ಪುತ್ತೂರು (14.12.2017) : ಉಪನ್ಯಾಸಕರೊರ್ವರ ಮನೆಯ ಆವರಣಕ್ಕೆ ವಿದ್ಯಾರ್ಥಿಗಳು ಪ್ರವೇಶಿಸಿ ಅವರನ್ನು ನಿಂದಿಸಿದ್ದಾರೆ ಎಂದು ಆರೋಪಿಸಿ ಪುತ್ತೂರು ನಗರ ಠಾಣೆಯಲ್ಲಿ 9 ನೇ ತರಗತಿಯ 3 ವಿದ್ಯಾರ್ಥಿಗಳ ಮೇಲೆ ಕೇಸನ್ನು ದಾಖಲಿಸಿದ್ದು, ವಿದ್ಯಾರ್ಥಿಗಳ ಭವಿಷ್ಯವನ್ನು ನೋಡದೆ ಅವರ ಬದುಕಿನಲ್ಲಿ ಚೆಲ್ಲಾಟವಾಡಿದ್ದು ಖೇದಕರದ ಸಂಗತಿಯಾಗಿದೆ. ಈ ಒಂದು ಘಟನೆಯನ್ನು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಪುತ್ತೂರು ತಾಲೂಕು ಸಮಿತಿಯು ಖಂಡಿಸುತ್ತದೆ.
ದರ್ಬೆ ಬೆಥನಿ ಶಾಲಾ ಬಳಿಯ ನಿವಾಸಿ, ಉಪನ್ಯಾಸಕರಾದ ಪ್ರಶಾಂತ್ ಎಂಬವರ ಮನೆಯ ಮುಂದೆ ಬೆಥನಿ ಶಾಲೆಯ ವಿದ್ಯಾರ್ಥಿಗಳು ಜೋರಾಗಿ ಮಾತನಾಡಿಕೊಂಡು ಹೋಗುತ್ತಿದ್ದು, ಇದನ್ನು ಸಹಿಸದ ಉಪನ್ಯಾಸಕರು ಕೇಸನ್ನು ದಾಖಲಿಸಿದ್ದು ಖೇದಕರದ ಸಂಗತಿಯಾಗಿದೆ. ಒಂದು ಉಪನ್ಯಾಸಕರಾಗಿ ವಿದ್ಯಾರ್ಥಿಗಳ ಬಗ್ಗೆ, ಅವರ ಸ್ವಭಾವದ ಬಗ್ಗೆ ಅರಿತಿರುವವರು ಈ ರೀತಿ ಮಾಡಿದ್ದು, ವಿದ್ಯಾರ್ಥಿಗಳ ಮೇಲೆ FIR ದಾಖಲಿಸಿದ್ದು ಅವರ ಮುಂದಿನ ಶೈಕ್ಷಣಿಕ ಕಲಿಕೆಗೆ ತಡೆಯೊಡ್ಡಿದಂತಾಗಿದೆ.
ಆದ್ದರಿಂದ ಆ ವಿದ್ಯಾರ್ಥಿಗಳ ಮೇಲೆ ದಾಖಲಿಸಿದ ಕೇಸನ್ನು ಹಿಂದಕ್ಕೆ ಪಡೆದು, ಅವರ ಮುಂದಿನ ಕಲಿಕೆಗೆ ಅನುವು ಮಾಡಿ ಕೊಡಬೇಕೆಂದು ಕ್ಯಾಂಪಸ್ ಫ್ರಂಟ್ ಪುತ್ತೂರು ತಾಲೂಕು ಸಮಿತಿಯು ಆಗ್ರಹಿಸುತ್ತದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ
