ರಾಜ್ಯ ಸುದ್ದಿ

ಇಂದಿರಾ ಕ್ಯಾಂಟೀನ್ ಬಳಿಕ ಈಗ ‘ರಮ್ಯಾ ಕ್ಯಾಂಟೀನ್’ ! ಇಲ್ಲಿ 10 ರೂಪಾಯಿಗೆ ಊಟ – ತಿಂಡಿ ಸಿಗುತ್ತೆ !

ವರದಿಗಾರ (03.12.2017) : ರಾಜ್ಯ ಸರ್ಕಾರದ ವತಿಯಿಂದ ಪ್ರಾರಂಭಗೊಂಡಿದ್ದ ‘ಇಂದಿರಾ ಕ್ಯಾಂಟೀನ್’ ನ ಯಶೋಗಾಥೆಯ ನಂತರ ಈಗ ಮಂಡ್ಯದ ಮಾಜಿ ಸಂಸದೆ ಮತ್ತು ಕಾಂಗ್ರೆಸಿನ ಸಾಮಾಜಿಕ ತಾಣದ ಮುಖ್ಯಸ್ಥೆಯಾಗಿರುವ ಮಾಜಿ ನಟಿ ರಮ್ಯಾರವರ ಹೆಸರಿನಲ್ಲಿ ಅವರ ಅಭಿಮಾನಿಯೋರ್ವ “ರಮ್ಯಾ ಕ್ಯಾಂಟೀನ್” ಪ್ರಾರಂಭಿಸಿದ್ದಾರೆ.

ಕಳೆದ 15 ವರ್ಷಗಳಿಂದ ಮಂಡ್ಯದ ರಸ್ತೆ ಬದಿಯಲ್ಲಿ ಕ್ಯಾಂಟೀನ್ ನಡೆಸುತ್ತಿದ್ದ ರಘು ಎನ್ನುವವರೇ ಈ ಕ್ಯಾಂಟೀನನ್ನು ಪ್ರಾರಂಭಿಸಿರುವ ರಮ್ಯಾರವರ ಅಭಿಮಾನಿ. ಈ ಬಗ್ಗೆ ಹೇಳಿದ ರಘು ಅವರು, ರಮ್ಯಾರವರು ಸಂಸದರಾಗಿದ್ದ ಸಂದರ್ಭದಲ್ಲಿ ಉತ್ತಮ ಕೆಲಸ ಕಾರ್ಯಗಳನ್ನು ಮಾಡಿದ್ದಾರೆ. ಪ್ರತಿ ಹಳ್ಳಿಗಳಿಗೆ ಭೇಟಿ ಮಾಡಿ ಜನರ ಕಷ್ಟ ಆಲಿಸಿದ್ದಾರೆ. ಹಾಗಾಗಿ ಅವರ ಹೆಸರಿನಲ್ಲಿ ಕ್ಯಾಂಟೀನ್ ಆರಂಭಿಸಲು ತೀರ್ಮಾನಿಸಿದೆ ಎಂದು ಅವರು ತಿಳಿಸಿದ್ದಾರೆ.

ಈ ಕ್ಯಾಂಟೀನಿನಲ್ಲಿ ಪ್ರತಿ ತಿಂಡಿಗಳಿಗೆ ಕೇವಲ ಹತ್ತು ರೂಪಾಯಿ ಬೆಲೆ ನಿಗದಿಪಡಿಸಲಾಗಿದೆ. ‘ರಮ್ಯಾ ಕ್ಯಾಂಟೀನ್’ ಮಂಡ್ಯದ ಮಿಮ್ಸ್ ಆಸ್ಪತ್ರೆಯ ಪಕ್ಕದಲ್ಲೇ ಇದ್ದು, ಜಿಲ್ಲೆಯ ಬಹುತೇಕ ಬಡ ಜನರು ಚಿಕಿತ್ಸೆಗಾಗಿ ಆಸ್ಪತ್ರೆಗೆ ಬರುತ್ತಾರೆ. ಕನಿಷ್ಟ ಬೆಲೆಯಲ್ಲಿ ರಮ್ಯಾ ಕ್ಯಾಂಟೀನಿನಲ್ಲಿ ದೊರೆಯುವ ಊಟ-ತಿಂಡಿಗಳು ಆ ಬಡ ಜನರಿಗೆ ಖಂಡಿತವಾಗಿಯೂ ನೆರವಾಗಲಿದೆ ಎಂಬುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ

Click to comment

Leave a Reply

Your email address will not be published. Required fields are marked *

To Top
error: Content is protected !!
WhatsApp chat Join our WhatsApp group