ವರದಿಗಾರ ವಿಶೇಷ

ಹಿಂದುತ್ವ ಶಕ್ತಿಗಳು ನೀವೆನಿಸಿದಂತಲ್ಲ! ತಾಲಿಬಾನಿಗಿಂತಲೂ ಭೀಕರ, ಐಸಿಸ್ ಗಿಂತಲೂ ಬಲಿಷ್ಟ!! ಸೋರಿಕೆಯಾದ ಆಡಿಯೋ ವೈರಲ್

►  ರಾಜಸ್ಥಾನದ ನರಹಂತಕ ಭಯೋತ್ಪಾದಕ ಶಂಭುನಾಥ್ ಇವರಿಗೆ ಹೀರೋ ಅಂತೆ!

► ಬಿಜೆಪಿ ನಾಯಕಿ ವಸುಂಧರಾ ರಾಜೆಯನ್ನೂ ಕೊಲೆ ಹಾಗೂ ಸಜೀವದಹನ ಮಾಡುತ್ತಾರಂತೆ!!

►  ಸೋರಿಕೆಯಾದ ಭಯೋತ್ಪಾದಕರ ಸಂಬಾಷಣೆಯ ಆಡಿಯೋ ಕೇಳಿದ್ರೆ ನೀವು ಬೆಚ್ಚಿ ಬೀಳಬಹುದು !

ವರದಿಗಾರ (14.12.2017) :  ಕಳೆದ ವಾರ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಚರ್ಚೆಗೊಳಗಾಗಿದ್ದ ಮುಸ್ಲಿಮ್ ವ್ಯಕ್ತಿಯೊಬ್ಬನ ಕೊಲೆ ಹಾಗೂ ಸಜೀವದಹನದ ವೀಡಿಯೋ ನೀವೆಲ್ಲರೂ ನೋಡಿರಬಹುದು, ದಂಗಾಗಿರಬಹುದು. ನಮ್ಮ ಜಾತ್ಯತೀತ ಭಾರತ ಎತ್ತ ಸಾಗುತ್ತಿದೆ ಎಂಬ ಪ್ರಶ್ನೆಯೂ ನಿಮ್ಮನ್ನು ಕಾಡಿರಬಹುದು. ಇದೀಗ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿರುವ ಹಿಂದುತ್ವ ಮತಾಂಧರ ಸಂಭಾಷಣೆಯ ಆಡಿಯೋ ನಿಮ್ಮನ್ನು ಬೆಚ್ಚಿ ಬೀಳಿಸಬಹುದು.  ಸಂಭಾಷಣೆಯು ರಾಜಸ್ಥಾನದ ಅಲ್ವಾರ್ ನ ಓರ್ವ ಮಹಿಳೆ ಹಾಗೂ ಮಧ್ಯಪ್ರದೇಶದ ಭೋಪಾಲದ ವ್ಯಕ್ತಿಯೊಬ್ಬನದ್ದಾಗಿದೆ. ಇಬ್ಬರೂ ತಾವು ಹಿಂದುತ್ವ ಸಂಘಟನೆಗಳನ್ನು ಪ್ರತಿನಿಧಿಸುವವರಾಗಿದ್ದಾರೆಂದು ಅವರ ಆಡಿಯೋ ಸಂಭಾಷಣೆಯಿಂದ ತಿಳಿದು ಬರುತ್ತದೆ.

ಕರೆಯ ಆರಂಭದಲ್ಲಿ ತಾನು ‘ಹಿಂದೂ ಸ್ವಾಭಿಮಾನ್’ ಎಂಬ ಸಂಘಟನೆಯ ಕಾರ್ಯಕರ್ತನಾಗಿರುವುದಾಗಿ ಭೋಪಾಲದ ವ್ಯಕ್ತಿಯು ತಿಳಿಸುತ್ತಾನೆ. ಇವರಿಬ್ಬರೂ ಬೇರೆ ಬೇರೆ ಸಂಘಟನೆಗಳ ನಾಯಕರಾಗಿದ್ದು, ಮುಸ್ಲಿಂ ವ್ಯಕ್ತಿಯೋರ್ವನ ಸಜೀವ ದಹನ ಮಾಡಿದ ಶಂಭೂನಾಥ್ ಗೆ ಸಹಾಯ ಮಾಡಲು ಒಂದಾಗಬಯಸಿದ್ದರು. ಆಡಿಯೋದಲ್ಲಿ ಹೇಳಿರುವಂತೆ, ಇವರಿಬ್ಬರ ಸಂಘಟನೆಗಳೂ ಹಿನ್ನಲೆಯಲ್ಲಿ ಕಾರ್ಯನಿರತರಾಗಿವೆ. ಇವರು ಮಾಡುವ ಕಾರ್ಯಗಳಿಗೆ ಸಮಾಜದಲ್ಲಿ ಯಾವತ್ತೂ ಬೆಂಬಲ ಸಿಗಲ್ಲ ಎಂದು ಅವರೇ ಹೇಳಿಕೊಂಡಿದ್ದಾರೆ.

