ನಿಮ್ಮ ಹೆಜ್ಜೆಗೆ ನನ್ನ ಗೆಜ್ಜೆ-ಪಟ್ಟಾಭಿರಾಮ ಸೋಮಯಾಜಿ

ನಮ್ಮ ಹೆಜ್ಜೆ, ನಿಮ್ಮ ನುಡಿ: ನಿಮ್ಮ ಹೆಜ್ಜೆಗೆ ನನ್ನ ಗೆಜ್ಜೆ. ಅಧಿಕಾರದ ಎದುರು ಸತ್ಯವನ್ನು ಪ್ರತಿಪಾದಿಸಲು, ಸತ್ಯದ ಜೊತೆ ನಿರಂತರ ಪ್ರಯೋಗಗಳನ್ನು ಮಾಡಿ The Story of my Experiments with Truth ಎಂಬ ಆತ್ಮಕತೆ ಬರೆದ ಮಹಾತ್ಮನನ್ನೇ ಕೊಂದು ತಿಂದು ನೀರು ಕುಡಿದ, ಸ್ವಾತಂತ್ರ್ಯ ಚಳುವಳಿ ಕಾಲದಲ್ಲಿ ಬ್ರಿಟಿಷರ ಕೈಗೂಸಾಗಿದ್ದ ಸಿದ್ಧಾಂತ, ಕ್ರಾಂತಿಕಾರೀ Quit India ಚಳುವಳಿಯನ್ನು ನೋಟು ಬದಲಾವಣೆಯಂತೆ ತನ್ನ ಅಕೌಂಟಿಗೆ ಜಮೆ ಮಾಡಿಕೊಳ್ಳುತ್ತಿರುವ ಈ ದುರದೃಷ್ಟ ಕಾಲದಲ್ಲಿ, ಸತ್ಯವನ್ನು ಉಳಿಯಗೊಡುವ ನಿಜದನಿ ನಿಮ್ಮದಾಗಲಿ. ಮಾಧ್ಯಮಗಳ ಕಪಟ ಮೋಸ ನಂಜು ರೋಚಕತೆಗಳೆಂಬ ಪಿಡುಗುಗಳು ನಿಮ್ಮನ್ನು ಸೋಂಕದಿರಲಿ ಎಂಬ ಹಾರೈಕೆಯೊಂದಿಗೆ.

-ಎಚ್. ಪಟ್ಟಾಭಿರಾಮ ಸೋಮಯಾಜಿ

ಉಪನ್ಯಾಸಕರು, ಮಂಗಳೂರು ವಿಶ್ವ ವಿದ್ಯಾನಿಲಯ

 

 

error: Content is protected !!
%d bloggers like this:
Inline
Inline