ನಾಗ್ಪುರದ ಕಛೇರಿಯಲ್ಲಿ ತ್ರಿವರ್ಣ ಧ್ವಜ ಹಾರಾಡಿಸಿದ್ದಕ್ಕಾಗಿ ಯುವಕರನ್ನು 12 ವರ್ಷ ನ್ಯಾಯಾಲಯದ ಮುಂದೆ ಅಲೆದಾಡಿಸಿದ ಆರೆಸ್ಸೆಸ್

ವರದಿಗಾರ-2001ರಲ್ಲಿ ನಾಗ್ಪುರದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಛೇರಿಯಲ್ಲಿ ತ್ರಿವರ್ಣ ಧ್ವಜ ಹಾರಿಸಿದಕ್ಕಾಗಿ ಮೂವರು ದೇಶಪ್ರೇಮಿ ಯುವಕರ ಮೇಲೆ ಕೇಸು ದಾಖಲಾಗಿತ್ತು. ಹನ್ನೆರಡು ವರ್ಷಗಳ ನಂತರ ನ್ಯಾಯಾಲಯ ಅವರನ್ನು ದೋಷಮುಕ್ತಗೊಳಿಸಿತ್ತು. ನಂಬಲಸಾಧ್ಯ..ಅಲ್ಲವೇ?

ಹೌದು..2002 ರ ತನಕ ಆರೆಸ್ಸೆಸ್ ತನ್ನ ಕಛೇರಿಯಲ್ಲಿ ತ್ರಿವರ್ಣ ಧ್ವಜವನ್ನು ಹಾರಾಡಿಸಿರಲಿಲ್ಲ. ಅವರು ಭಗವಾಧ್ವಜಕ್ಕೆ ಮಾತ್ರ ಗೌರವ ವಂದನೆ ಸಲ್ಲಿಸುತ್ತಿದ್ದರು. 2001, ಜನವರಿ 26ರಂದು ಸ್ಥಳೀಯ ಸಂಘಟನೆಯೊಂದರ ಕೆಲವು ಸದಸ್ಯರು ನಾಗ್ಪುರ್ ನಲ್ಲಿರುವ ಆರೆಸ್ಸೆಸ್ ಮುಖ್ಯ ಕಛೇರಿಯನ್ನು ಪ್ರವೇಶಿಸಿ ಬಲವಂತವಾಗಿ, ದೇಶಭಕ್ತಿಯ ಘೋಷಣೆಗಳೊಂದಿಗೆ ತ್ರಿವರ್ಣ ಪತಾಕೆಯನ್ನು ಹಾರಿಸಿದರು. ಕಛೇರಿಯ ಉಸ್ತುವಾರಿಯಾಗಿದ್ದ ಸುನಿಲ್ ಕತ್ಲೆ ಯುವಕರನ್ನು ತಡೆಯಲು ವಿಫಲ ಪ್ರಯತ್ನವನ್ನೂ ನಡೆಸಿದ್ದ. ನಂತರ ಆರೆಸ್ಸೆಸ್ ‘ರಾಷ್ಟ್ರಪ್ರೇಮಿ ಯುವ ದಳ್’ ಸಂಘಟನೆಗೆ ಸೇರಿದ್ದ ಮೂವರ ವಿರುಧ್ಧ ಕೇಸು ದಾಖಲಿಸಿತ್ತು. ಬಾಬಾ ಮೆಂಧೆ, ರಮೇಶ್ ಕಲಂಬೆ ಹಾಗೂ ದಿಲೀಪ್ ಚಟ್ಟಾನಿಯನ್ನು ಸ್ಥಳೀಯ ನ್ಯಾಯಾಲಯ, ಸುಧೀರ್ಘ 12 ವರ್ಷಗಳ ಕಾನೂನು ಸಮರದ ಬಳಿಕ, 2012ರಲ್ಲಿ ಸಾಕ್ಷ್ಯದ ಕೊರತೆಯನ್ನು ಉಲ್ಲೇಖಿಸಿ ದೋಷಮುಕ್ತಗೊಳಿಸಿತು.

ಮಾತೆತ್ತಿದರೆ ದೇಶಪ್ರೇಮದ ಕುರಿತು ಉದ್ದುದ್ದ ಭಾಷಣ ಬಿಗಿಯುವ ಆರೆಸ್ಸೆಸ್ಸಿನ ಮಂದಿಯ ನೈಜ ದೇಶಪ್ರೇಮದ ಕುರಿತು ಜನರಿಗೆ ಮನವರಿಕೆಯಾಗಿದ್ದೇ ಈ ಘಟನೆಯ ನಂತರ. ಆದರೆ ಕೆಲವೊಂದು ಸ್ಥಾಪಿತ ಹಿತಾಸಕ್ತಿಗಳ ಮಧ್ಯಪ್ರವೇಶದಿಂದಾಗಿ ಈ ಘಟನೆಗೆ ಸಿಗಬೇಕಾಗಿದ್ದ ಗಂಭೀರತೆ ಸಿಗದೇ ಹೋದದ್ದು ಮಾತ್ರ ವಿಪರ್ಯಾಸ

error: Content is protected !!
%d bloggers like this:
Inline
Inline