ಸುತ್ತ-ಮುತ್ತ

ಕುಂಬ್ರ ಮರ್ಕಝ್ :ಏಪ್ರಿಲ್ ನಲ್ಲಿ ‘ಅಲ್ ಮಾಹಿರಾ’ ಸನದ್ ದಾನ

ವರದಿಗಾರ : ಮಹಿಳಾ ಧಾರ್ಮಿಕ ಶಿಕ್ಷಣ ರಂಗದಲ್ಲಿ ವ್ಯವಸ್ಥಿತ ಪಠ್ಯಕ್ರಮ ಹಾಗೂ ಪದವಿ ಪ್ರದಾನ ಯೋಜನೆಯೊಂದಿಗೆ ಆರಂಭಿಸಿದ ರಾಜ್ಯದ ಮೊದಲ ಮಹಿಳಾ ಶರಿಯಾ ವಿದ್ಯಾ ಕೇಂದ್ರವಾದ ಪುತ್ತೂರು, ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನಲ್ಲಿ ಮೂರು ವರ್ಷಗಳ ಪದವಿ ತರಗತಿಯನ್ನು ಪೂರ್ತಿ ಮಾಡಿದ ಆಲಿಮಾಗಳಿಗೆ ಅಲ್ ಮಾಹಿರಾ ಎಂಬ ಪದವಿಯನ್ನು ನೀಡಲು ಮರ್ಕಝುಲ್ ಹುದಾ ಕೇಂದ್ರ ಸಮಿತಿಯ ಸಭೆಯಲ್ಲಿ ನಿರ್ಧರಿಸಲಾಯಿತು. ಮುಂದಿನ ಏಪ್ರಿಲ್ ತಿಂಗಳಲ್ಲಿ ನಡೆಯುವ ಸನದುದಾನ ಸಮಾರಂಭದಲ್ಲಿ ಕಳೆದ ಮೂರು ವರ್ಷಗಳಲ್ಲಿ ಹಾಗೂ ಹಾಲಿ ವರ್ಷದ ಅಂತಿಮ ಪರೀಕ್ಷೆ ಬರೆದ ಒಟ್ಟು 133 ಆಲಿಮಾಗಳು ‘ಅಲ್ ಮಾಹಿರಾ‘ ಪದವಿಯನ್ನು ಪಡೆಯಲಿರುವರು.

ಈ ಮಧ್ಯೆ ಮಹಿಳೆಯರ ಇಸ್ಲಾಮೀ ಶಿಕ್ಷಣ ವ್ಯವಸ್ಥೆಯನ್ನು ಸಮರ್ಪಕ ಹಾಗೂ ಏಕೀಕರಣ ಗೊಳಿಸುವ ಉದ್ದೇಶದಿಂದ ಕುಂಬ್ರ ಮರ್ಕಝ್, ಕಾಟಿಪಳ್ಳ ಮಿಸ್ಬಾಹ್ ಮಹಿಳಾ ಶರೀಅತ್ ಕಾಲೇಜು, ತಲಪಾಡಿ ಕೆಸಿ ರೋಡ್ ಮಿನ್ಹಾಜು ಸ್ವಾಲಿಹಾತ್ ಮಹಿಳಾ ಶರೀಅತ್ ಕಾಲೇಜು ಹಾಗೂ ಕೊಡಗು ಜಿಲ್ಲೆಯ ಶುಂಠಿಕೊಪ್ಪ ಇಹ್ಸಾನಿಯ್ಯ ಮಹಿಳಾ ಶರೀಅತ್ ಕಾಲೇಜುಗಳ ಪ್ರತಿನಿಧಿಗಳನ್ನು ಸೇರಿಸಿ ಮಂಗಳೂರು ರಬ್ಬಾನೀ ಫೌಂಡೇಶನ್ನ ಆಶ್ರಯ ದಲ್ಲಿ ‘ಅಲ್ ಮಾಹಿರಾ ವಿಮೆನ್ಸ್ ಇಸ್ಲಾಮಿಕ್ ಅಕಾಡೆಮಿ’ ಗೆ ರೂಪು ಕೊಡಲಾಯಿತು. ಈ ಮೂಲಕ ಅಧೀನ ಸಂಸ್ಥೆಗಳ ಪಠ್ಯಕ್ರಮ, ಪರೀಕ್ಷೆ, ಹಾಗೂ ಪದವಿಗಳ ಏಕೀಕರಣ, ಇತರ ಸಂಸ್ಥೆಗಳು ಬಯಸಿದಲ್ಲಿ ‘ಅಫಿಲಿಯೇಶನ್’ ನೀಡುವುದು ಹಾಗೂ ಅಗತ್ಯವಾದ ಪಠ್ಯ ಪುಸ್ತಕಗಳನ್ನು ರಚಿಸಲು ನಿರ್ಧರಿಸಲಾಯಿತು, ಅಕಾಡೆಮಿಯ ಖಾಯಂ ಮುಖ್ಯ ಪೋಷಕರಾಗಿ ಶೈಖುನಾ ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದ್, ಹಾಗೂ ಕರ್ನಾಟಕ ಜಂಇಯ್ಯತುಲ್ ಉಲಮಾ ಅಧ್ಯಕ್ಷ ರನ್ನು ಖಾಯಂ ಸಲಹೆಗಾರರಾಗಿ ನಿಶ್ಚಯಿಸಲಾಯಿತು.

