ರಾಜ್ಯ ಸುದ್ದಿ

2022 ರ ವೇಳೆ ಭಾರತ ಮುಸ್ಲಿಂ ರಾಷ್ಟ್ರವಂತೆ ! ಮುಸ್ಲಿಮರ ಹೆಸರಲ್ಲಿ ಕರಪತ್ರ ಹಂಚುವ ಮೂಲಕ ಚುನಾವಣಾ ಲಾಭಕ್ಕೆ ಸಂಘಪರಿವಾರದ ಷಡ್ಯಂತರ !!

ವರದಿಗಾರ (ಡಿ 23) : ರಾಜ್ಯದ ಪ್ರಮುಖ ಮಾಧ್ಯಮ ಒಂದರ ಅಂತರ್ಜಾಲ ತಾಣದಲ್ಲಿ ‘2022 ರ ಒಳಗೆ ಭಾರತವನ್ನು ಮುಸ್ಲಿಂ ರಾಷ್ಟ್ರವಾಗಿಸಲು ಪ್ರಯತ್ನಿಸಬೇಕು’ ಎಂದು ಮಂಗಳೂರಿನಲ್ಲಿ ಕೆ ಎಫ್ ಡಿ-ಪಿಎಫ್ಐ ಹೆಸರಿನಲ್ಲಿ ಕರಪತ್ರ ಹಂಚಲಾಗುತ್ತಿದೆ ಎಂಬ  ಸುದ್ದಿಯು ಹರಿದಾಡುತ್ತಿತ್ತು. ಇದರ ಮೂಲ ಸಾಮಾಜಿಕ ತಾಣವೆಂದು ಆ ಸುದ್ದಿಯಲ್ಲಿ ಉಲ್ಲೇಖಿಸಲಾಗಿತ್ತು.

ಕರಪತ್ರದಲ್ಲಿ ಹಿಂದೂಗಳನ್ನು ನಾಶಗೊಳಿಸಬೇಕು, ಅವರೊಂದಿಗೆ ಯಾವುದೇ ಸಂಪರ್ಕ ಇಟ್ಟುಕೊಳ್ಳಬಾರದು, 2022 ರ ವೇಳೆಗೆ ಭಾರತವನ್ನು ಮುಸ್ಲಿಂ ರಾಷ್ಟ್ರವನ್ನಾಗಿಸಬೇಕು, ಹಿಂದೂ ಗರ್ಭಿಣಿಯರಿಗೆ ಹೊಟ್ಟೇಯಲ್ಲೇ ಮಗು ಸಾಯುವಂತೆ ಔಷಧಿ ನೀಡಬೇಕು, ಹಿಂದೂಗಳ ಧಾರ್ಮಿಕ ಕ್ಷೇತ್ರಗಳ ಮೇಲೆ ದಾಳಿ ಮಾಡಬೇಕು ಸೇರಿದಂತೆ ಒಟ್ಟು 35 ಅಂಶಗಳನ್ನು ಪಟ್ಟಿ ಅದರಲ್ಲಿದ್ದು, ಒಟ್ಟಾರೆಯಾಗಿ ಹಿಂದೂಗಳನ್ನು ಗುರಿಯಾಗಿಸಿ ಮುಸ್ಲಿಮರು ಬರೆದಂತೆ ತೋರ್ಪಡಿಸಿಕೊಳ್ಳುವ ಕೋಮು ಪ್ರಚೋದಕ ಎಲ್ಲಾ ಉದ್ದೇಶಗಳು ಅದರಲ್ಲಿತ್ತು. ಆ ಮೂಲಕ ಹಿಂದೂಗಳ ಮತ್ತು ಮುಸ್ಲಿಮರ ಮಧ್ಯೆ ಅಂತರವೇರ್ಪಡಿಸುವ ಷಡ್ಯಂತರ ಇದರ ಹಿಂದಿತ್ತು.  ಮತ ಧ್ರುವೀಕರಣದ ಹುನ್ನಾರವಿತ್ತು !

ಘಟನೆಯ ಕುರಿತಂತೆ ಮಾಧ್ಯಮಗಳಲ್ಲಿ ಬಂದಿರುವ ವರದಿ

ಈ ಕರಪತ್ರದ ಕುರಿತು ‘ವರದಿಗಾರ’ ತಂಡ ಪಾಪ್ಯುಲರ್ ಫ್ರಂಟ್ ಜಿಲ್ಲಾ ನಾಯಕರಲ್ಲಿ ಸ್ಪಷ್ಟೀಕರಣ ಕೋರಿದಾಗ ಇದರ ಹಿಂದೆ ಸಂಘಪರಿವಾರದ ಷಡ್ಯಂತರದ ಕುರಿತು ಬೆಚ್ಚಿ ಬೀಳಿಸುವ ಮಾಹಿತಿಗಳು ಹೊರಬಿದ್ದಿದೆ.