ಅವರಿಬ್ಬರ ಸಂಭಾಷಣೆಯ ಕೆಲವು ತುಣುಕುಗಳು ಈ ಕೆಳಗಿನಂತಿವೆ:

ಭೋಪಾಲದ ವ್ಯಕ್ತಿ: “ನಾವು ಶಂಭೂನಾಥ್ ನ ಹಾಗಿರುವ ‘ಕ್ರಾಂತಿಕಾರಿ’ಗಳಿಗೆ ಸಹಾಯ ಮಾಡುತ್ತೇವೆ. ಯಾರಾದರೂ ಹೋರಾಟಗಾರರು ಹಿಂದುತ್ವಕ್ಕಾಗಿ ತಲ್ವಾರ್ ನಿಂದ ಇರಿದರೋ ಅಥವಾ ಗುಂಡೇಟಿನಿಂದ ಸಾಯಿಸಿದರೆ ಅವರಿಗೆ ಜೈಲು ಶಿಕ್ಷೆಯಾಗುತ್ತಿದೆ. ಅವರ ಕೇಸು ವಾದಿಸಲು ವಕೀಲರಿದ್ದರೂ, ಹೆಚ್ಚಿನ ಕ್ರಾಂತಿಕಾರಿಗಳು ಮಧ್ಯಮ ವರ್ಗದವರಾಗಿದ್ದಾರೆ. ಅವರ ಕುಟುಂಬಕ್ಕೆ ಆಸರೆಯಾಗಿರುವವರಾಗಿರುತ್ತಾರೆ. ಇಂತಹ ಸನ್ನಿವೇಶದಲ್ಲಿ ಅವರ ಕುಟುಂಬಕ್ಕೆ ಆರ್ಥಿಕ ಸಹಾಯದ ಅಗತ್ಯವಿರುತ್ತದೆ, ಅದನ್ನು ನಾವು ಒದಗಿಸುತ್ತೇವೆ. ಅದೇ ರೀತಿ ಇಂತಹ ಹೋರಾಟದಲ್ಲಿ ಕೆಲವರು ಗಾಯಾಳುಗಳಾಗುತ್ತಾರೆ, ಅವರ ಚಿಕಿತ್ಸೆಗೂ ಬೇಕಾದ ಸೌಲಭ್ಯಗಳನ್ನು ಒದಗಿಸುತ್ತೇವೆ”

ಮಹಿಳೆ:” ನಮ್ಮ ಸಂಘಟನೆಯೂ ಇದೇ ರೀತಿಯ ಸಹಾಯವನ್ನು ನೀಡುತ್ತದೆ. ಶಂಭೂನಾಥ್ ಸೂಕ್ತ ವಕೀಲರ ವ್ಯವಸ್ಥೆ ನಾವು ಒದಗಿಸಲಿಚ್ಚಿಸುತ್ತೇವೆ, ನಮ್ಮ ರಾಜಕೀಯ ನಾಯಕರ ಬೆಂಬಲವೂ ಇದೆ”

ಭೋಪಾಲದ ವ್ಯಕ್ತಿ: “ಶಂಭೂನಾಥ್ ನ ಕೇಸನ್ನು ವಾದಿಸಲು ಈಗಾಗಲೇ ಹಲವಾರು ವಕೀಲರು ಮುಂದೆ ಬಂದಿದ್ದಾರೆ, ಇಂತಹ ವ್ಯಕ್ತಿಗಳಿಗೆ ಯಾವುದೇ ಶುಲ್ಕವನ್ನು ಪಡೆಯದೆ ವಾದಿಸಲು ತಯಾರಿರುವ ವಕೀಲರ ಗುಂಪಿದೆ. ಕೆಲವು ವಕೀಲರು ಇಂತಹ ಸಂಧರ್ಭದಲ್ಲಿ ಹೆಸರಿಗಾಗಿ ವಾದಿಸಲು ಮುಂದೆ ಬರುತ್ತಾರೆ (ವೈಯಕ್ತಿಕ ನೆಲೆಯಲ್ಲಿ ಸಾಧನೆ ಎಂದು ಬಿಂಬಿಸಲು)”

ಭೋಪಾಲದ ವ್ಯಕ್ತಿ: “ಮುಖ್ಯಮಂತ್ರಿ ವಸುಂಧರಾ ರಾಜೆ ಸರಕಾರ ಅದೆಷ್ಟು ಹಿಂದುತ್ವವಾದಿ ಎಂದು ನಿಮಗೆ ತಿಳಿದಿರಬಹುದಲ್ಲವೇ?”

