ಮಾಹಿತಿ

ನಿಮ್ಮದು “O’ ಗುಂಪಿನ ರಕ್ತವೇ? ಹಾಗಾದರೆ ಎಚ್‌-ಆ್ಯಂಜಿಟನ್‌ ಪರೀಕ್ಷೆ ಮಾಡಿಸಿಕೊಳ್ಳಿ- ನಿಮ್ಮದು ಬಾಂಬೆ ರಕ್ತದ ಗುಂಪು ಆಗಿರಲೂಬಹುದು.!!!

ವರದಿಗಾರ-ಮಾಹಿತಿ: ಇದೇನು “ಬಾಂಬೆ ಬ್ಲಡ್ ‌” ಎಂದು ಆಶ್ಚರ್ಯವಾಗ್ತಾ ಇದೆಯಾ ?
ಆಶ್ಚರ್ಯ ಪಡಬೇಕಿಲ್ಲ. ಎ, ಬಿ, ಎಬಿ ಮತ್ತು ಓ ಪಾಸಿಟಿವ್‌ ಹಾಗೂ ನೆಗೆಟಿವ್‌ ರಕ್ತದ ಗುಂಪು ಇರುವಂತೆ ಬಾಂಬೆ ಬ್ಲಿಡ್‌ ಎಂಬ ರಕ್ತದ ಗುಂಪಿದೆ. ಆದರೆ, ಈ ಗುಂಪು ಬಹಳ ವಿರಳ.

ಪ್ರಸ್ತುತ ಲಭ್ಯವಿರುವ ಅಂಕಿ ಅಂಶಗಳ ಪ್ರಕಾರ ಕರ್ನಾಟಕದಲ್ಲಿ 75 ಮಂದಿ ಬಾಂಬೆ ಬ್ಲಡ್  ಗುಂಪಿನವರಿದ್ದಾರೆ. ನಮ್ಮದೇ ರಾಜ್ಯದ ಬೆಂಗಳೂರಿನಲ್ಲಿ 25 ಮಂದಿ ಬಾಂಬೆ ಬ್ಲಡ್ ಗುಂಪಿನವರಿದ್ದಾರೆ,  ದೇಶದಲ್ಲಿ ಹೆಚ್ಚಾಗಿ ಹೈದರಾಬಾದ್‌ ಮತ್ತು ಚೆನ್ನೈನಲ್ಲಿ ಈ ಗುಂಪಿನ ಮಂದಿ ಸಿಗುತ್ತಾರೆ. ರಕ್ತನಿಧಿಗಳಲ್ಲಿ ನೂತನ ತಂತ್ರಜ್ಞಾನದ ಸಮಸ್ಯೆಯಿಂದ ಪತ್ತೆ ಹಚ್ಚುವುದು ಸ್ವಲ್ಪ ಕಷ್ಟವಾದರೂ, ಇರುವ ತಂತ್ರಜ್ಞಾನವನ್ನೇ ಬಳಸಿ ಬಾಂಬೆ ರಕ್ತದ ಗುಂಪಿನವರನ್ನು ಪತ್ತೆ ಹಚ್ಚುವ ಕೆಲಸ ಮಾಡಲಾಗುತ್ತಿದೆ.

ಮೊದಲು ಈ ರಕ್ತದ ಮಾದರಿ ಪತ್ತೆಯಾಗಿದ್ದು ಮುಂಬೈಯಲ್ಲಿ. ಹಾಗಾಗಿ ಮುಂಬೈನ ಹಳೆಯ ಹೆಸರು ಬಾಂಬೆ ಬ್ಲಡ್ ಎಂದು ನಾಮಕರಣ ಮಾಡಲಾಗಿದೆ.
1952ರಲ್ಲಿ ಮುಂಬೈನಲ್ಲಿ ವೈ.ಆರ್‌. ಬೇಂಡೆ ಎಂಬುವವರು ಈ ರಕ್ತದ ಗುಂಪನ್ನು ಪತ್ತೆ ಮಾಡಿದರು. ಎ, ಬಿ, ಎಬಿ ಒ ರಕ್ತ ಗುಂಪಿನಲ್ಲಿ ಪಾಸಿಟಿವ್‌ ಮತ್ತು ನೆಗೆಟಿವ್‌ ಇದ್ದಂತೆ ಬಾಂಬೆ ಬ್ಲಿಡ್‌ನ‌ಲ್ಲೂ ಪಾಸಿಟಿವ್‌ ಮತ್ತು ನೆಗೆಟಿವ್‌ ಗುಂಪು ಇರುತ್ತದೆ.

