ಹನಿ ಸುದ್ದಿ

ಚುನಾವಣೆಯನ್ನೇ ಬಹಿಷ್ಕರಿಸಿದ ಗುಜರಾತಿನ ಗಜಡಿ ಗ್ರಾಮಸ್ಥರು: ಶೂನ್ಯ ಮತದಾನ

ವರದಿಗಾರ (10.12.2017): ಗ್ರಾಮವನ್ನು ಹೆಚ್ಚಾಗಿ ಕಾಡುತ್ತಿರುವ ನೀರಿನ ಸಮಸ್ಯೆಯಿಂದ ಬೇಸತ್ತ ಗ್ರಾಮಸ್ಥರು ಚುನಾವಣೆಯನ್ನೇ ಬಹಿಷ್ಕರಿಸಿದ ಘಟನೆಯು ಗುಜರಾತಿನ ಮೋರ್ಬಿ ಜಿಲ್ಲೆಯ ಗಜಡಿ ಗ್ರಾಮದಿಂದ ವರದಿಯಾಗಿದೆ.

ಗಜಡಿ ಗ್ರಾಮದ ಮತಗಟ್ಟೆಯಲ್ಲಿ ನೋಂದಾವಣೆಗೊಂಡಿದ್ದ 1000 ಮತದಾರರಲ್ಲಿ ಯಾರೂ ಮತದಾನ ಮಾಡಲು ಮುಂದೆ ಬರಲೇ ಇಲ್ಲ. ಇನ್ನು ಮತದಾನ ನಡೆಸುವಂತೆ ಜಿಲ್ಲಾಡಳಿತ ನಡೆಸಿದ ಪ್ರಯತ್ನವೂ ವಿಫಲವಾಗಿದೆ.

ತಮ್ಮ ಮೂಲಭೂತವಾದ ನೀರಿನ ಅವಶ್ಕಕತೆಯನ್ನು ಪೂರ್ತಿಗೊಳಿಸದಿದ್ದಲ್ಲಿ ಚುನಾವಣೆ ಬಹಿಷ್ಕರಿಸುವುದಾಗಿ ಗ್ರಾಮಸ್ಥರು ಹಲವು ತಿಂಗಳುಗಳ ಮೊದಲೇ ಎಚ್ಚರಿಕೆ ನೀಡಿದ್ದರು ಎನ್ನಲಾಗಿದೆ.

‘ಗುಜರಾತ್ ಅಭಿವೃದ್ಧಿ ಮಾದರಿ’ ಇದುವೇ ಎಂದು ಜನರು ಪ್ರಶ್ನಿಸುತ್ತಿದ್ದಾರೆ.

To Top
error: Content is protected !!
WhatsApp chat Join our WhatsApp group