ರಾಷ್ಟ್ರೀಯ ಸುದ್ದಿ

ತನ್ನ ಅಕ್ರಮ ಸಂಬಂಧವನ್ನು ಮರೆಮಾಚಲು ಮುಸ್ಲಿಂ ವ್ಯಕ್ತಿಯ ಹತ್ಯೆ: ಬಯಲಾದ ಹಿಂದುತ್ವವಾದಿ ‘ಹೀರೋ’ ಶಂಬೂಲಾಲ್ ನ ಅಸಲಿಯತ್ತು !

ವರದಿಗಾರ (ಡಿ 25 ) : ಯುವತಿಯೊಬ್ಬಳೊಂದಿಗೆ ತಾನು ಹೊಂದಿದ್ದ ಅಕ್ರಮ ಸಂಬಂಧವನ್ನು ಮರೆಮಾಚಲು ‘ಲವ್ ಜಿಹಾದ್’ ಎನ್ನುವ ಕಪೋಲಕಲ್ಪಿತ ಆರೋಪ ಹೊರಿಸಿ ಅಮಾಯಕ ವ್ಯಕ್ತಿಯನ್ನು ಕೊಂದು ಹಾಕಿ ತನ್ನ ಕುಟುಂಬ ಹಾಗೂ ಸ್ಥಳೀಯರಿಂದ ಬಚಾವಾಗಲು ಪ್ರಯತ್ನಿಸಿದೆನೆಂದು ರಾಜ್ ಸಮಂದ್ ನಲ್ಲಿ ವ್ಯಕ್ತಿಯೊಬ್ಬರನ್ನು ಕೊಂದು ಜೀವಂತ ಸುಟ್ಟು ಹಾಕಿದ ಭಯೋತ್ಪಾದಕ ಶಂಬೂಲಾಲ್ ತನಿಖೆಯ ವೇಳೆ ಒಪ್ಪಿಕೊಂಡಿದ್ದಾನೆ. ಅದಕ್ಕಾಗಿ ಬಹಳ ಸುಲಭದಲ್ಲಿ ಸಿಗಬಹುದಾದ ಮನೆ ಕಾಂಟ್ರಾಕ್ಟುದಾರನಾದ ಅಫ್ರಾಝುಲ್ ಅವರನ್ನೇ ನಾನು ಆಯ್ದುಕೊಂಡೆ ಎಂದು ಕಿರಾತಕ ಪೊಲೀಸರಲ್ಲಿ ಹೇಳಿಕೊಂಡಿದ್ದಾನೆ.

ಹಂತಕನು ತನ್ನ ಭಯಾನಕ ಕೃತ್ಯಕ್ಕೆ ಮುಂದೆ ಯಾವುದೇ ಹೊಸ ಕಥೆ ಕಟ್ಟದಂತೆ ತಡೆಯುವ ಉದ್ದೇಶದಿಂದ ಪೊಲಿಸರು ತನಿಖೆಯ ಕೆಲವೊಂದು ಬಹುಮುಖ್ಯ ಅಂಶಗಳನ್ನು ವೀಡಿಯೋ ಚಿತ್ರೀಕರಣ ಮಾಡಿದ್ದಾರೆ ಎಂದಿದ್ದಾರೆ.

‘ನಾವು ಆ ಹುಡುಗಿಯ ತಾಯಿಯನ್ನು ತನಿಖೆಗೊಳಪಡಿಸಿದ್ದೇವೆ. ಆಕೆಯ ಹೇಳಿಕೆಯನ್ನು ನಾವು ವೀಡಿಯೋ ಮಾಡಿದ್ದೇವೆ. ಅದರ ಪ್ರಕಾರ ಶಂಬೂಲಾಲ್ ಗೆ, ವ್ಯಕ್ತಿಯೋರ್ವನೊಂದಿಗೆ ಪಶ್ಚಿಮ ಬಂಗಾಳಕ್ಕೆ ಓಡಿ ಹೋಗಿದ್ದ ನಮ್ಮ ಮಗಳನ್ನು ಮರಳಿ ಕರೆ ತರುವಂತೆ ಹೇಳಿದ್ದೆವು. ಆದರೆ ಶಂಬೂಲಾಲ್ ಆಕೆಯನ್ನು ಕರೆತಂದು ರಾಜ್ ಸಮಂದ್ ನಲ್ಲಿ ಒಂದು ಬಾಡಿಗೆ ಮನೆಯಲ್ಲಿಟ್ಟಿದ್ದ. ಆದರೆ ಸಮಾಜಕ್ಕೆ ಹೆದರಿ ಈ ವಿಷಯವನ್ನು ನಾವು ಪೊಲೀಸರಿಗೆ ತಿಳಿಸಿರಲಿಲ್ಲ’ ಎಂದು ಆಕೆ  ತನಿಖೆಯ ವೇಳೆ ತಿಳಿಸಿದ್ದಾಳೆಂದು ಪೊಲೀಸರು ತಿಳಿಸಿದ್ದಾರೆ.

