ರಾಷ್ಟ್ರೀಯ ಸುದ್ದಿ

ಅಬ್ಬಾ ..!! ‘ಪ್ರಧಾನ ಸೇವಕ’ ರ ನೇತೃತ್ವದಲ್ಲಿರುವ ಸರ್ಕಾರದ ಕೆಲಸ ಕಾರ್ಯಗಳ ಜಾಹೀರಾತು ವೆಚ್ಚ ಎಷ್ಟು ಗೊತ್ತೇ?,

ಮಾಹಿತಿ ಹಕ್ಕು ಕಾಯ್ದೆಯನ್ವಯ ದೊರೆತ ಮಾಹಿತಿ

ವರದಿಗಾರ (10.12.2017) : ಮಾಹಿತಿ ಹಾಗೂ ಪ್ರಸಾರ ಸಚಿವಾಲಯದಿಂದ ಆರ್ ಟಿ ಐ ಅರ್ಜಿಯೊಂದಕ್ಕೆ ದೊರೆತ ಉತ್ತರದ ಪ್ರಕಾರ, ಮೋದಿ ನೇತೃತ್ವದ ಕೇಂದ್ರ ಸರಕಾರವು ತನ್ನ ಕಾರ್ಯಕ್ರಮಗಳ ಜಾಹೀರಾತು ಹಾಗೂ ಪ್ರಚಾರಕ್ಕಾಗಿ ಮೂರುವರೆ ವರ್ಷಗಳಲ್ಲಿ ಬರೋಬ್ಬರಿ 3755 ಕೋಟಿ ರೂಪಾಯಿಗಳನ್ನು ವ್ಯಯಿಸಿದೆ .

2014ರ ಏಪ್ರಿಲ್ ತಿಂಗಳಿಂದ 2017 ಅಕ್ಟೋಬರ್ ವರೆಗೆ ಕೇಂದ್ರ ಸರಕಾರವು ರೂ.37,54,06,23,616 ಇಲೆಕ್ಟ್ರಾನಿಕ್ ಮಾಧ್ಯಮ, ಪ್ರಿಂಟ್ ಮಾಧ್ಯಮ ಹಾಗೂ ಹೊರಾಂಗಣ ಜಾಹೀರಾತಿನ ಮೂಲಕ ತನ್ನ ಕಾರ್ಯಕ್ರಮಗಳನ್ನು ಪ್ರಚಾರಪಡಿಸಲು ಕೇಂದ್ರ ಸರಕಾರ ವ್ಯಯಿಸಿದೆ.

ಗ್ರೇಟರ್ ನೋಯ್ಡಾದ ಸಾಮಾಜಿಕ ಕಾರ್ಯಕರ್ತ ರಾಮ್ ವೀರ್ ತನ್ವರ್ ಈ ವಿವರಗಳಿಗಾಗಿ ಮಾಹಿತಿ ಹಕ್ಕು ಅರ್ಜಿಯನ್ನು ಸಲ್ಲಿಸಿದ್ದರು.

ಲಭ್ಯವಾದ ಮಾಹಿತಿಯ ಪ್ರಕಾರ ಕೇಂದ್ರ ಸರಕಾರವು 1656 ಕೋಟಿ ರೂಪಾಯಿಗಳನ್ನು ಇಲೆಕ್ಟ್ರಾನಿಕ್ ಮಾಧ್ಯಮದ ಜಾಹೀರಾತಿಗಾಗಿ ವ್ಯಯಿಸಿದೆ. ಪ್ರಿಂಟ್ ಮಾಧ್ಯಮದಲಿ ಜಾಹೀರಾತಿಗಾಗಿ ಸರಕಾರವು 1656 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದ್ದು. ಅದೇ ರೀತಿ ಹೊರಾಂಗಣ ಜಾಹೀರಾತಿಗಾಗಿ ಕೇಂದ್ರ ಸರಕಾರವು 399 ಕೋಟಿ ರೂಪಾಯಿಗಳನ್ನು ವ್ಯಯಿಸಿದ್ದು ಬೆಳಕಿಗೆ ಬಂದಿದೆ.

Click to comment

Leave a Reply

Your email address will not be published. Required fields are marked *

To Top
error: Content is protected !!
WhatsApp chat Join our WhatsApp group