ರಾಷ್ಟ್ರೀಯ ಸುದ್ದಿ

ಕಸಾಯಿಖಾನೆಗಳಿಗೆ ಗೋ ಸಾಗಾಟ ನಿಷೇಧ ಕಾಯ್ದೆಯ ಅಧಿಸೂಚನೆ ವಾಪಾಸ್ ಪಡೆಯಲು ಮೋದಿ ಸರಕಾರ ನಿರ್ಧಾರ

ವರದಿಗಾರ (30.11.2017) : ಕಸಾಯಿಖಾನೆಗಳಿಗೆ ಗೋವುಗಳನ್ನು ಸಾಗಾಟ ಮಾಡುವುದರ ವಿರುದ್ಧವಿದ್ದ ನಿಷೇಧ ಕಾಯ್ದೆಯ ಅಧಿಸೂಚನೆಯನ್ನು ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಾಪಾಸ್ ಪಡೆದಿದೆ. ಹಲವು ರಾಜ್ಯಗಳು ಈ ಕುರಿತು ತಮ್ಮ ನಿಲುವುಗಳನ್ನು ಸರ್ಕಾರಕ್ಕೆ ತಿಳಿಸಿದ ಬಳಿಕ ಈ ನಿರ್ಧಾರವನ್ನು ತೆಗೆಯಲಾಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿದೆ.

ಪರಿಸರ ಮತ್ತು ಅರಣ್ಯ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಕೇಂದ್ರ ಕಾನೂನು ಇಲಾಖೆಗೆ ಈ ಕುರಿತು ಕಡತಗಳನ್ನು ಇದೀಗಾಗಲೇ ಕಳುಹಿಸಿದ್ದು, ‘ ಕೆಲವೊಂದು ಸಮಸ್ಯೆಗಳ ಕಾರಣದಿಂದಾಗಿ ನಾವು ಅಧಿಸೂಚನೆಯನ್ನು ವಾಪಾಸ್ ಪಡೆಯಲು ತೀರ್ಮಾನಿಸಿದ್ದು, ಸರಕಾರ ಪರಿಷ್ಕೃತ ಕಾಯ್ದೆಯನ್ನು ಜಾರಿಗೊಳಿಸುವುದಾಗಿ ಅಧಿಕಾರಿ ತಿಳಿಸಿದ್ದಾರೆ. ಆದರೆ ಪರಿಷ್ಕೃತ ಕಾಯ್ದೆಯನ್ನು ಜಾರಿಗೆ ತರುವ ಕಾಲಾವಧಿಯ ಕುರಿತು ಸರಕಾರ ಇನ್ನೂ ಯಾವುದೇ ಹೇಳಿಕೆ ನೀಡಿಲ್ಲ.

ಪ್ರಾಣಿಗಳ ಮಾರುಕಟ್ಟೆಗಳಿಂದ ಹತ್ಯೆಗಾಗಿ ಜಾನುವಾರುಗಳ ಮಾರಾಟ ಮತ್ತು ಖರೀದಿಯನ್ನು ನಿಷೇಧಿಸಿ, ಪ್ರಾಣಿಗಳ ವಿರುದ್ಧ ಕ್ರೌರ್ಯ ತಡೆಗಟ್ಟುವ ಅಡಿಯಲ್ಲಿ 2017 (ಜಾನುವಾರುಗಳ ನಿಯಂತ್ರಣ) ನಿಯಮಗಳ ಅಧಿಸೂಚನೆ ಇದಾಗಿದೆ. ಹಲವು ಸಂಸ್ಥೆಗಳು ಮತ್ತು ರಾಜಕೀಯ ಪಕ್ಷಗಳು ಈ ಕಾಯ್ದೆಯನ್ನು ” ಕೆಟ್ಟ ಯೋಜನೆ” ಎಂಬುದಾಗಿ ವ್ಯಾಖ್ಯಾನಿಸಿದ್ದರು. ಕಳೆದ ಮೇ ತಿಂಗಳಲ್ಲಿ ಮದ್ರಾಸ್ ಹೈಕೋರ್ಟ್ ನ ಮಧುರೈ ಬೆಂಚ್,  ಈ ಅಧಿಸೂಚನೆಗೆ ತಡೆ ಹಾಕಿತ್ತು. ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಕೋರ್ಟಿನಲ್ಲಿ ಹೂಡಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ದಾವೆಗೆ ಉತ್ತರಿಸುವಂತೆ ಕೋರಿತ್ತು. ಈ ಕಾಯ್ದೆಯು ಜನರ ಮೂಲಭೂತ ಹಕ್ಕಾದ ಆಹಾರದ ಆಯ್ಕೆಯ ಸ್ವಾತಂತ್ರ್ಯವನ್ನು ಕಸಿಯುತ್ತಿದೆಯೆಂಬುವುದು ಕೋರ್ಟ್ ನ ವಾದವಾಗಿತ್ತು.  ಮದ್ರಾಸ್ ಕೋರ್ಟ್,  ಜೂನ್ ನಲ್ಲಿ ಮತ್ತೂ ನಾಲ್ಕು ವಾರಗಳ ಕಾಲ ಈ ಕಾಯ್ದೆಗೆ ತಡೆಯನ್ನು ಮುಂದಿವರಿಸಿತ್ತು. ಜುಲೈನಲ್ಲಿ ಸುಪ್ರೀಮ್ ಕೋರ್ಟ್, ಮದ್ರಾಸ್ ಹೈಕೋರ್ಟಿನ ವಾದವನ್ನು ಎತ್ತಿ ಹಿಡಿಯಿತು ಮಾತ್ರವಲ್ಲ ತಡೆಯನ್ನು ಅದು ಅನಿರ್ಧಿಷ್ಟಾವಧಿಗೆ ಮುಂದುವರಿಸಿತು ಮತ್ತು ಅದು  ಇಡೀ ದೇಶಕ್ಕೆ ಅನ್ವಯವಾಗುತ್ತದೆ ಎಂದು ತೀರ್ಪು ನೀಡಿತ್ತು.

ಇದೀಗ ಅಧಿಸೂಚನೆಗೆ ಹಲವು ರಾಜ್ಯಗಳ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಅದನ್ನು ಮರು ಪರಿಷ್ಕರಿಸುವ ಕುರಿತು ಕೇಂದ್ರ ಸರಕಾರ ಭರವಸೆ ನೀಡಿದೆ. ಇದು ಹಲವರ ವಿರೋಧಕ್ಕೂ ಕಾರಣವಾಗುವ ಸಾಧ್ಯತೆಯಿದೆಯೆನ್ನಲಾಗಿದೆ.

Click to comment

Leave a Reply

Your email address will not be published. Required fields are marked *

To Top
error: Content is protected !!
WhatsApp chat Join our WhatsApp group