ಹನಿ ಸುದ್ದಿ

ಬಿಜೆಪಿಯಿಂದ ಅಂಬೇಡ್ಕರ್‌ ರ ಭಾವಚಿತ್ರಕ್ಕೆ ಅವಮಾನ: ಕ್ಷಮೆ ಯಾಚಿಸಲು ದಿನೇಶ್ ಗೂಂಡೂರಾವ್ ಒತ್ತಾಯ

ವರದಿಗಾರ(30.11.2017): ಭಾರತೀಯ ಜನತಾ ಪಾರ್ಟಿ(ಬಿಜೆಪಿ) ಕಚೇರಿಯಲ್ಲಿ ಇತ್ತೀಚೆಗೆ ಸಂವಿಧಾನ ಶಿಲ್ಫಿ ಡಾ| ಬಿ.ಆರ್. ಅಂಬೇಡ್ಕರ್‌ ರವರ ಭಾವಚಿತ್ರವನ್ನು ಕಸ ಹಾಕುವ ಜಾಗದಲ್ಲಿ ಇಟ್ಟಿದ್ದು, ಇದು ಅಕ್ಷಮ್ಯ. ಈ ಬಗ್ಗೆ ಬಿಜೆಪಿ ಕ್ಷಮೆ ಯಾಚಿಸಬೇಕೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ಬಿಜೆಪಿಯನ್ನು ಒತ್ತಾಯಿಸಿದ್ದಾರೆ.

ಅವರು ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.

ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಏನೂ ಮಾಡದ ಬಿಜೆಪಿಯವರು ಅಂಬೇಡ್ಕರ್‌ ಹೆಸರಿನ ಜಪ ಮಾಡುತ್ತಿದ್ದಾರೆ. ಈ ವರ್ಗಗಳಿಗೆ ಕಾಂಗ್ರೆಸ್‌ ನೀಡಿದಷ್ಟು ಕೊಡುಗೆಯನ್ನು ಬೇರೆ ಯಾವುದೇ ಪಕ್ಷ ನೀಡಿಲ್ಲ ಎಂದು ಹೇಳಿದ್ದಾರೆ. ಆದರೆ ಕಾಂಗ್ರೆಸ್ ನೀಡಿರುವ ಕೊಡುಗೆ ಏನೆಂದು ಅವರು ಸ್ಪಷ್ಟಪಡಿಸಲೇ ಇಲ್ಲ.

To Top
error: Content is protected !!
WhatsApp chat Join our WhatsApp group