ಅನಿವಾಸಿ ಕನ್ನಡಿಗರ ವಿಶೇಷ

ಗಲ್ಫ್ ಇಶಾರ ಸದಸ್ಯತ್ವ ಅಭಿಯಾನ-18 ಸೌದಿ ರಾಷ್ಟ್ರೀಯ ಮಟ್ಟದ ಚಾಲನೆ

ಜುಬೈಲ್, ಸೌದಿ ಅರೇಬಿಯಾ: ಜಿ‌.ಸಿ.ಸಿ.ಮತ್ತು ಯೂರೋಪ್ ರಾಷ್ಟ್ರಾದ್ಯಂತ ಹೆಮ್ಮರವಾಗಿ ಬೆಳೆದು ಬಂದ ನಮ್ಮ ಕೆ.ಸಿ.ಎಫ್.ಇಂದು ಸರಿಸಾಟಿಯಿಲ್ಲದ ಸಂಘಟನೆಯಾಗಿದೆ. ಇಸ್ಲಾಮಿನ ತತ್ವಾದರ್ಶಗಳೊಂದಿಗೆ ಸಂಘಟನೆಯ ಸದಸ್ಯರುಗಳನ್ನು ಬೆಳೆಸುತ್ತಿರುವ ಕೆ.ಸಿ.ಎಫ್ ಸದಸ್ಯರ ಜ್ಞಾನ ಅಭಿವೃದ್ದಿ ಗೆ ಬೇಕಾಗಿ ಮಾಡಿದ ಹಲವಾರು ಯೋಜನೆಗಳಲ್ಲಿ ಒಂದಾಗಿದೆ “ಗಲ್ಫ್ ಇಶಾರ ಕನ್ನಡ ಮಾಸಿಕ”.  ಹಲವಾರು ಓದುಗರ ಮೆಚ್ಚುಗೆಗೆ ಪಾತ್ರವಾದ ಗಲ್ಫ್ ಇಶಾರ ಇಂದು ಜಿ.ಸಿ.ಸಿ ರಾಷ್ಟ್ರಾದ್ಯಂತ ಮೂರನೇ ವರ್ಷಕ್ಕೆ ಕಾಲಿಡುತ್ತಿದೆ.ಯಾವುದೇ ಅಡಚಣೆ ಇಲ್ಲದೆ ವ್ಯವಸ್ಥಿತವಾದ ರೀತಿಯಲ್ಲಿ ಚಂದಾದಾರರ ಕೈ ಸೇರುತ್ತಿರುವ ಪತ್ರಿಕೆ ನಿಜಕ್ಕೂ ಎಲ್ಲರ ಮೆಚ್ಚುಗೆಯನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ.
“ಅರಿವು ನಿರಂತರ” ಎಂಬ ತಲೆ ಬರಹದ ಮೂಲಕ ಗಲ್ಫ್ ಇಶಾರ ಇಂದು ಮೂರನೇ ವರ್ಷದ ಚಂದಾದಾರರ ಅಭಿಯಾನವು ಆರಂಭಗೊಂಡಿದ್ದು ಇದರ ಮೊದಲ 2018 ರ ಸದಸ್ಯತ್ವ ಅಭಿಯಾನಕ್ಕೆ ಸೌದಿ ಅರೇಬಿಯಾದ ಜುಬೈಲ್ ನಲ್ಲಿ ಚಾಲನೆ ನೀಡಲಾಯಿತು. ಅಧ್ಯಕ್ಷತೆ ವಹಿಸಿ ಮಾತನಾಡಿದ KCF ರಾಷ್ಟ್ರೀಯ ಸಮಿತಿಯ ಪ್ರದಾನ ಕಾರ್ಯದರ್ಶಿ ಫಾರೂಕ್ ಕಾಟಿಪಳ್ಳ, ಇಶಾರ ಪತ್ರಿಕೆ ಜಿ.ಸಿ.