ಅಕಾಡಮಿಯ ಸಲಹೆಗಾರರಾಗಿ ಸಯ್ಯಿದ್ ಇಸ್ಮಾಯಿಲ್ ತಂಙಳ್ ಉಜಿರೆ, ಸಯ್ಯಿದ್ ಉಮರ್ ಸಖಾಫ್ ತಂಙಳ್ ಮನ್ಶರ್, ಅಬೂಸುಫ್ಯಾನ್ ಇಬ್ರಾಹಿಂ ಮದನಿ ಮಡಿಕೇರಿ ಮುಖ್ಯ ಕಾರ್ಯನಿರ್ವಾಹಕರಾಗಿ ಎಮ್ಮೆಸ್ಸೆಂ ಅಬ್ದುಲ್‌ ರಶೀದ್ ಸಖಾಫಿ ಝೈನೀ ಪರೀಕ್ಷಾ ಮಂಡಳಿ ನಿರ್ದೇಶಕರಾಗಿ ಯು.ಕೆ.ಮುಹಮ್ಮದ್ ಸಅದಿ ವಳವೂರು, ಪಠ್ಯಕ್ರಮ ನಿರ್ದೇಶಕರಾಗಿ ಡಾ. ಫೈಝುಲ್ ರಹ್ಮಾನ್ ನೂರಾನಿ ದೆಹಲಿ, ಆರ್ಥಿಕ ನಿರ್ದೇಶಕರಾಗಿ ಸಯ್ಯಿದ್ ಹುಸೈನ್ ಹಬೀಬ್ ಅಲ್ ಬುಖಾರಿ ತಲಪಾಡಿ, ಶೈಕ್ಷಣಿಕ ನಿರ್ದೇಶಕರಾಗಿ ಅಬ್ದುಲ್‌ ಜಲೀಲ್ ಸಖಾಫಿ ಜಾಲ್ಸೂರ್, ಸಂಯೋಜಕರಾಗಿ ಅಶ್ರಫ್ ಸಖಾಫಿ ಕಕ್ಕಿಂಜೆ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಹಂಝ ಮದನಿ ಮಿತ್ತೂರು, ಶಂಸುಲ್ ಹುದಾ ನೂರಿ ಕಾಸರಗೋಡು, ಉಮರ್ ಸಖಾಫಿ ಎಡಪ್ಪಲಂ, ಮುಹಮ್ಮದ್ ಹನೀಫ್ ಸಖಾಫಿ ಕಿನ್ಯ, ಇರ್ಫಾನ್ ಅಬ್ದುಲ್ಲಾ ನೂರಾನಿ , ಉಮರುಲ್ ಫಾರೂಖ್ ಸಖಾಫಿ ಕಾಟಿಪಳ್ಳ ಅವರನ್ನು ಆರಿಸಲಾಯಿತು

