ರಾಷ್ಟ್ರೀಯ ಸುದ್ದಿ

ರಾಮ ಮಂದಿರದ ಹೆಸರಿನಲ್ಲಿ 1400 ಕೋಟಿ ಲೂಟಿ ಮಾಡಿದ ವಿಶ್ವ ಹಿಂದೂ ಪರಿಷತ್ : ನಿರ್ಮೋಹಿ ಅಕಾರ

ರಾಮ ಮಂದಿರದ ವಿವಾದದಲ್ಲಿ ನ್ಯಾಯಾಲಯದಲ್ಲಿ ಒಂದು ಪಕ್ಷವಾಗಿರುವ ನಿರ್ಮೋಹಿ ಅಕಾರವು ಹಿಂದುತ್ವ ಸಂಘಟನೆಯಾದ ವಿಶ್ವ ಹಿಂದೂ ಪರಿಷತ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದೆ. ರಾಮ ಮಂದಿರದ ಹೆಸರಿನಲ್ಲಿ ವಿಶ್ವ ಹಿಂದೂ ಪರಿಷತ್ 1400 ಕೋಟಿ ರೂಪಾಯಿಗಳನ್ನು ಲೂಟಿ ಮಾಡಿದೆ ಎಂದು ನಿರ್ಮೋಹಿ ಅಕಾರದ ಸದಸ್ಯ ಸೀತಾರಾಮ್ ಆರೋಪಿಸಿದ್ದಾರೆ.

“ನಿರ್ಮೋಹಿ ಅಕಾರವು ಯಾರಿಂದಲೂ ಯಾವುದೇ ರೀತಿ ಹಣವನ್ನು ಪಡೆದಿಲ್ಲ, ಆದರೆ ವಿಶ್ವ ಹಿಂದೂ ಪರಿಷತ್ ರಾಮ ಮಂದಿರದ ನಿರ್ಮಾಣಕ್ಕಾಗಿ ದೇಣಿಗೆಯ ಹೆಸರಿನಲ್ಲಿ 1400 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ ಹಾಗೂ ಅದನ್ನು ರಾಮ ಮಂದಿರಕ್ಕಾಗಿ ಮೀಸಲಿಡದೆ ತನ್ನದೇ ಖಾಸಗಿ ಕಟ್ಟಡಗಳ ನಿರ್ಮಾಣಕ್ಕಾಗಿ ಉಪಯೋಗಿಸಿದೆ” ಎಂದು ಅವರು ಅರೋಪಿಸಿದರು.

” ಈ ವಿವಾದದಲ್ಲಿ ನಾವು ಪ್ರಮುಖ ಪಕ್ಷವಾಗಿದ್ದೇವೆ, ಆದರೆ ರಾಜಕಾರಣಿಗಳು ತಮ್ಮದೇ ಹಿತಾಸಕ್ತಿಗಾಗಿ ವಿಷಯದ ದಿಕ್ಕು ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ. ರಾಮ ಮಂದಿರದ ಹೆಸರಿನಲ್ಲಿ ಈ ರಾಜಕಾರಣಿಗಳು ನೋಟು ಹಾಗೂ ವೋಟುಗಳನ್ನು ಪಡೆದಿದೆ, ಆದರೆ ಮಂದಿರಕ್ಕಾಗಿ ಏನೂ ಮಾಡಿಲ್ಲ” ಎಂದು ಸೀತಾರಾಮ್ ಆರೋಪಿಸಿದರು.

ಆರೋಪಗಳನ್ನು ನಿರಾಕರಿಸುತ್ತಾ ವಿಶ್ವ ಹಿಂದೂ ಪರಿಷತ್ ನಾಯಕ ವಿನೋದ್ ಬನ್ಸಾಲ್, ” ಸಂಘಟನೆ ಸ್ಥಾಪಿಸಲ್ಪಟ್ಟ ವರ್ಷವಾದ 1964ರಿಂದ ಇಲ್ಲಿಯ ತನಕ ಎಲ್ಲಾ ಪೈಸೆಗಳ ವಿವರವನ್ನೂ ದಾಖಲಿಸಿದ್ದೇವೆ” ಎಂದು ಹೇಳಿದರು.

1 Comment

1 Comment

  1. Pingback: ಮಂದಿರ್ ವಹೀಂ ಬನಾಯೇಂಗೆ, ತಾರೀಖ್ ನಹೀ ಬತಾಯೇಂಗೆ! - ವರದಿಗಾರ

Leave a Reply

Your email address will not be published. Required fields are marked *

To Top
error: Content is protected !!
WhatsApp chat Join our WhatsApp group