿ.28): ಲೋಕಸಭೆಯಲ್ಲಿಂದು ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ ತ್ರಿವಳಿ ತಲಾಖ್ ವಿಧೇಯಕವನ್ನು ಮಂಡಿಸಿದ್ದು, ಈ ಸಂದರ್ಭ ತ್ರಿವಳಿ ತಲಾಖ್ ವಿಧೇಯಕ ಮಂಡನೆಗೆ ವಿಪಕ್ಷಗಳಾದ ಟಿಎಂಸಿ ,ಬಿಜೆಡಿ, ಆರ್ ಜೆಡಿ , ಎಐಎಂಐಎಂ ತೀವ್ರ ವಿರೋಧ ವ್ಯಕ್ತಪಡಿಸಿತು.

ಎಐಎಂಐಎಂ ನಾಯಕ ಅಸ್ಸಾದುದ್ದೀನ್ ಓವೈಸಿ ಮಾತನಾಡುತ್ತಾ, ‘ವಿಧೇಯಕದಲ್ಲಿ ಮೂಲಭೂತ ಹಕ್ಕುಗಳಿಗೆ ಧಕ್ಕೆಯಾಗಿದೆ. ಬಿಲ್ ಜಾರಿಯಿಂದ ಮುಸ್ಲಿಂ ಮಹಿಳೆಯರಿಗೆ ಅನ್ಯಾಯವಾಗಲಿದೆ. ಅವರ ಹಕ್ಕುಗಳನ್ನು ಕಸಿದುಕೊಂಡಂತಾಗುತ್ತದೆ. ಈ ಸಂಬಂಧ ಮುಸ್ಲಿಂ ಸಮುದಾಯದವರ ಅಭಿಪ್ರಾಯ ಪಡೆದಿಲ್ಲ’ ಎಂದು ಆರೋಪಿಸಿದ್ದಾರೆ.

To Top
error: Content is protected !!
WhatsApp chat Join our WhatsApp group