ತಲಪಾಡಿ ,ಕೆಸಿ ರೋಡ್ ಅಝ್ನಿಯೋ ಸಭಾಂಗಣದಲ್ಲಿ ಸೇರಿದ ವಿವಿಧ ಕಾಲೇಜುಗಳ ಪ್ರತಿನಿಧಿಗಳ ಸಮಾವೇಶದಲ್ಲಿ ರಬ್ಬಾನೀ‌ ಫೌಂಡೇಶನ್ ಮುಖ್ಯ ಸಲಹೆಗಾರಾದ ಸಯ್ಯಿದ್ ಇಸ್ಮಾಯಿಲ್ ಮದನಿ ತಂಙಳ್ ಉಜಿರೆ ಅಧ್ಯಕ್ಷತೆ ವಹಿಸಿದರು . ಕರ್ನಾಟಕ ಜಂಇಯ್ಯತುಲ್ ಉಲಮಾ ಉಪಾಧ್ಯಕ್ಷ ಉಸ್ತಾದ್ ಯು.ಕೆ.ಮುಹಮ್ಮದ್ ಸಅದಿ ವಳವೂರು ಉದ್ಘಾಟಿಸಿದರು ರಬ್ಬಾನಿ ಫೌಂಡೇಶನ್ ಅಧ್ಯಕ್ಷ ಎಮ್ಮೆಸ್ಸೆಂ ಝೈನೀ ಕಾಮಿಲ್ ಚರ್ಚೆ ಮಂಡಿಸಿದರು.
ತಲಪಾಡಿ ಅಝ್ನಿಯೋ ಸಂಸ್ಥೆಯ ಆಡಳಿತ ನಿರ್ದೇಶಕ ಸಯ್ಯಿದ್ ಹುಸೈನ್ ಹಬೀಬ್ ತಂಙಳ್, ಕುಂಬ್ರ ಮರ್ಕಝ್ ಮಹಿಳಾ ಕಾಲೇಜು ಉಪನ್ಯಾಸಕ ಅಬ್ದುಲ್‌ ಜಲೀಲ್ ಸಖಾಫಿ ಜಾಲ್ಸೂರ್, ಕಾಟಿಪಳ್ಳ ಮಿಸ್ಬಾಹ್ ಕಾಲೇಜು ಉಪನ್ಯಾಸಕರಾದ ಅಶ್ರಫ್ ಸಖಾಫಿ ಕಕ್ಕಿಂಜೆ, ಫಾರೂಖ್ ಸಖಾಫಿ ಕಾಟಿಪಳ್ಳ, ಮಿನ್ಹಾಜ್ ಮಹಿಳಾ ಕಾಲೇಜು ಪ್ರಿನ್ಸಿಪಾಲ್ ಹನೀಫ್ ಸಖಾಫಿ ಕಿನ್ಯ, ಉಪನ್ಯಾಸಕ ಶಂಸುಲ್ ಹುದಾ ನೂರಿ, ಅಬ್ದುಲ್‌ ರಹ್ಮಾನ್ ಅಮಾನಿ, ವ್ಯವಸ್ಥಾಪಕ ಮುಹಮ್ಮದ್ ಸಿರಾಜ್, ಕೊಡಗು ಇಹ್ಸಾನಿಯ್ಯ ಮಹಿಳಾ ಕಾಲೇಜು ಅಧ್ಯಕ್ಷ ಉಮರ್ ಸಖಾಫಿ ಎಡಪ್ಪಲಂ ಚರ್ಚೆಯಲ್ಲಿ ಪಾಲ್ಗೊಂಡರು. ರಬ್ಬಾನೀ ಫೌಂಡೇಶನ್ ಕಾರ್ಯದರ್ಶಿ ಇರ್ಫಾನ್ ಅಬ್ದುಲ್ಲಾ ನೂರಾನಿ ಸ್ವಾಗತಿಸಿ ,ಧನ್ಯವಾದ ಸಲ್ಲಿಸಿದರು

 

Click to comment

Leave a Reply

Your email address will not be published. Required fields are marked *

To Top
error: Content is protected !!
WhatsApp chat Join our WhatsApp group