ಸಿ ಯಾದ್ಯಂತ ಅದನ್ನು ಪ್ರಸಿದ್ದೀಗರಿಸಲು ಪ್ರತೀಯೊಂದು  ಲೇಖನಗಳನ್ನು ಪರೀಶೀಲನೆ ನಡೆಸಿ ಮುದ್ರಣಕ್ಕೆ ಕಳುಹಿಸಬೇಕಾದರೆ ಅದರ ಹಿಂದೆ ಇರುವ ಶ್ರಮವನ್ನು ಮತ್ತು ಸಂಪಾದಕ ಮಂಡಳಿಯ ಪ್ರಯತ್ನವನ್ನು ಸಭಿಕರಿಗೆ ಮನದಟ್ಟು ಮಾಡಿದರು. ಮತ್ತು ಅದನ್ನು ಚಂದಾದರರಿಗೆ ನೀಡಲು, ಅದಕ್ಕೆ ಬೇಕಾಗಿ ಹಗಲಿರುಳು ಓಡಾಡುವ  ಕಾರ್ಯಕರ್ತರು ಮಾಡುವಂತಹ ನಿಸ್ವಾರ್ಥ ಸೇವೆಯನ್ನು ಶ್ಲಾಘಿಸಿದರು. ಮತ್ತು ಎಲ್ಲಾ ಕಾರ್ಯಕರ್ತರು ಈ ವರ್ಷದ ಅಭಿಯಾನವನ್ನು ಯಶಸ್ವಿ ಗೊಳಿಸಲು ಕರೆ ನೀಡಿದರು. KCF INC ಇದರ ಕೋ ಆರ್ಡಿನೇಟರ್ NS ಅಬ್ದುಲ್ಲಾ ಕಾರ್ಯಕ್ರಮವನ್ನು ಉಧ್ಘಾಟಿಸಿದರು, ಜುಬೈಲ್ ಘಟಕದ ಅಧ್ಯಕ್ಷರಾದ ಹನೀಫ್ ಸಅದಿ 2018 ರ ಇಶಾರಾ ಅಭಿಯಾನವನ್ನು ಘೋಷಿಸಿದರು, ರಾಷ್ಟ್ರೀಯ ಪ್ರದಾನ ಕಾರ್ಯದರ್ಶಿ ಫಾರೂಕ್ ಕಾಟಿಪಳ್ಳರವರು KCF INC ಕೋಆಡಿನೇಟರ್ NS ಅಬ್ದುಲ್ಲಾರವರಿಗೆ ಪ್ರಥಮ ಪ್ರತಿಯನ್ನು ನೀಡುವ ಮೂಲಕ ಚಾಲನೆ ನೀಡಲಾಯಿತು. ಬಳಿಕ ಉಧ್ಬೋದನಾ ಭಾಷಣ ಮಾಡಿದ ಪಿ.ಸಿ.ಅಬೂಬಕ್ಕರ್ ಸಅದಿ ಇಂದಿನ ಕಾಲದಲ್ಲಿ ಪತ್ರಿಕೆಯ ಅನಿವಾರ್ಯತೆಯ ಬಗ್ಗೆ ವಿವರಿಸಿದರು
 INC KCF ನೇತಾರಾರದ ಕಮರುದ್ದೀನ್ ಗೂಡಿನ ಬಳಿ ಹಾಗೂ ರಾಷ್ಟ್ರೀಯ ನೇತಾರಾರದ ಅಸೀಫ್ ಗೂಡಿನಬಳಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ದಮ್ಮಾಮ್ ಝೋನ್ ಅಧ್ಯಕ್ಷರಾದ ಫಾರೂಕ್ ಕುಪ್ಪೆಟ್ಟಿ ಎಲ್ಲರನ್ನೂ ಸ್ವಾಗತಿಸಿ ಕಾರ್ಯದರ್ಶಿ ಪೈಝಲ್ ಕೃಷ್ಣಾಪುರ ವಂದಿಸಿದರು.
ವರದಿ: ಹಕೀಂ ಬೋಳಾರ್
Click to comment

Leave a Reply

Your email address will not be published. Required fields are marked *

To Top
error: Content is protected !!
WhatsApp chat Join our WhatsApp group