ಆದರೆ ಯುವತಿಯ ಕುಟುಂಬಿಕರು ಯಾವಾಗ ತನ್ನ ವಿರುದ್ಧ ಕೇಸು ದಾಖಲಿಸುವ ಕುರಿತು ಯೋಚಿಸಿದರೋ ಆಗ ಆತ ಕುಟುಂಬಿಕರ ಹಾಗೂ ಊರವರ ಮುಂದೆ ತನ್ನ ಮಾನ ಹರಾಜಾಗುವ ಕುರಿತು ಭಯಪಟ್ಟು, ಅವರ ಗಮನ ಬೇರೆಡೆಗೆ ಸೆಳೆಯಲು ‘ಲವ್ ಜಿಹಾದ್’ ನ ನಾಟಕವಾಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಯುವತಿಯನ್ನೂ ಕೂಡಾ ತನಿಖೆಗೊಳಪಡಿಸಿದ್ದು, ಆತ ಆಕೆಯೊಂದಿಗೆ 10 ತಿಂಗಳಿಂದ ಅಕ್ರಮ ಸಂಬಂಧ ಹೊಂದಿದ್ದ. ಪ್ರತಿ ದಿನ ಆಕೆಯೊಂದಿಗೆ ಜಗಳವಾಡುತ್ತಿದ್ದ ಎಂದು ಆಕೆ ತಿಳಿಸಿದ್ದಾಳೆಂದು ಪೊಲೀಸರು ತಿಳಿಸಿದ್ದಾರೆ.

ಕೆಲ ಪತ್ರಿಕೆಗೆಳಲ್ಲಿ ಆತ ಬೇರೆಯವರನ್ನು ಕೊಲ್ಲಲ್ಲು ಬಯಸಿದ್ದ, ಆದರೆ ಪ್ರಮಾದವಶಾತ್ ಅಫ್ರಾಝುಲ್ ನನ್ನು ಕೊಂದಿದ್ದಾನೆಂಬ ವರದಿ ಬಂದಿರುವ ಕುರಿತು ಉದಯಪುರ ಐಜಿಪಿ ಆನಂದ್ ಶ್ರೀವಾಸ್ತವರವರಲ್ಲಿ ಪ್ರಶ್ನಿಸಿದಾಗ, ಅಂತಹಾ ಯಾವುದೇ ಸಾಧ್ಯತೆಯನ್ನು ತಳ್ಳಿ ಹಾಕಿದ ಅವರು, ‘ಆತನಿಗೆ ತನ್ನ ಕೃತ್ಯವನ್ನು ಮರೆಮಾಚುವ ಇಚ್ಚೆ ಮಾತ್ರ ಇತ್ತು. ಅದಕ್ಕಾಗಿ ಆತ ಭಯಾನಕ ಕೃತ್ಯವೊಂದನ್ನು ಮಾಡಲು ಪಣ ತೊಟ್ಟಿದ್ದ. ಆ ಮೂಲಕ ಉಗ್ರಗಾಮಿ ಚಟುವಟಿಕೆಗಳಲ್ಲಿ ತೊಡಗಿರುವ ಕೆಲ ಮೂಲಭೂತವಾದಿ ಸಂಘಟನೆಗಳ ಅನುಕಂಪ ಪಡೆದು, ತಾನೊಬ್ಬ ‘ಹೀರೋ’ ಆಗಿ ಮೆರೆಯುವ ಕುರಿತು ಯೋಚಿಸಿದ್ದನಷ್ಟೇ’ ಎಂದವರು ತಿಳಿಸಿದರು. ಆತನಿಗೆ ಅಫ್ರಾಝುಲ್ ಓರ್ವ ಕಾಂಟ್ರಾಕ್ಟರ್ ಎನ್ನುವುದು ತಿಳಿದಿತ್ತು. ಘಟನೆ ನಡೆದ ದಿನ ಹಂತಕ ಶಂಬೂಲಾಲ್, ಅಫ್ರಾಝುಲ್ ರನ್ನು ತನ್ನ ಜಮೀನಿನಲ್ಲಿ ಮನೆ ಕೆಲಸ ಕಾರ್ಯದ ಬಗ್ಗೆ ಮಾತನಾಡುವುದಿದೆ ಎಂದು ಹೇಳಿಕೊಂಡು ಕರೆಸಿದ್ದಾನೆ. ಕೋರ್ಟ್ ಬಯಸಿದಾಗ ನಾವು ಚಿತ್ರೀಕರಿಸಿರುವ ವೀಡಿಯೊ ಹಾಗೂ ತನಿಖಾ ವಿವರಗಳನ್ನು ಸಲ್ಲಿಸುತ್ತೇವೆಂದು ಪೊಲಿಸರು ತಿಳಿಸಿದ್ದಾರೆ.

Click to comment

Leave a Reply

Your email address will not be published. Required fields are marked *

To Top
error: Content is protected !!
WhatsApp chat Join our WhatsApp group