ಸುತ್ತ-ಮುತ್ತ

ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಲು ಸಮಾಜಮುಖಿ ಕಾರ್ಯಕ್ರಮ ಅತ್ಯಗತ್ಯ : ವಿಟ್ಲದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಶಾಫೀ ಬೆಳ್ಳಾರೆ

ವರದಿಗಾರ (ಡಿ 23 ) : ಡಿ ಗ್ರೂಪ್ ವಿಟ್ಲ(R)  ಹಾಗೂ ಬ್ಲಡ್ ಡೋನರ್ಸ್ ಮಂಗಳೂರು ಜಂಟಿ ಆಶ್ರಯದಲ್ಲಿ ಕೆ.ಎಂ.ಸಿ ಆಸ್ಪತ್ರೆ ಇದರ ಸಹಯೋಗದೊಂದಿಗೆ ಬ್ರಹತ್ ರಕ್ತದಾನ ಶಿಬಿರವು ದಿನಾಂಕ  23/12/2017 ರಂದು ಶನಿವಾರ ಸಮಯ ಬೆಳಗ್ಗೆ 9 ರಿಂದ  ಮದ್ಯಾಹ್ನ 1 ರ ವರೆಗೆ  ವಿಟ್ಲದ  VH ಕಟ್ಟಡದಲ್ಲಿ ನಡೆಯಿತು‌.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಬಾಗವಹಿಸಿದ ಶಾಫೀ ಬೆಳ್ಳಾರೆ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರವಾದಿ ಮುಹಮ್ಮದ್ ಮುಸ್ತಫಾ  ಸ.ಅ ರವರು ನಮಗೆ ಕಲಿಸಿಕೊಟ್ಟ ಮಾದರಿಯಾಗಿದೆ ಸಮಾಜ ಸೇವೆ. ಈ ರೀತಿಯ ಸಮಾಜ ಸೇವೆ ಮಾಡುವುದರ ಮೂಲಕ ನಮಗೆ ಸಮಾಜದ ಮೇಲಿರುವ ಜವಬ್ದಾರಿಯನ್ನು ಪೂರ್ತಿಗೊಳಿಸಬೇಕಾದ ಅತ್ಯಗತ್ಯ ನಮ್ಮ ಮೇಲಿದೆ ಎಂದರು.

ಕಾರ್ಯಕ್ರಮವನ್ನು ಸ್ಥಳೀಯ ಗುರುಗಳಾದ ಹಕೀಂ ಹರ್ಶದಿ ದುಃಆ ದ ಮೂಲಕ ಉದ್ಘಾಟಿಸಿದರು.  ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಅಬ್ದುಲ್ ಸಮದ್ (President D Group Vittal) ವಿ ಎಚ್ ಅಶ್ರಫ್ (President Jumma Masjid Vittal) ಶುಹೈಬ್ ಮಂಗಳೂರು (Gen secretary youth congress DK) ಮಹಮ್ಮದ್ ಇಕ್ಬಾಲ್ ಹೋನೆಷ್ಟ್ (President minority wing Vittal block Congress) ಅಬೂಬಕರ್ ದುಬೈ (NRI member D Group Vittal) ಅಶ್ರಫ್ ತೈಬಾ (NRI Member D Group Vittal) ಸಿದ್ದೀಕ್ ಮಂಜೇಶ್ವರ (Founder and president blood donors Mangalore) ಸಮೀರ್ ಎ ಎಸ್ (Admin D Group Ambulance team) ಸಲೀಂ ಸಂಪೋಲಿ (NRI Member D Group Vittal) ಕಲಂದರ್ ಪರ್ತಿಪ್ಪಾಡಿ (Admin D Group Ambulance team) ಮಕ್ಬೂಲ್ ಅಹ್ಮದ್ (Owner Beeline Business Services Dubai) ಹಂಝ  (Vice President D Group Vittal) ಇಂತಿಯಾಝ್ ಸೌದಿ ಅರೇಬಿಯಾ (Secretary D Group Vittal), ಸರ್ಫ್ ರಾಝ್ ವಿಟ್ಲ, ( president D Group sports club Vittal), ನಿಝಾಮುದ್ದೀನ್ ಉಪ್ಪಿನಂಗಡಿ ತಬೂಕ ( admin blood donors Mangalore ) ಹಾಜರಿದ್ದರು.

ಕಾರ್ಯಕ್ರಮದಲ್ಲಿ ರಕ್ತದಾನ ಶಿಬಿರದ ಜೊತೆ ಸನ್ಮಾನ ಕಾರ್ಯಕ್ರಮವೂ ಜರುಗಿತು. ವಿಟ್ಲದ ಆಪದ್ಬಾಂದವ ಸಾಮಾಜಿಕ ಸೇವೆಯ ಮುಂದಾಳುಗಳಾದ ಉಬೈದ್ ಪೊಣ್ಣೊಟ್ಟು, ರಫೀಕ್ ಪೊಣ್ಣೊಟ್ಟು ಮತ್ತು ಹಮೀದ್ ಪೊಣ್ಣೊಟ್ಟು ಇವರಿಗೆ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.

ಊರಿನ ಹಲವು  ಗಣ್ಯರು ಭಾಗವಹಿಸಿದ ಈ ಕಾರ್ಯಕ್ರಮದಲ್ಲಿ ನೂರಾರು ಯುವಕರು ಸ್ವಯಂ ಪ್ರೇರಿತ ರಕ್ತದಾನ ಮಾಡಿದರು. ಸಲೀಂ ಕಡಂಬು ಕಾರ್ಯಕ್ರಮವನ್ನು ಸ್ವಾಗತಿಸಿ, ಧನ್ಯವಾದ ಸಮರ್ಪಿಸಿ, ಕಾರ್ಯಕ್ರಮ ನಿರೂಪಿಸಿದರು.  ಕಾರ್ಯಕ್ರಮದಲ್ಲಿ ಬ್ಲಡ್ ಡೋನರ್ಸ್ ಮಂಗಳೂರು ಹಾಗೂ ಡಿ ಗ್ರೂಪ್ ವಿಟ್ಲ ಇದರ ಸಂಘಟಕರು ಕಾರ್ಯಕ್ರಮದ ಯಶಸ್ವಿಗಾಗಿ ಸಹಕರಿಸಿದರು.

ವರದಿ: N U T ತಬೂಕ್, ಬ್ಲಡ್ ಡೋನರ್ಸ್ ಮಂಗಳೂರು

Click to comment

Leave a Reply

Your email address will not be published. Required fields are marked *

To Top
error: Content is protected !!
WhatsApp chat Join our WhatsApp group