ಸುತ್ತ-ಮುತ್ತ

ಪುದು ಗ್ರಾಮ ಪಂಚಾಯತ್ ವ್ಯಾಪ್ತಿಯ ಅಕ್ರಮ – ಸಕ್ರಮ ಅರ್ಜಿದಾರರಿಗೆ ಹಕ್ಕುಪತ್ರ ಮಂಜೂರಾತಿ ವಿಳಂಬ ರಾಜಕೀಯ ಪ್ರೇರಿತ : ರಿಯಾಝ್ ಫರಂಗಿಪೇಟೆ

ವರದಿಗಾರ : ಪುದು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಸುಮಾರು 250 ಮಂದಿ ತಾವು ವಾಸಿಸುತ್ತಿರುವ ಮನೆ ಅಡಿಸ್ಥಳದ ನಿವೇಶನದ ಹಕ್ಕು ಪತ್ರಕ್ಕಾಗಿ ಸರ್ಕಾರದ ಅಕ್ರಮ ಸಕ್ರಮ ಯೋಜನೆಯಡಿ ಈಗಾಗಲೇ ಅರ್ಜಿಯನ್ನು ಸಲ್ಲಿಸಿ ಸರಕಾರಕ್ಕೆ ಪಾವತಿಸಬೇಕಾಗಿರುವ ಮೊತ್ತವನ್ನೂ ಪಾವತಿಸಿರುತ್ತಾರೆ. ಆದರೆ ಇದುವರೆಗೂ ಅವರ ಕೈಗೆ ಹಕ್ಕುಪತ್ರವು ಸಿಕ್ಕಿರುವುದಿಲ್ಲ. ಇದಕ್ಕೆ ಸಂಬಂಧಿಸಿದ ಅಧಿಕಾರಿಗಳ ಬಳಿ ಮತ್ತು ತಹಸೀಲ್ದಾರರ ಬಳಿ ಎಸ್ ಡಿ ಪಿ ಐ ನಿಯೋಗವು ಮಾತನಾಡಿದಾಗ ಹಕ್ಕು ಪತ್ರ ವನ್ನು ಮಂಜೂರು ಮಾಡಿ ಈಗಾಗಲೇ ಪಂಚಾಯತ್ ಕಚೇರಿಗೆ ರವಾನಿಸಿ ಮೂರು ತಿಂಗಳು ಕಳೆದಿರುತ್ತದೆ ಎಂದು ಉತ್ತರ ನೀಡಿರುತ್ತಾರೆ. ಆದರೆ ಪಂಚಾಯತ್ ಕಚೇರಿಯವರು ಸಕಾರಣಗಳಿಲ್ಲದೆ ಹಕ್ಕುಪತ್ರ ವಿತರಣೆಯಲ್ಲಿ ಈ ರೀತಿಯ ವಿಳಂಬ ನೀತಿಯನ್ನು ಅನುಸರಿಸುತ್ತಿರುವುದು ಕಾನೂನು ವಿರೋಧಿ ಯಾಗಿರುತ್ತದೆ. ಹಾಗೂ ಮುಂದಿನ ವಿಧಾನಸಭಾ ಮತ್ತು ಪಂಚಾಯತ್ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಆಡಳಿತ ರೂಢ ಕಾಂಗ್ರೆಸ್ ಪಕ್ಷವು ಅಕ್ರಮ ಸಕ್ರಮ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆಯನ್ನು ವಿಳಂಬ ಮಾಡಿ ಅದರ ರಾಜಕೀಯ ಲಾಭವನ್ನು ಪಡೆಯಲು ಪ್ರಯತ್ನಿಸುತ್ತಿದೆ ಎಂದು ರಿಯಾಝ್ ಫರಂಗಿಪೇಟೆಯವರು ಆರೋಪಿಸಿರುತ್ತಾರೆ. ಹಕ್ಕುಪತ್ರ ಅನ್ನುವುದು ಒಬ್ಬ ಜನ ಸಾಮಾನ್ಯನಿಗೆ ಸಿಗಬೇಕಾಗಿರುವ ಮೂಲಭೂತವಾದ ಹಕ್ಕಾಗಿದ್ದು ಅದನ್ನು ವಿತರಿಸದೆ ಪುದು ಗ್ರಾಮ ಪಂಚಾಯಿತಿಯ ಆಡಳಿತ ರೂಢ ಕಾಂಗ್ರೆಸ್ ಪಕ್ಷವು ನೀಚ ರಾಜಕೀಯವನ್ನು ನಡೆಸುತ್ತಿದೆ ಹಾಗೂ ಕೆಲವರಿಂದ ಹಣವನ್ನು ಪೀಕಿಸಿ ಹಕ್ಕುಪತ್ರವನ್ನು ವಿತರಿಸಿರುತ್ತಾರೆ. ಪುದು ಗ್ರಾಮ ಪಂಚಾಯತ್ ನಿರಂತರವಾಗಿ ಸಾರ್ವಜನಿಕರಿಗೆ ಈ ರೀತಿಯಾಗಿ ಕಿರುಕುಳ ನೀಡುತ್ತಿದ್ದು ಕಾಂಗ್ರೆಸ್ ಬೆಂಬಲಿಗರನ್ನು ಮಾತ್ರ ಓಲೈಸುವ ಮೂಲಕ ಜನ ಸೇವಾ ಕೇಂದ್ರ ವಾಗಬೇಕಿದ್ದ ಪಂಚಾಯತ್ ಕಚೇರಿಯು ಕಾಂಗ್ರೆಸ್ ಕಚೇರಿಯಾಗಿ ಪರಿವರ್ತನೆ ಯಾಗಿರುತ್ತದೆ ಎಂದು ಅವರು ಖಾರವಾಗಿ ಪ್ರತಿಕ್ರಿಯಿಸಿರುತ್ತಾರೆ.
ಹಕ್ಕು ಪತ್ರ ವಿತರಣೆ ವಿಳಂಬ ವಾಗುತ್ತಿರುವ ಬಗ್ಗೆ ಎಸ್ ಡಿ ಪಿ ಐ ನಿಯೋಗವು ಸಂಬಂಧ ಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ ಕೂಡಲೇ ಹಕ್ಕುಪತ್ರವನ್ನು ಮಂಜೂರು ಮಾಡಬೇಕಾಗಿ ಮನವಿಯನ್ನು ಸಲ್ಲಿಸಿರುತ್ತದೆ. ಏಳು ದಿನಗಳ ಒಳಗಾಗಿ ಹಕ್ಕು ಪತ್ರ ವಿತರಣೆಯಾಗದಿದ್ದಲ್ಲಿ ನಮ್ಮ ಪಕ್ಷದ ವತಿಯಿಂದ ಆಡಳಿತ ವ್ಯವಸ್ಥೆಯ ವಿರುದ್ಧ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳುವ ಬಗ್ಗೆ ಎಚ್ಚರಿಕೆಯನ್ನೂ ನೀಡಲಾಗಿರುತ್ತದೆ. ನಿಯೋಗದಲ್ಲಿ ರಿಯಾಝ್ ಫರಂಗಿಪೇಟೆ, ಸಾಹುಲ್ ಎಸ್ ಹೆಚ್, ಸುಲೈಮಾನ್ ಉಸ್ತಾದ್, ಇಕ್ಬಾಲ್ ಫರಂಗಿಪೇಟೆ, ಖಾದರ್ ಅಮೆಮಾರ್, ಮೊಹಮ್ಮದ್ ಶಾಫಿ ಆಮ್ಮೆಮಾರ್, ಅಬ್ಬಾಸ್ ಪೇರಿಮಾರ್ ಮತ್ತು ಸಿದ್ದೀಕ್ ಮಲ್ಲಿ ಉಪಸ್ಥಿತರಿದ್ದರು. ಸಾರ್ವಜನಿಕರೆಲ್ಲರೂ ಎಸ್ ಡಿ ಪಿ ಐ ಯ ಹೋರಾಟದೊಂದಿಗೆ ಕೈ ಜೋಡಿಸಬೇಕಾಗಿ ಪಕ್ಷವು ಸಾರ್ವಜನಿಕರಲ್ಲಿ ಕೋರಿದೆ.

 

Click to comment

Leave a Reply

Your email address will not be published. Required fields are marked *

To Top
error: Content is protected !!
WhatsApp chat Join our WhatsApp group