ಅನಿವಾಸಿ ಕನ್ನಡಿಗರ ವಿಶೇಷ

ಸಂವಿಧಾನದ ಮೌಲ್ಯಗಳನ್ನು ಒಡೆಯುವ ಮಾಧ್ಯಮಗಳ ವಿರುದ್ಧ ಧ್ವನಿ ಎತ್ತಿ ಪ್ರಜಾಪ್ರಭುತ್ವವನ್ನು ಉಳಿಸಬೇಕಾಗಿದೆ: ಅಬ್ದುಲ್ ರಝಾಕ್ ಕೆಮ್ಮಾರ

ವರದಿಗಾರ- ಮಸ್ಕತ್ (ಡಿ.12): ಭಾರತೀಯ ಮಾಧ್ಯಮವು ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿಯುವತ್ತ ಕಾಳಜಿ ವಹಿಸದೆ, ಪ್ರಜಾಪ್ರಭುತ್ವದ ನೀತಿಯನ್ನು ಮೂಲೆಗುಂಪು ಮಾಡುವ ಸುದ್ದಿ ಬಿತ್ತರಿಸುತ್ತಿರುವುದು ವಿಪರ್ಯಾಸ. ರಚನಾತ್ಮಕವಾದ ವಿಷಯಗಳನ್ನು ಬದಿಗೆ ಸರಿಸಿ ಜಾತ್ಯತೀತ ದೇಶದ ಸಂವಿಧಾನದ ಮೌಲ್ಯಗಳನ್ನು ಒಡೆಯುವ ಮಾಧ್ಯಮಗಳ ವಿರುದ್ಧ ಧ್ವನಿ ಎತ್ತಿ ಪ್ರಜಾಪ್ರಭುತ್ವವನ್ನು ಉಳಿಸುವತ್ತ ಎಲ್ಲರೂ ಧ್ವನಿಗೂಡಿಸಬೇಕೆಂದು ಪ್ರಸ್ತುತ ಪಾಕ್ಷಿಕದ ಉಪ ಸಂಪಾದಕ ಅಬ್ದುಲ್ ರಝಾಕ್ ಕೆಮ್ಮಾರ ಹೇಳಿದ್ದಾರೆ.

ಅವರು ಪ್ರಸ್ತುತ ರೀಡರ್ಸ್ ಫೋರಂ ವತಿಯಿಂದ ಮಸ್ಕತ್ ಅಲ್ ಸೀಬ್ನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ‘ಮಾಧ್ಯಮ ಮತ್ತು ಪ್ರಜಾಪ್ರಭುತ್ವ’ ವಿಚಾರಣ ಸಂಕಿರಣದಲ್ಲಿ ಮಾತನಾಡುತ್ತಿದ್ದರು.

ದೇಶದಲ್ಲಿ ದಿನಬಳಕೆ ವಸ್ತುಗಳ ಬೆಲೆಗಳು ನಿರಂತರವಾಗಿ ಏರುತ್ತಿವೆ. ರೈತರ ಸಮಸ್ಯೆ ದ್ವಿಗುಣವಾಗುತ್ತಿದೆ. ಶಿಕ್ಷಣ, ಆರೋಗ್ಯ ಕ್ಷೇತ್ರವು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿವೆ. ಈ ಎಲ್ಲಾ ಗಂಭೀರ ಸಮಸ್ಯೆಗಳ ಬಗ್ಗೆ ಅಷ್ಟೇನೂ ಗಮನ ಹರಿಸದ ಮಾಧ್ಯಮಗಳು, ತಮ್ಮ ಟಿಆರ್ಪಿ ಹೆಚ್ಚಿಸಿಕೊಳ್ಳುವ ಸ್ವಾರ್ಥ ಹಿತಾಸಕ್ತಿಗಾಗಿ ಜಾತಿ ಧರ್ಮದ ಭಿನ್ನಾಭಿಪ್ರಾಯಗಳಿಗೆ ಮಸಾಲೆ ಬೆರೆಸಿ ಧರ್ಮಯುದ್ದವೆಂಬಂತೆ ಬ್ರೇಕಿಂಗ್ ನ್ಯೂಸ್, ಡಿಬೇಟ್ಗಳನ್ನು ಪ್ರಸಾರ ಮಾಡುತ್ತಿವೆ. ಅಲ್ಲದೇ, ಇನ್ನು ಕೆಲ ಮಾಧ್ಯಮಗಳು ಸೌಹಾರ್ಧವನ್ನು ಒಡೆಯುವ ಕೆಲಸ ಮಾಡುತ್ತಿರುವುದು ದೇಶದ ಅಭಿವದ್ಧಿಗೆ ಮಾರಕ ಎಂದು ಅಬ್ದುಲ್ ರಝಾಕ್ ಹೇಳಿದರು.

ಕಾರ್ಯಕ್ರಮವನ್ನು ಮೌಲಾನ ರಿಯಾಝ್ ಗಂಗೊಳ್ಳಿ  ಉದ್ಘಾಟಿಸಿದರು. ವೇದಿಕೆಯಲ್ಲಿ ಪ್ರಸ್ತುತ ರೀಡರ್ಸ್ ಫಾರಂ ಅಧ್ಯಕ್ಷ ಮುಹಮ್ಮದ್ ಅನ್ವರ್, ಒಮಾನ್’ನ ಝೈನ್ ಮಲ್ಟಿಮೀಡಿಯಾ ಕಂಪೆನಿಯ ಮಾಲಕ ನಝೀರ್ ಕೊಡಿಂಬಾಡಿ, ವೌಲಾನಾ ಮಕ್ಸೂದ್ ಚಂದಾವರ ಉಪಸ್ಥಿತರಿದ್ದರು.

Click to comment

Leave a Reply

Your email address will not be published. Required fields are marked *

To Top
error: Content is protected !!