ವರದಿಗಾರ-ಸೌದಿ ಅರೇಬಿಯಾ: ಮಂಗಳವಾರ ಬೆಳಿಗ್ಗೆ ಜಿದ್ದಾದಲ್ಲಿ ಧಾರಾಕಾರ ಮಳೆ ಸುರಿದ ಪರಿಣಾಮ ಅಝೀಝಿಯಾ ಸುತ್ತಮುತ್ತ ಜನಜೀವನ ಅಸ್ತವ್ಯಸ್ಥಗೊಂಡಿದೆ.
ಹಲವು ವರ್ಷಗಳ ಬಳಿಕ ಈ ರೀತಿಯ ಮಳೆ ಬಂದಿರುವುದಾಗಿ ಜಿದ್ದಾದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರು ಅಭಿಪ್ರಾಯಪಟ್ಟಿದ್ದಾರೆ. ಹಲವು ವಾಹನಗಳು ಮಳೆ ನೀರಿನಿಂದ ಕೆಟ್ಟು ಹೋಗಿದೆ. ಮಳೆಯಿಂದಾಗಿ ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದೆ.
ಮಳೆ ಕಾರಣದಿಂದ ಕೆಲವು ಕಚೇರಿಗಳಲ್ಲಿ ಉದ್ಯೋಗಿಗಳಿಗೆ ರಜೆ ನೀಡಲಾಗಿದೆ.

