ರಾಷ್ಟ್ರೀಯ ಸುದ್ದಿ

ಪಾಪ್ಯುಲರ್ ಫ್ರಂಟ್ ವಿರುದ್ಧ ಅವಮಾನಕಾರಿ ಸುದ್ದಿ ಪ್ರಕಟಿಸಿದ ‘ಟೈಮ್ಸ್ ನೌ’ ಚಾನೆಲ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು

ವರದಿಗಾರ: ರಾಷ್ಟ್ರೀಯ ಸುದ್ದಿ ವಾಹಿನಿ ‘ಟೈಮ್ಸ್ ನೌ’ ಟಿ.ವಿ. ಚಾನೆಲ್, ಅದರ ಸಂಪಾದಕರು, ವರದಿಗಾರರು, ಅವರಿಗೆ ನೆರವು ನೀಡಿದವರು ಮತ್ತು ಗೃಹ ಸಚಿವಾಲಯದ ಜಬಾಬ್ದಾರಿಯುತ ಅಧಿಕಾರಿಗಳ ವಿರುದ್ಧ ಕಚೇರಿಯ ದಾಖಲೆಗಳನ್ನು ಕಳ್ಳತನದ ಮೂಲಕ ಪಡೆದ ಅಥವಾ ಅದನ್ನು ಸೋರಿಕೆ ಮಾಡಿದ ಮತ್ತು ಸಂಘಟನೆಯ ಹೆಸರನ್ನು ಕೆಡಿಸಲು ಅದನ್ನು ಸಾರ್ವಜನಿಕರ ಮಧ್ಯೆ ಪ್ರಸಾರ ಪಡಿಸಿದ ಕುರಿತಂತೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾವು ಹೊಸದಿಲ್ಲಿಯ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

ಪಾಪ್ಯುಲರ್ ಫ್ರಂಟ್ ದೆಹಲಿ ರಾಜ್ಯಾಧ್ಯಕ್ಷ ಮುಹಮ್ಮದ್ ಫರ್ವೆಝ್ ದಾಖಲಿಸಿರುವ ದೂರಿನಲ್ಲಿ ಪಾಪ್ಯುಲರ್ ಫ್ರಂಟ್ ಮುಸ್ಲಿಮರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು, ದಲಿತರು, ದೌರ್ಜನ್ಯಕ್ಕೊಳಗಾದವರ ಮತ್ತು ಹಕ್ಕುಗಳಿಂದ ವಂಚಿತರಾದವರ ಸಬಲೀಕರಣಕ್ಕಾಗಿ ಕಳೆದ ಹಲವಾರು ವರ್ಷಗಳಿಂದ ಹೋರಾಟವನ್ನು ನಡೆಸುತ್ತಿರುವ ನವ ಸಾಮಾಜಿಕ ಆಂದೋಲನವಾಗಿದೆ. ಸಂಘಟನೆಯು ಭಾರತದ ಪ್ರಜಾಪ್ರಭುತ್ವ ಕಾನೂನಿನ ವ್ಯಾಪ್ತಿಯಲ್ಲಿ ಸಂವಿಧಾನಾತ್ಮಕವಾಗಿ ಕಾರ್ಯಾಚರಿಸುತ್ತಿದ್ದು, ಸಂಘಟನೆಯ ಕೇಂದ್ರ ಕಛೇರಿಯು ದೆಹಲಿಯ ಕಲಿಂದಿ ಕುಂಜ್‍ನಲ್ಲಿ ತೆರೆಯಲಾಗಿದೆ ಎಂದು ತಿಳಿಸಿದ್ದಾರೆ.

ಟೈಮ್ಸ್ ನೌ ಚಾನೆಲ್ ಎರಡು ತಿಂಗಳ ಹಿಂದೆ ಪಾಪ್ಯುಲರ್ ಫ್ರಂಟ್ ವಿರುದ್ಧ ಅವಮಾನಕಾರಿಯಾದ ಸುದ್ದಿಗಳನ್ನು ