ರಾಷ್ಟ್ರೀಯ ಸುದ್ದಿ

ಆಸ್ಪತ್ರೆಯಲ್ಲಿ ವೈದ್ಯರಿಂದ ಮರಣ ಹೊಂದಿದೆಯೆಂದು ಘೋಷಿಸಲಾದ ಮಗು ಜೀವಂತ ! ದೆಹಲಿಯಲ್ಲೊಂದು ಹೃದಯ ವಿದ್ರಾವಕ ಘಟನೆ

ವರದಿಗಾರ (01.12.2017) : ವೈದ್ಯರ ನಿರ್ಲಕ್ಷ್ಯದ ಪರಿಣಾಮ ಆಸ್ಪತ್ರೆಯಲ್ಲಿ ಮರಣಹೊಂದಿದೆ ಎನ್ನಲಾದ ಮಗುವೊಂದು ಜೀವಂತವಿದ್ದ ಆಘಾತಕಾರಿ ಘಟನೆ ದೆಹಲಿಯಲ್ಲಿ ವರದಿಯಾಗಿದೆ.

ದೆಹಲಿಯ ಶಾಲಿಮಾರ್ ಭಾಗಿನ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, 22 ವಾರಗಳ,  ನಿಗದಿತ ಅವಧಿಗಿಂತ ಮುಂಚೆ ಜನಿಸಿದ್ದ ಅವಳಿ ಮಕ್ಕಳಲ್ಲಿ ಒಂದು ಮಗು ಜೀವಂತವಿಲ್ಲ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದರು. ಅದರಂತೆ ಅಂತಿಮ ಕಾರ್ಯಕ್ಕಾಗಿ ಅದನ್ನು ತೆಗೆದುಕೊಂಡು ಹೋಗುತ್ತಿರುವ ಸಂದರ್ಭದಲ್ಲಿ ಮಗು ಜೀವಂತವಿರುವ ಕುರಿತು ತಿಳಿದುಬಂದಿದೆ.

ಈ ಕುರಿತು ಆಸ್ಪತ್ರೆಯ ಅಧಿಕಾರಿಗಳು ಹೇಳಿಕೆಯೊಂದನ್ನು ನೀಡಿದ್ದು, ‘ನವಂಬರ್ 30 ರಂದು ಜನಿಸಿದ್ದ ಅವಳಿ ಮಕ್ಕಳಲ್ಲಿ ಒಂದು ಮಗು ಆಸ್ಪತ್ರೆಯ ನರ್ಸಿಂಗ್ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿತ್ತು. ಆದರೆ ಮಗು ಮರಣಹೊಂದಿದೆ ಎಂದು ಭಾವಿಸಿದ ವದ್ಯರು ಅದನ್ನು ಪೋಷಕರಿಗೆ ಹಸ್ತಾಂತರಿಸಿದ್ದಾರೆ. ಆದರೆ ಆ ಮಗು ಜೀವಂತವಿರುವುದಾಗಿ ತಿಳಿದು ಬಂದಿದ್ದು, ಇದಕ್ಕೆ ಕಾರಣಕರ್ತನಾದ ವೈದ್ಯರನ್ನು ರಜೆಯ ಮೇಲೆ ತೆರಳುವಂತೆ ಆದೇಶಿಸಲಾಗಿದ್ದು, ಸೂಕ್ತ ತನಿಖೆಯನ್ನು ನಡೆಸುವುದಾಗಿ ಆಸ್ಪತ್ರೆಯ ಮೂಲಗಳು ತಿಳಿಸಿವೆ. ಆಸ್ಪತ್ರೆಯ ಅಧಿಕಾರಿಗಳು ಮಗುವಿನ ಪೋಷಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ತಿಳಿಸಿದ್ದಾರೆ.

Click to comment

Leave a Reply

Your email address will not be published. Required fields are marked *

To Top
error: Content is protected !!
WhatsApp chat Join our WhatsApp group