ರಾಜ್ಯ ಸುದ್ದಿ

ರಾಜ್ಯದಲ್ಲಿನ ಬಿಜೆಪಿಯ ದಾಂಧಲೆಗಳು ಅಮಿತ್ ಶಾ ಆಜ್ಞೆಯ ಪ್ರಕಾರ ನಡೆಯುತ್ತಿವೆಯೇ?

ವರದಿಗಾರ (ಡಿ.03):  ಹೀಗೊಂದು ಪ್ರಶ್ನೆ ಈಗ ಜನರ ಮಧ್ಯೆ ಹರಿದಾಡುತ್ತಿದೆ. ಕಳೆದ ಬಾರಿ ಅಮಿತ್ ಶಾ ರಾಜ್ಯ ಭೇಟಿಯ ನಂತರ ಬಿಜೆಪಿಯು ವಿನಾ ಕಾರಣಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ, ಧರಣಿಗಳನ್ನು ನಡೆಸುತ್ತಾ ಆ ಹೆಸರಿನಲ್ಲಿ ಹಲವು ಬಾರಿ ದಾಂಧಲೆಗಳನ್ನು ನಡೆಸಿದೆ.

ಅದರ ಮುಂದುವರಿದ ಭಾಗವೆಂಬಂತೆ ಇಂದು ಹುಣಸೂರಿನಲ್ಲಿ ನಡೆದ ಘಟನೆ ಎನ್ನಲಾಗಿದೆ. ಇದಕ್ಕೆ ಪೂರಕವೆಂಬಂತೆ ಮೈಸೂರು ಸಂಸದ ಪ್ರತಾಪ್ ಸಿಂಹ ಅವರ ವೀಡಿಯೋ ಒಂದು ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದ್ದು, ಅದರಲ್ಲಿ ಅವರೇ ಹೇಳಿಕೊಂಡಿರುವಂತೆ ಕಳೆದ ಬಾರಿ ಅಮಿತ್ ಶಾ ಭೇಟಿಯ ವೇಳೆ ಲಾಠಿ ಚಾರ್ಜ್, ಕೇಸು ದಾಖಲಾಗುವಂತಹಾ “ಉಗ್ರ” ಪ್ರತಿಭಟನೆಗಳನ್ನು ಮಾಡಬೇಕೆಂದು ಕರೆ ಕೊಟ್ಟಿದ್ದರೆಂದು ಹೇಳಿದ್ದಾರೆ. ಅವರ ಹೇಳಿಕೆಯ ಪ್ರಕಾರವೇ ಇಂದಿನ ಮೆರವಣಿಗೆ ನಡೆದಿದೆ ಎಂಬ ಸಂದೇಹವಿದೆ ಎಂದು ಸಾರ್ವಜನಿಕರು ಹೇಳಿಕೊಳ್ಳುತ್ತಿದ್ದಾರೆ.

ನಿಷೇದಾಜ್ಞೆ ಇರುವಾಗ ಮೆರವಣಿಗೆ ಮಾಡಿದ್ದೂ ಅಲ್ಲದೆ, ಪೊಲೀಸ್ ಇಲಾಖೆ ಅನುಮತಿ ನೀಡದ ಪ್ರದೇಶದ ಕಡೆ ಮೆರವಣಿಗೆ ಸಾಗುವಂತೆ ಮಾಡಿ ಮೆರವಣಿಗೆಯನ್ನು “ಉಗ್ರ”ವಾಗಿಸಿದ್ದಾರೆಂದು ಸಾರ್ವಜನಿಕರು ಅಭಿಪ್ರಾಯಿಸಿದ್ದಾರೆ. ಪೊಲೀಸರು ಕೂಡಾ ಅನ್ಯ ಮಾರ್ಗವಿಲ್ಲದೆ ಲಾಠಿ ಚಾರ್ಜ್ ಮಾಡಿದ್ದಾರೆನ್ನಲಾಗಿದೆ. ಶಾಂತಿ ಕಾಪಾಡುವ ನಿಟ್ಟಿನಲ್ಲಿ ಲಾಠಿ ಚಾರ್ಜ್ ಅನಿವಾರ್ಯವಾಗಿತ್ತೆನ್ನುವುದು ಪ್ರತ್ಯಕ್ಷದರ್ಶಿಗಳ ಹೇಳಿಕೆಯಾಗಿದೆ.

Click to comment

Leave a Reply

Your email address will not be published. Required fields are marked *

To Top
error: Content is protected !!