ಹನಿ ಸುದ್ದಿ

ಎಐಯುಡಿಎಫ್ ಮಾಜಿ ಶಾಸಕನಿಂದ ಕೋಮು ಪ್ರಚೋದಕ ಹೇಳಿಕೆ; ಆತನಿಂದ ಮೈಕ್ ಕಿತ್ತುಕೊಂಡು ವೇದಿಕೆಯಲ್ಲೇ ಅಮಾನತು ಮಾಡಿದ ಬದ್ರುದ್ದೀನ್ ಅಜ್ಮಲ್!

ವರದಿಗಾರ 29-11-2017 : ನವೆಂಬರ್ 27ರಂದು ಅಸ್ಸಾಮಿನ ಗೋಲ್ಪಾರ ಜಿಲ್ಲೆಯ ಸೊನಾರಿಯಲ್ಲಿ ನಡೆದ ಸಭೆಯೊಂದರಲ್ಲಿ ಎಐಯುಡಿಎಫ್ ಪಕ್ಷದ ನಾಯಕರಲ್ಲೋರ್ವರಾದ, ಮಾಜಿ ಶಾಸಕ ಶಾಹ್ ಆಲಂ ಅವರು ಕೋಮುಪ್ರಚೋದಕ ಹೇಳಿಕೆಯನ್ನು ನೀಡಿದ್ದರು. ಅಸ್ಸಾಮಿನಲ್ಲಿ ಮುಸ್ಲಿಮರು ಹಿಂದೂಗಳಿಗಿಂತ ಹೆಚ್ಚಿದ್ದಾರೆ ಹಾಗೂ ಅವರು ಹಿಂದೂಗಳ ಮೇಲೆ ಧಾಳಿ ನಡೆಸಬೇಕು” ಎಂದಿದ್ದರು. ಪಕ್ಷದ ಸರ್ವೋಚ್ಚ್ಚ ನಾಯಕ, ಸುಗಂಧ ದ್ರವ್ಯ ದೊರೆ ಬದ್ರುದ್ದೀನ್ ಅಜ್ಮಲ್ ಅವರು ಕೂಡಲೇ ಶಾಹ್ ಆಲಂ ರಿಂದ ಮೈಕ್ ಕಿತ್ತುಕೊಂಡು ವೇದಿಕೆಯಲ್ಲಿಯೇ ಅವರನ್ನು ಪಕ್ಷದಿಂದ ಅಮಾನತು ಮಾಡಿದ ಘಟನೆ ಬೆಳಕಿಗೆ ಬಂದಿದೆ.

ಮರುದಿನವೇ ಶಾಹ್ ಆಲಂ ಅವರು, ಬದ್ರುದ್ದೀನ್ ಅಜ್ಮಲ್ ರ ವಿರುದ್ಧ ಸರ್ವಾಧಿಕಾರಿ ಧೋರಣೆಯನ್ನು ಆರೋಪಿಸಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.

ಅದರ ನಂತರ, ಪಕ್ಷದ ಕಾರ್ಯದರ್ಶಿ ಚಂಪಕ್ ಕಲಿತಾ ಮಾಧ್ಯಮಗಳಿಗೆ ಆದಿತ್ಯವಾರದ ಘಟನೆಯ ಬಗ್ಗೆ ಮಾಹಿತಿ ನೀಡಿದರು.

ತಾನು ಆ ರೀತಿಯ ಹೇಳಿಕೆ ನೀಡಿಲ್ಲವೆಂದೂ ಚಂಪಕ್ ಕಲಿತಾ ಅವರ ವಿರುದ್ಧ ಕೇಸು ದಾಖಲಿಸುವುದಾಗಿಯೂ ಶಾಹ್ ಆಲಮ್ ತಿಳಿಸಿದ್ದಾಗಿ ವರದಿಯಾದೆ.

To Top
error: Content is protected !!
WhatsApp chat Join our WhatsApp group