ರಕ್ತದ ಕಣಗಳ ಆಧಾರದ ಮೇಲೆ ರಕ್ತದ ಗುಂಪನ್ನು ಗುರುತಿಸಲಾಗುತ್ತದೆ. ಎ ಗುಂಪಿನಲ್ಲಿ ಎ-ಆ್ಯಂಜಿಟನ್‌, ಬಿ ಗುಂಪಿನಲ್ಲಿ ಬಿ-ಆ್ಯಂಜಿಟನ್‌, ಎಬಿಯಲ್ಲಿ ಎಬಿ-ಆ್ಯಂಜಿಟನ್‌ ಮತ್ತು ಒ ಗುಂಪಿನಲ್ಲಿ ಎಚ್‌ ಆ್ಯಂಜಿಟನ್‌ ಇರುತ್ತದೆ. ಯಾವ ವ್ಯಕ್ತಿ ಒ ಗುಂಪಿನವರಾಗಿದ್ದು, ಅವರಲ್ಲಿ ಎಚ್‌-ಆ್ಯಂಜಿಟನ್‌ ಅಂಶ ಇರುವುದಿಲ್ಲವೋ ಅಂತಹವರು ಬಾಂಬೆ ಬ್ಲಿಡ್‌ ಗುಂಪಿನವರು ಎಂದು ಗುರುತಿಸಲಾಗುತ್ತದೆ.

ಯಾವುದೇ ವ್ಯಕ್ತಿಯು ರಕ್ತ ಪರೀಕ್ಷೆ ಮಾಡಿಸಿಕೊಂಡಾಗ “ಒ’ ರಕ್ತ ಗುಂಪು ಎಂದು ಕಂಡು ಬಂದಲ್ಲಿ ರಕ್ತನಿಧಿಯಾಗಲಿ ಅಥವಾ ಅಸ್ಪತ್ರೆಗಳು ಎಚ್‌-ಆ್ಯಂಜಿಟನ್‌ ಅಂಶ ಕಡ್ಡಾಯವಾಗಿ ಪರೀಕ್ಷೆ ಮಾಡಬೇಕು. ಆದರೆ ಕೆಲವೊಂದು ರಕ್ತನಿಧಿಗಳ ರಕ್ತ ಪರೀಕ್ಷಕರು  ನಿರ್ಲಕ್ಷ್ಯದಿಂದಾಗಿ ಪರೀಕ್ಷೆ ಮಾಡುವುದಿಲ್ಲ. ಹೀಗಾಗಿ ಬಾಂಬೆ ಬ್ಲಡ್‌ ಗುರುತಿಸುವುದು ಕಷ್ಟವಾಗಿ, ಅಗತ್ಯವಿರುವ ರೋಗಿಗಳಿಗೆ ಸರಿಯಾದ ಸಮಯದಲ್ಲಿ ರಕ್ತ ಸಿಗದೇ ಪರದಾಡುವಂತಾಗಿದೆ.

ಬಾಂಬೆ ಬ್ಲಡ್ ‌ ಗುಂಪಿನವರಿಗೆ ಅದೇ ಗುಂಪಿನ ರಕ್ತವನ್ನು ನೀಡಬೇಕು. ಅಕಸ್ಮಾತ್‌ “ಒ’ ಗುಂಪಿನವರು ರಕ್ತ ನೀಡಿದರೆ ಬಾಂಬೆ ಬ್ಲಡ್‌ ಗುಂಪಿನ ವ್ಯಕ್ತಿಗಳು ಅನಾರೋಗ್ಯಕ್ಕೊಳಗಾಗಲಿದ್ದರೆ. ಕೆಲವೊಮ್ಮೆ ವ್ಯಕ್ತಿಗಳು ಸಾಯುವ ಸಾಧ್ಯತೆಯೂ ಇದೆ. ಹೀಗಾಗಿ “ಒ’ ಗುಂಪಿನವರು ಎಚ್‌-ಆ್ಯಂಜಿಟನ್‌ ಅಂಶ ಇರುವ ಬಗ್ಗೆ ಪರೀಕ್ಷಿಸಿಕೊಳ್ಳುವುದು ಉತ್ತಮ

