ಸುತ್ತ-ಮುತ್ತ

ಸೋಷಿಯಲ್ ಡೆಮಾಕ್ರಟಿಕ್ ಆಟೋ ಯೂನಿಯನ್ ವತಿಯಿಂದ ರಕ್ತದಾನ ಶಿಬಿರ

ವರದಿಗಾರ : ರಕ್ತದ ಅಗತ್ಯವಿರುವ ರೋಗಿಗಳಿಗೆ ರಕ್ತನೀಡೋಣ, ಜೀವ ಉಳಿಸೋಣ,ನಮ್ಮ ರಕ್ತ ಇತರರ ದೇಹದಲ್ಲಿ ಹರಿಯುವುದರಿಂದ ನಾವು ರಕ್ತ ಸಂಬಂಧಿಗಳಾಗೋಣ,ಉತ್ತಮ ಸಮಾಜವನ್ನು ಕಟ್ಟೋಣ ಎಂದು ಎಸ್.ಡಿ.ಪಿ.ಐ. ದ.ಕ ಜಿಲ್ಲಾದ್ಯಕ್ಷ ಹನೀಫ್ ಖಾನ್ ಕೊಡಾಜೆ ಹೇಳಿದರು. ಇವರು ಸೋಷಿಯಲ್ ಡೆಮಾಕ್ರಟಿಕ್ ಅಟೋ ಯೂನಿಯನ್,ಮಂಗಳೂರು ನಗರ ಸಮಿತಿ ಹಾಗೂ ಫಾದರ್ ಮುಲ್ಲರ್ ಆಸ್ಪತ್ರೆ, ಮಂಗಳೂರು. ಇದರ ಸಹಯೋಗದೋಂದಿಗೆ ಬದ್ರಿಯಾ ಕಾಲೇಜಿನಲ್ಲಿ ನಾವು ರಕ್ತಸಂಬಂಧಿಗಳಾಗೋಣ ಎಂಬ ತಲೆಬರಹದಡಿಯಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಮುಖ್ಯ ಭಾಷಣಗಾರರಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ಹಲವಾರು ಸಂದರ್ಭಗಳಲ್ಲಿ ತನ್ನ ಅಟೋದಲ್ಲಿ ಪ್ರಯಾಣಿಕರು ಮರೆತು ಹೋಗಿದ್ದ ಬೆಲೆಬಾಳುವ ವಸ್ತುಗಳು,ನಗದು ಗಳನ್ನು ವಾರೀಸುದಾರರಿಗೆ ತಲುಪಿಸಿ ಪ್ರಮಾಣಿಕತೆ ಮೆರೆದು ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾದ, ಕಳೆದ ನಲ್ವತ್ತು ವರುಷಗಳಿಂದ ಆಟೋ ಚಾಲನೆ ಮಾಡುತ್ತಿರುವ ಜೆಪ್ಪು ಮಹಾಕಾಳಿ ಪಡ್ಪುವಿನ ಅಟೋಚಾಲಕ ಕೆ.ಕೆ.ಇಬ್ರಾಹಿಂ ಅವರನ್ನು ಶಾಲುಹೊದಿಸಿ ಸನ್ಮಾನಿಸಲಾಯಿತು.

ಈ ಕಾರ್ಯಕ್ರಮದಲ್ಲಿ 107 ರಕ್ತ ದಾನಿಗಳು ಸ್ವಯಂಪ್ರೇರಿತವಾಗಿ ರಕ್ತ ನೀಡಿದರು. ಕಾರ್ಯಕ್ರಮ ದಲ್ಲಿ ಎಸ್ ಡಿಎಯು ಮಂಗಳೂರು ನಗರ ಸಮಿತಿ ಅಧ್ಯಕ್ಷ ರಾದ ನೌಫಲ್ ಕುದ್ರೋಳಿ ಅಧ್ಯಕ್ಷ ತೆ ವಹಿಸಿದ್ದರು. ಅಲ್ ಅಝ್ಹರಿಯಾ ಮದರಸದ ಮುಖ್ಯೋಪಾದ್ಯಾಯರಾದ ಬಶೀರ್ ಮದನಿ ದುವಾ ಆಶೀರ್ವಚನ ನೆರವೇರಿಸಿದರು. ಎಸ್ ಡಿಟಿಯು ರಾಜ್ಯಾಧ್ಯಕ್ಷರಾದ ಜಲೀಲ್ ಕೃಷ್ಣಾಪುರ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬದ್ರಿಯಾ ಕಾಲೇಜಿನ ಇತಿಹಾಸ ಪ್ರಾಧ್ಯಾಪಕರಾದ ಇಕ್ಬಾಲ್ ಮಾಸ್ಟರ್, ಫಾದರ್ ಮುಲ್ಲರ್ ಆಸ್ಪತ್ರೆಯ ಮೆಡಿಕಲ್ ವಿಭಾಗದ ಮುಖ್ಯಸ್ಥರಾದ ಡಾ!ಮಧನ್, ಕಂದಕ್ ವಾರ್ಡಿನ ಕಾರ್ಪೊರೇಟರಾದ ಲತೀಫ್ ಕಂದಕ್, ಪಾಪುಲರ್ ಫ್ರಂಟ್ ಮೆಡಿಕಲ್ ವಿಭಾಗದ
ಇಲ್ಯಾಸ್ ಬಜ್ಪೆ, ಎಸ್ ಡಿಟಿಯು ಜಿಲ್ಲಾ ಸಂಚಾಲಕರಾದ
ಯೂಸುಫ್ ಆಲಡ್ಕ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

‌ಎಸ್ ಡಿಎಯು ಸದಸ್ಯರಾದ ಮುಸ್ತಫಾ ಸ್ವಾಗತ ಭಾಷಣ ಮಾಡಿದರು.ಎಸ್ ಡಿಟಿಯು ಮಂಗಳೂರು ನಗರ ಸಂಚಾಲಕ ಅಮೀನ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Click to comment

Leave a Reply

Your email address will not be published. Required fields are marked *

To Top
error: Content is protected !!
WhatsApp chat Join our WhatsApp group