ಹತ್ತು ವರ್ಷಗಳ ಹಿಂದೆ,  ಅಂದರೆ 2007 ರ ಡಿಸಂಬರ್ ವೇಳೆ ಬಂಟ್ವಾಳದ ಅಬ್ದುಲ್ ಬಶೀರ್ ಎಂಬವರು ಮಧ್ಯರಾತ್ರಿ 2 ಗಂಟೆಯ ಸುಮಾರಿಗೆ ನಾಯಿ ಬೊಗಳುವಿಕೆಯ ಶಬ್ದದಿಂದಾಗಿ ಎಚ್ಚರಗೊಂಡು ನೋಡಿದಾಗ ಸಂಘಪರಿವಾರದ ಇಬ್ಬರು ಸದಸ್ಯರು ಅದೇನನ್ನೋ ತನ್ನ ಅಂಗಡಿಯ ಬಾಗಿಲಿಗೆ ಅಂಟಿಸುತ್ತಿದ್ದುದನ್ನು ನೋಡಿದ್ದರು. ಹತ್ತಿರ ಹೋಗಿ ನೋಡಿದಾಗ ಇದೀಗ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿದೆ ಎನ್ನಲಾಗಿರುವ ಅದೇ ಕರಪತ್ರವಾಗಿತ್ತು ಅಲ್ಲಿದ್ದಿದ್ದು! ಅದರಂತೆ ಬಶೀರ್ ರವರು ಆರೋಪಿಗಳಾದ ಗುರುವಪ್ಪ ಪೂಜಾರಿಯವರ ಮಗ ಮೇಸ್ತ್ರಿ ಮೋಹನ ಹಾಗೂ ದೇಜಪ್ಪ ಪೂಜಾರಿಯವರ ಮಗ ಪಮ್ಮು ಯಾನೆ ಪ್ರಮೋದ್ ವಿರುದ್ಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿದ್ದರು. ಮೇಸ್ತ್ರಿ ಮೋಹನ್ ಮತ್ತು ಪ್ರಮೋದ್ ಇವರಿಬ್ಬರೂ ಸಂಘಪರಿವಾರದ ಸಕ್ರಿಯ ಸದಸ್ಯರಾಗಿದ್ದರು. ಅದರಂತೆ ಪೊಲೀಸರು ಕ್ರೈಂ ನಂಬರ್ 192/2007 ರಂತೆ ದೂರು ದಾಖಲಿಸಿದ್ದರು.  ನಾವಿಲ್ಲಿ ಗಮನಿಸಬೇಕಾದ ಅಂಶವೆಂದರೆ 2008 ರ ಮೇಯಲ್ಲಿ ಕರ್ನಾಟಕ ವಿಧಾನಸಭೆಯ ಚುನಾವಣೆ ನಡೆದಿತ್ತು. ಇದರ ಐದು ತಿಂಗಳ ಮೊದಲಾಗಿತ್ತು ಈ ಕರಪತ್ರ ಹಂಚಿಕೆ ವಿವಾದ ಹೊರಬಂದಿದ್ದು.  ನಂತರ ಇದೇ ಕರಪತ್ರ 2012 ರ ಡಿಸಂಬರ್ ವೇಳೆ ಮತ್ತೊಮ್ಮೆ ಸುದ್ದಿ ಮಾಡಿತ್ತು. 2013 ಮೇಯಲ್ಲಿ ಕರ್ನಾಟಕ ವಿಧಾನಸಭೆಯ ಚುನಾವಣೆ ನಡೆದಿತ್ತು ! ಇದೀಗ ಕಾಕಾತಳೀಯವೆಂಬಂತೆ 2017 ರ ಡಿಸಂಬರ್ ನಲ್ಲಿ ಮತ್ತೊಮ್ಮೆ ಈ ಕರಪತ್ರ ಸುದ್ದಿ ಮಾಡುತ್ತಿದ್ದು, 2018 ರ ಮೇ ವೇಳೆಗೆ ಕರ್ನಾಟಕ ವಿಧಾನಸಭೆಯ ಚುನಾವಣೆ ನಡೆಯಲಿದೆ ಎನ್ನುವುದು ನಮಗೆಲ್ಲರಿಗೂ ತಿಳಿದಿರುವ ವಿಚಾರ. ಈ ಮಧ್ಯೆ,  ಹತ್ತು ವರ್ಷಗಳ ಹಿಂದೆ ಏನು ನಡೆದಿತ್ತೋ ಅದರ ಕರಾಳ ಇತಿಹಾಸ ಮತ್ತೊಮ್ಮೆ ಮರುಕಳಿಸಿದೆ.  2013 ರಲ್ಲಿ ಬೆಳಗಾಂನಲ್ಲೂ ಕೂಡಾ ಇದೇ ರೀತಿಯ ಕರಪತ್ರಗಳನ್ನು ಹಂಚಿ ಕೋಮು ಧ್ವೇಷ ಹುಟ್ಟು ಹಾಕುವ ಪ್ರಯತ್ನಗಳು ನಡೆದಿದ್ದವೆಂದು ಪಿ ಎಫ್ ಐ ಜಿಲ್ಲಾ ನಾಯಕರು ನೆನಪಿಸುತ್ತಾರೆ.

