ರಾಜ್ಯ ಸುದ್ದಿ

ಕರಾವಳಿ ಹೊತ್ತಿ ಉರಿಯಲಿದೆ: ಶೋಭಾ ಕರಂದ್ಲಾಜೆ ಬೇಜವಾಬ್ದಾರಿ ಹೇಳಿಕೆ

ವರದಿಗಾರ (ಡಿ.12): ಹೊನ್ನಾವರದ ಪರೇಶ್ ಮೇಸ್ತಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ, ಇಂದು ಬೆಂಗಳೂರಿನಲ್ಲಿ ರಾಜ್ಯ ಬಿಜೆಪಿ ನಡೆಸಿರುವ ಪ್ರತಿಭಟನೆಯಲ್ಲಿ ಮಾತನಾಡಿರುವ ಸಂಸದೆ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ, ರಾಜ್ಯದಲ್ಲಿ ಇಪ್ಪತ್ತಕ್ಕೂ ಹೆಚ್ಚು ಸಂಘಪರಿವಾರದ ಕಾರ್ಯಕರ್ತರ ಹತ್ಯೆಯಾಗಿದೆ. ಆದರೆ ಇದುವರೆಗೂ ಸರಕಾರ ಪ್ರಕರಣವನ್ನು ಭೇಧಿಸಿಲ್ಲ. ಆದರೆ, ಒಂದು ವೇಳೆ ಪರೇಶ್ ಮೇಸ್ತಾ ಸಾವಿನ ತನಿಖೆ ಸೂಕ್ತ ರೀತಿಯಲ್ಲಿ ಆಗದಿದ್ದರೆ ಇಡೀ ಕರಾವಳಿ ಭಾಗ ಹೊತ್ತಿ ಉರಿಯಲಿದೆ ಎಂದು ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ.

ಇಂದು ರಾಜ್ಯ ಬಿಜೆಪಿ ಸಂಘಪರಿವಾರದ ಕಾರ್ಯಕರ್ತರ ಹತ್ಯೆ ಪ್ರಕರಣಗಳನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸುವಂತೆ ರಾಜ್ಯ ಸರಕಾರವನ್ನು ಒತ್ತಾಯಿಸಿ ವಿಧಾನಸೌಧ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ಬಳಿಯಿಂದ ರಾಜಭವನಕ್ಕೆ ಮೆರವಣಿಗೆ  ಮೂಲಕ ತೆರಳಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿತು.

2 Comments
To Top
error: Content is protected !!
WhatsApp chat Join our WhatsApp group