ರಾಷ್ಟ್ರೀಯ ಸುದ್ದಿ

ಜಿಗ್ನೇಶ್ ಮೇವಾನಿ ಮೇಲೆ ಎರಡು ದಿನಗಳಲ್ಲಿ 4 ದಾಳಿಗಳು: “ಆಕ್ರಮಣಕಾರರು ಬಿಜೆಪಿಗರಾಗಿದ್ದರು”

ವರದಿಗಾರ (06.12.2017): ಗುಜರಾತ್ ಚುನಾವಣೆಯಲ್ಲಿ ಬಿಜೆಪಿಗೆ ತೀವ್ರ ತಲೆ ನೋವಾಗಿರುವ ಊನಾ ಚಳುವಳಿಯ ನೇತಾರ, ದಲಿತ ನಾಯಕ ಜಿಗ್ನೇಶ್ ಮೇವಾನಿ ಮೇಲೆ ಎರಡು ದಿನಗಳಲ್ಲಿ ನಾಲ್ಕು ದಾಳಿಗಳು ನಡೆದಿವೆ. ಬಿಜೆಪಿಗರು ದಾಳಿ ನಡೆಸಿದ್ದಾರೆಂದು ಸ್ವತಃ ಜಿಗ್ನೇಶ್ ಮೇವಾನಿ ಹಾಗೂ ಪ್ರತ್ಯಕ್ಷದರ್ಶಿಗಳು ಆರೋಪಿಸಿದ್ದಾರೆ.

ಆದರೆ ಈ ರೀತಿಯ ಆಕ್ರಮಣಗಳಿಂದ ತಾನು ಭಯಪಡುವುದಿಲ್ಲ ಹಾಗೂ ಬಾಗುವುದಿಲ್ಲವೆಂದೂ, ಬಿಜೆಪಿಯನ್ನು ಸೋಲಿಸಿಯೇ ತೀರುತ್ತೇನೆ ಎಂದೂ ಜಿಗ್ನೇಶ್ ಟ್ವೀಟ್ ಮೂಲಕ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.

ಇನ್ನೊಂದು ಟ್ವೀಟ್ ಮೂಲಕ ಜಿಗ್ನೇಶ್, ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ “ನಾನೂ ಗುಜರಾತಿನ ಮಗನಾಗಿದ್ದೇನೆ. ಎದೆ 56 ಇಂಚು ಇದ್ದರೂ,ಇಲ್ಲದಿದ್ದರೂ ಪರವಾಗಿಲ್ಲ. ಆದರೆ, ಹೃದಯ ವಿಶಾಲವಾಗಿರಲಿ. ವಿಜಯಿಯಾಗುವವರ ಮೇಲೆ ಹಲ್ಲೆ ನಡೆಸುವ ಐಡಿಯಾ ನಿಮ್ಮದೋ ಅಥವಾ ಅಮಿತ್ ಶಾರದ್ದೋ ಗೊತ್ತಿಲ್ಲ. ಆದರೆ, ಇದು ಗುಜರಾತಿನ ಪರಂಪರೆಯಲ್ಲ” ಎಂದು ಪ್ರಧಾನಿಯನ್ನು ಕುಟುಕಿದ್ದಾರೆ.

ನಾಲ್ಕನೆಯ ದಾಳಿಯು ಅವರ ಕಾರಿನ ಮೇಲೆ ನಡೆದಿತ್ತು. ಪ್ರತ್ಯಕ್ಷದರ್ಶಿಗಳ ಪ್ರಕಾರ ಬಿಜೆಪಿಯ ಚುನಾವಣಾ ಚಿಹ್ನೆಯನ್ನು ಕೈಯಲ್ಲಿ ಹಿಡಿದಿದ್ದ ಕೆಲವರು ದೊಣ್ಣೆಯಿಂದ ಜಿಗ್ನೇಶ್ ರ ಕಾರಿನ ಗಾಜನ್ನು ಪುಡಿ ಮಾಡಿದ್ದಾರೆ ಎಂದಿದ್ದಾರೆ.

Click to comment

Leave a Reply

Your email address will not be published. Required fields are marked *

To Top
error: Content is protected !!