2007 ರಲ್ಲಿ ಬಶೀರ್ ರವರು ನೀಡಿದ್ದ ದೂರಿನ ಪ್ರತಿ

ಒಟ್ಟಿನಲ್ಲಿ ಪ್ರತಿ ಬಾರಿ ಕರ್ನಾಟಕ ವಿಧಾನಸಭೆಯ ಚುನಾವಣೆ ನಡೆಯುವುದಕ್ಕಿಂತ ಮೊದಲು ಈ ಕರಪತ್ರವನ್ನು ಹಂಚಿ , ಆ ಮೂಲಕ ಹಿಂದೂ ಮತ ಧ್ರುವೀಕರಣ ಮಾಡುವ ಆತಂಕಕಾರಿ ಪ್ರಯತ್ನವನ್ನು ಸಂಘಪರಿವಾರ ಬಹಳ ಷಡ್ಯಂತರಗಳ ಮೂಲಕ ಮಾಡುತ್ತಿದೆ ಎನ್ನುವುದು ಮಾತ್ರ ಸುಳ್ಳಲ್ಲ. ತನ್ನ ಮತ ಭೇಟೆಗೋಸ್ಕರ ರಾಜ್ಯದ ಜನರ ಮಧ್ಯೆ ಕೊಳ್ಳಿ ಇಡುತ್ತಿರುವ ಈ ವಿಚ್ಛಿದ್ರಕಾರಿ ಶಕ್ತಿಗಳ ವಿರುದ್ಧ ರಾಜ್ಯ ಸರಕಾರ ಕೂಡಲೇ  ಕ್ರಮ ಕೈಗೊಳ್ಳಬೇಕಾಗಿರುವುದು ರಾಜ್ಯದ ಹಿತ ಕಾಪಾಡುವ ನಿಟ್ಟಿನಲ್ಲಿ ಬಹುಮುಖ್ಯವಾಗಿದೆ.

ಎಫ್ ಐ ಆರ್ ಪ್ರತಿ

ಪಿ ಎಫ್ ಐ ಜಿಲ್ಲಾಧ್ಯಕ್ಷ ನವಾಝ್ ಉಳ್ಳಾಲ್ ಪ್ರತಿಕ್ರಿಯೆ : ಕರ್ನಾಟಕದ ಪ್ರತಿ ಚುನಾವಣೆಯ ಹಿಂದೆ ಮತ ದ್ರುವೀಕರಣಕ್ಕೋಸ್ಕರ ಸಂಘ ಪರಿವಾರ ನಡೆಸುತ್ತಿರುವ ಈ ಕುತಂತ್ರವನ್ನು ಬಹಿರಂಗಗೊಳಿಸಬೇಕು. ಇದರ ಹಿಂದಿರುವ ಶಕ್ತಿಗಳನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆಗೊಳಪಡಿಸಬೇಕೆಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ದ ಕ ಜಿಲ್ಲಾಧ್ಯಕ್ಷ ನವಾಝ್ ಉಳ್ಳಾಲ್ ರವರು ‘ವರದಿಗಾರ’ ಕ್ಕೆ ತಿಳಿಸಿದ್ದಾರೆ

1 Comment

1 Comment

  1. Samkumar

    December 25, 2017 at 11:30 am

    To take election benefits this how sangh parivar making type kindly issue proper important issue to cod of karnatak thank you

Leave a Reply

Your email address will not be published. Required fields are marked *

To Top
error: Content is protected !!
WhatsApp chat Join our WhatsApp group