ಹನಿ ಸುದ್ದಿ

ಸಂಸ್ಕೃತಿ ಹಾಳು ಮಾಡಬಾರದೆಂದು ಯಡಿಯೂರಪ್ಪನಿಗೂ, ಅವರಪ್ಪನಿಗೂ ಹೇಳುತ್ತೇನೆ: ಕಾಗೋಡು ತಿಮ್ಮಪ್ಪ

ವರದಿಗಾರ (ಡಿ.17): ಕೆಲ ಶಕ್ತಿಗಳು ಕೋಮು ಗಲಭೆಗೆ ಪ್ರಚೋದನೆ ನೀಡುತ್ತಿರುವ ಮತ್ತು ಸಂಸ್ಕೃತಿ ಹಾಳು ಮಾಡುತ್ತಿದೆ. ಇಂತಹ ಕೆಲಸವನ್ನು ಯಾರೂ ಮಾಡಬಾರದು ಮತ್ತು ಅಂತವರಿಗೆ ಪ್ರೋತ್ಸಾಹವನ್ನೂ ನೀಡಬಾರದು. ಈ ವಿಚಾರವನ್ನು ಯಡಿಯೂರಪ್ಪನಿಗೂ ಹೇಳುತ್ತೇನೆ, ಅವರಪ್ಪನಿಗೂ ಹೇಳುತ್ತೇನೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ.

ಅವರು ಇತ್ತೀಚೆಗೆ  ಪತ್ರಕರ್ತರೊಂದಿಗೆ ಮಾತನಾಡುತ್ತಾ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ. ಜಿ.ಪರಮೇಶ್ವರ್ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲವೆಂದು ಸ್ಪಷ್ಟ ಪಡಿಸಿದ್ದಾರೆ. ಸರಕಾರದ ಸಮಾವೇಶಕ್ಕೆ ಹೋದರೆ ಅಧ್ಯಕ್ಷರಿಗೆ ಪ್ರಾಮುಖ್ಯತೆ ಇರುವುದಿಲ್ಲ ಮತ್ತು ಇಬ್ಬರದ್ದೂ ಬೇರೆ ಬೇರೆಯೇ ಜವಾಬ್ದಾರಿ ಎಂದು ಹೇಳಿದ್ದಾರೆ.

To Top
error: Content is protected !!
WhatsApp chat Join our WhatsApp group