ಮಹಿಳೆ:ಸರ್, ಅವರು(ವಸುಂಧರಾ ರಾಜೆ) ನನ್ನ ಮುಂದೆ ಬಂದಲ್ಲಿ ಶಂಭೂನಾಥ್ ಯಾವ ರೀತಿಯಲ್ಲಿ ಕೊಲೆ ಮಾಡಿದ್ದಾನೋ, ಅದೇ ರೀತಿಯಲ್ಲಿ ಅವರನ್ನೂ ಕೊನೆಗೊಳಿಸಲಿಚ್ಚಿಸುವೆ”

ಭೋಪಾಲದ ವ್ಯಕ್ತಿ:”ಆ ನಿಟ್ಟಿನಲ್ಲಿ ಈಗಾಗಲೇ ಕೆಲಸ ನಡೆಯುತ್ತಿದೆ, ಆದಷ್ಟು ಬೇಗ ಪರಿಹಾರವಾಗಬಹುದು”

ಮಹಿಳೆ: “ಪ್ರತಿ ಮನೆಯಲ್ಲಿಯೂ ಶಂಭೂನಾಥ್ ತರ ಯೋಧರಿರಬೇಕು. ಹಾಗಿದ್ದಲ್ಲಿ ಮಾತ್ರ ಹಿಂದುತ್ವದ ರಕ್ಷಣೆ ಸಾಧ್ಯ, ಇಲ್ಲದಿದ್ದಲ್ಲಿ ಆದಷ್ಟು ಬೇಗ ಭಾರತವನ್ನು ಇಸ್ಲಾಮಿಕ್ ರಾಷ್ಟ್ರವಾಗಿ ಘೋಷಿಸಲ್ಪಡಬಹುದು”

ಭೋಪಾಲದ ವ್ಯಕ್ತಿ: “ಶಂಭೂನಾಥ್ ಮನೆ ಹಾಗೂ ಆಸುಪಾಸಿನ ಪ್ರದೇಶದಲ್ಲಿ ಪೊಲೀಸರಿದ್ದಾರೆ. ಆತ ಹೀರೋ ಆಗಬಾರದೆಂದು ಪೊಲೀಸರು ಎಚ್ಚರಿಕೆ ವಹಿಸಿದ್ದಾರೆ.”

ಮಹಿಳೆ: “ಸರ್, ಅವರು ಈಗಾಗಲೇ ಹೀರೋ ಆಗಿದ್ದಾರೆ”
ಭೋಪಾಲದ ವ್ಯಕ್ತಿ : ಆದರೆ ಕಾನೂನಿನ ಪ್ರಕಾರ ಆತನೋರ್ವ ಆರೋಪಿ
ಮಹಿಳೆ : ಕಾನೂನು ಅಲ್ಲಿರಲಿ ಸರ್, ಕಾನೂನು ನಾವೇ ಮಾಡೋದಲ್ವೇ? ನಮ್ಮಿಂದ ಕಾನೂನು,ನಮಗೆ ಯಾವುದೇ ಕಾನೂನಿಲ್ಲ. ಅದರಲ್ಲೇನು ವ್ಯತ್ಯಾಸ ಇರಲ್ಲಿ ಬಿಡಿ.

ಮಹಿಳೆ ತಾನು ಆಲ್ವಾರ್ ನಗರದವಳೆಂದು ಪರಿಚಯಿಸಿದಾಗ ಆ ವ್ಯಕ್ತಿ ಆಲ್ವಾರ್ ಗೆ ನಾನು ಸಂಘಟನೆಯ ಕೆಲಸಕ್ಕಾಗಿ ಬರುತ್ತಿರುತ್ತೇನೆ. ಅಲ್ಲಿ ಪಂಕಜ್ ಶರ್ಮಾ ಎನ್ನುವ ವ್ಯಕ್ತಿ ನಮ್ಮ ಸಂಘಟನೆಯಲ್ಲಿದ್ದಾರೆ. ಅದೇ ರೀತಿ ಬ್ರಾಹ್ಮಣ ಸಮಾಜದ ಓಮ್ ಪ್ರಕಾಶ್ ಕೂಡಾ ನಮ್ಮ ಜೊತೆ ಇದ್ದಾರೆ ಎನ್ನುತ್ತಾನೆ

