ಬುಲೆಟ್

ಬೇಕಾಗಿದೆ…!!! -ಬುಲೆಟ್ ಅಂಕಣದಲ್ಲಿ ಅನ್ಸಾರ್ ಕಾಟಿಪಳ್ಳ

ಬುಲೆಟ್- ಅನ್ಸಾರ್ ಕಾಟಿಪಳ್ಳ

ಪ್ರಣಾಳಿಕೆಯ ಅತಿಬುದ್ದಿ
ಪ್ರಜೆಗಳಿಗದು ತಿಳಿದಾಗಿದೆ…
ಚಪ್ಪಾಳೆಯ ಸ್ವರ ಸದ್ದು
ವೇದಿಕೆಯೆದುರು ಬರಿದಾಗಿದೆ…!

ಪ್ರಚೋದನೆಯೇ ಅಭಿವೃದ್ದಿ
ಆಶ್ವಾಸನೆಯೂ ಪೊಳ್ಳಾಗಿದೆ…
ಸಂವಿಧಾನವೇ ಬಲವೃದ್ದಿ
ಉಳಿಸುವಲಿ ಸೋಲಾಗಿದೆ…!

ಮೇಲೇರಿದವರು ಅಮಲೇರಿ
ಮತ ಮಮತೆಗೆ ನೋವಾಗಿದೆ…
ಸಾಮಾನ್ಯನ ಬೆವರೊಳಗೂ
ಸೋಮಾರಿಯ ಬಿಸಿತಟ್ಟಿದೆ…!

ಅಲೆ ಮೋಡಿಯ ಗುಣಗಾನಕೆ
ಪ್ರಜೆ ಮನಸದು ಮರುಳಾಗಿದೆ…
ಕುಳ ಮಾಧ್ಯಮದ ಸ್ವರದೊಳಗೆ
ಧನ ಸೇರಿದ ಅರಿವಾಗಿದೆ…!

ವರ ಬಾಡಿದರೆ ನೆಲ ಸಹಿಸದು
ಪ್ರಜೆ ಮುನಿದರೆ ನೀ ಬಾಡಿದೆ…
ನೆಲ ಊರಲು ಬಳಿ ನಿಲ್ಲು ಬಾ
ಜನ ಕೊರತೆಗೆ ಕೈ ಕೇಳಿದೆ…!

ಸೌಹಾರ್ದತೆಯೇ ಜಗಶುದ್ದಿ
ಅರ್ಥೈಸುವರ ಹುಡುಕಾಡಿದೆ…
ಹೊಂದಾಣಿಕೆಯ ಸವಿಯೊಂದಿಗೆ
ಬಳಿ ಭಾಗ್ಯವು ಬೇಕಾಗಿದೆ…!

 

To Top
error: Content is protected !!
WhatsApp chat Join our WhatsApp group