ಸುತ್ತ-ಮುತ್ತ

ಲವ್ ಜಿಹಾದ್ ಆರೋಪ : ರಾಜಸ್ಥಾನದ ಅಫ್ರಝುಲ್‍ರ ಹತ್ಯೆಯನ್ನು ಖಂಡಿಸಿ ಕ್ಯಾಂಪಸ್ ಫ್ರಂಟ್‍ನಿಂದ ಪ್ರತಿಭಟನೆ

ವರದಿಗಾರ (14.12.2017): ರಾಜಸ್ಥಾನದ ರಾಜ್ ಸಮಂದ್ ಜಿಲ್ಲೆಯಲ್ಲಿ ಅಫ್ರೋಝ್(50) ಎಂಬ ಕಾರ್ಮಿಕನನ್ನು ಅಪಹರಿಸಿ, ಸಜೀವವಾಗಿ ದಹಿಸಿ ಕೊಂದ ಘಟನೆಯನ್ನು ಖಂಡಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯಿಂದ ನಗರದ ಜ್ಯೋತಿ ವೃತ್ತದ ಬಳಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಯಿತು. ಸಭೆಯಲ್ಲಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ದಕಿಣ ಕನ್ನಡ ಜಿಲ್ಲಾಧ್ಯಕ್ಷರಾದ ಮುಹಮ್ಮದ್ ಅಥಾವುಲ್ಲಾ ಮಾತನಾಡಿ ‘ಲವ್ ಜಿಹಾದ್’ ಹೆಸರಿನಲ್ಲಿ ಅಮಾಯಕ ವ್ಯಕ್ತಿಗಳ ಮೇಲಿನ ಹಲ್ಲೆ ದರೋಡೆ ಮತ್ತು ಕೊಲೆಗಳು ಪ್ರತಿದಿನ ಹೆಚ್ಚುತ್ತಿದ್ದು, ದೇಶದ ಜವಾಬ್ದಾರಿಯನ್ನು ಹೊತ್ತುಕೊಂಡಂತಹ ಪ್ರಧಾನ ಮಂತ್ರಿಯಾಗಲೀ ಯಾರು ಕೂಡ ಪ್ರತಿಕ್ರಿಯೆ ನೀಡದೆ ಇರುವುದು, ಪ್ರಜಾಪ್ರಭುತ್ವ ವ್ಯಯಸ್ಥೆಯ ದೊಡ್ಡ ದುರಂತ. ಹಾಗು ರಾಜಸ್ತಾನದಲ್ಲಿ ನಡೆದ ಘಟನೆಯು ದೇಶವನ್ನೇ ತಲೆತಗ್ಗಿಸುವಂತೆ ಮಾಡಿದೆ, ಮುಂದಕ್ಕೆ ಇಂತಹಾ ಯಾವುದೇ ಘಟನೆಗಳು ಮರುಕಳಿಸಿದರೆ ಜಿಲ್ಲಾ ಮಟ್ಟದಲ್ಲಿ ವಿದ್ಯಾರ್ಥಿಗಳನ್ನು ಸಂಘಟಿಸಿಕೊಂಡು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಇಫಾಝ್, ಸಮಿತಿ ಸದಸ್ಯರಾದಂತಹ ಅಶ್ವನ್ ಸಾದಿಕ್, ಶಾಕಿರ್, ಸಾದಿಕ್ ಜಾರತ್ತೂರ್ ಉಪಸ್ಥಿತರಿದ್ದರು. ಜಿಲ್ಲಾ ಸಮಿತಿ ಸದಸ್ಯ ತಾಜುದ್ದೀನ್ ಸ್ವಾಗತಿಸಿ, ನಿರೂಪಿಸಿದರು.

ವರದಿ : ಇಮ್ರಾನ್ ಪಿ ಜೆ

Click to comment

Leave a Reply

Your email address will not be published. Required fields are marked *

To Top
error: Content is protected !!