ಅತಿ ವಿರಳವಾಗಿರುವ ಬಾಂಬೆ ಬ್ಲಡ್  ಗುಂಪಿನ ರಕ್ತ ಹೊಂದಿರುವ ವ್ಯಕ್ತಿಗಳನ್ನು ಗುರುತಿಸುವ ಕೆಲಸ ಸಂಕಲ್ಪ ಇಂಡಿಯಾ ಫೌಂಡೇಶನ್‌ ಮಾಡುತ್ತಿದೆ. ಬಾಂಬೆ ಬ್ಲಡ್ ಗುಂಪಿನವರನ್ನು ಗುರುತಿಸಿ ರಕ್ತವನ್ನು ಸಂಗ್ರಹಿಸಿ, ಅಗತ್ಯ ಇರುವವರಿಗೆ ನೀಡಲಾಗುತ್ತಿದೆ. ಜನರಿಗೆ ಅರಿವಿನ ಕೊರತೆ ಇರುವ ಕಾರಣ ಬಾಂಬೆ ಬ್ಲಡ್‌ ಪತ್ತೆ ಹಚ್ಚುವ ಕೆಲಸ ಕಷ್ಟವಾಗುತ್ತಿದ್ದು, ಜನರಲ್ಲಿ ಸರ್ಕಾರ, ಸಂಘ ಸಂಸ್ಥೆಗಳು, ಎನ್‌ಜಿಓಗಳು ಅರಿವು ಮೂಡಿಸಬೇಕಾದ ಅಗತ್ಯ ಇದೆ,

ಬಾಂಬೆ ಗ್ರೂಪ್‌ ರಕ್ತದ ಮಾದರಿ ಇತರ ಯಾವುದೇ ರಕ್ತದ ಗುಂಪಿನೊಂದಿಗೆ ಬೇಕಾದರೂ ಹೊಂದಿಕೆಯಾಗುತ್ತದೆ. ಹೀಗಾಗಿ ಬಾಂಬೆ ರಕ್ತ ಗುಂಪಿನವರ ರಕ್ತವನ್ನು ಯಾವುದೇ ಇತರೆ ಗುಂಪಿನವರು ಪಡೆಯಬಹುದು. ಆದರೆ, ಬಾಂಬೆ ರಕ್ತ ಗುಂಪಿನವರು ಅತ್ಯಂತ ಕಡಿಮೆಯಿರುವುದರಿಂದ ಅಗತ್ಯ ಬಿದ್ದಾಗ ಕೊರತೆ ಉಂಟಾಗಬಹುದು ಎಂಬ ಕಾರಣಕ್ಕೆ ಇತರೆ ಗುಂಪಿನವರಿಗೆ ರಕ್ತ ನೀಡಬೇಡಿ ಎಂದು ವೈದ್ಯರೇ ಬಾಂಬೆ ರಕ್ತ ಗುಂಪಿನವವರಿಗೆ ಸಲಹೆ ನೀಡುತ್ತಾರೆ.

ರಕ್ತದಾನ ಮಾಡಿ, ಜೀವ ಉಳಿಸಿ

ಸಂಗ್ರಹ:-  ಅಲ್ತಾಫ್ ಬಿಳಗುಳ
ಸಂಸ್ಥಾಪಕರು, ಪೀಸ್ & ಅವೆರ್ನೆಸ್ ಟ್ರಸ್ಟ್ (ರಿ)

To Top
error: Content is protected !!
WhatsApp chat Join our WhatsApp group