ಭೋಪಾಲದ ವ್ಯಕ್ತಿ: “ಶಂಭೂನಾಥ್ ರನ್ನು ಜೈಲಿಗೆ ಹಾಕಿದ್ದಾರೆ. ಆ ಜೈಲಲ್ಲಿ ಮುಸ್ಲಿಂ ಕೈದಿಗಳೂ ಇರಬಹುದು. ಅಲ್ಲಿ ಶಂಭೂನಾಥ್ ರ ಮೇಲೆ ಯಾವುದೇ ರೀತಿಯಲ್ಲಿ ಹಲ್ಲೆ ನಡೆಯಬಾರದು.ಈ ನಿಟ್ಟಿನಲ್ಲಿ ನಾವು ಕಾರ್ಯನಿರತರಾಗಿದ್ದೇವೆ”

ಮಹಿಳೆ: “ಸರ್, ಅವರು ಯಾವ ಜೈಲಲ್ಲಿದ್ದಾರೆ ಹಾಗೂ ಅಲ್ಲಿಯ ಜೈಲರ್ ನ ಹೆಸರು ನನಗೆ ತಿಳಿಸಿ, ಈ ಮಾಹಿತಿ ದೊರಕಿದಲ್ಲಿ ನಾವು ಪೂರ್ಣ ರೀತಿಯಲ್ಲಿ ಸಹಾಯ ಮಾಡಬಹುದು”

ಭೋಪಾಲದ ವ್ಯಕ್ತಿ: “ನಾನು ಇಂದು ರಾತ್ರಿ ನಿಮಗೆ ಈ ಮಾಹಿತಿಯನ್ನು ಮೆಸ್ಸೇಜ್ ಮಾಡುತ್ತೇನೆ” ಎಂದು ಅವರಿಬ್ಬರ ಸಂಭಾಷಣೆ ಕಡಿತಗೊಳ್ಳುತ್ತದೆ

ಸಂಭಾಷಣೆಯ ಮಧ್ಯೆ ಈ ಉದ್ದೇಶವನ್ನಿಟ್ಟುಕೊಂಡು ಕಾರ್ಯಾಚರಿಸುತ್ತಿರುವಂತಹಾ ಈ ರೀತಿಯ ಉಗ್ರ ಸಂಘಟನೆಗಳ ಹೆಸರನ್ನು ಉಲ್ಲೇಖಿಸುವ ಇಬ್ಬರು ಅದರಲ್ಲಿ ರಾಜಸ್ಥಾನದ ಕೋಟಾದಲ್ಲಿ ಬಲ್ವಿಂದರ್ ಸಿಂಗ್ ನೇತೃತ್ವದ “ಸೇವಾರ್ಥಿ” ಎಂಬ ಸಂಘಟನೆಯ ಹೆಸರು ಹೇಳುತ್ತಾನೆ. ಅದೇ ರೀತಿ ಮಹಿಳೆ ಪ್ರತಿನಿಧಿಸುತ್ತಿರುವ ಸಂಘಟನೆಯ ಜೈಪುರ್ ಅಧ್ಯಕ್ಷನ ಹೆಸರನ್ನು ಬಸಂತ್ ಗೆಹ್ಲೋಟ್ ಎಂದೂ, ಅದೇ ರೀತಿ ಮತ್ತೊಬ್ಬನ ಸಂಘಟನೆಯ ಜೈಪುರ್ ಅಧ್ಯಕ್ಷನ ಹೆಸರು ವೈಷ್ಣವ್ ಎಂದೂ ತಿಳಿದು ಬರುತ್ತದೆ.

ಈ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸಂಭಾಷಣೆಯ ಮಾಹಿತಿ ಅಥವಾ ಅಧಿಕೃತತೆಯ ಬಗ್ಗೆ ‘ವರದಿಗಾರ’ ದೃಢೀಕರಿಸುತ್ತಿಲ್ಲ.

ಕೆಳಗಿನ ವೀಡಿಯೋದಲ್ಲಿ ಸಂಭಾಷಣೆಯ ಆಡಿಯೋ ಕೇಳಬಹುದು

To Top
error: Content is protected !!
WhatsApp chat Join our WhatsApp group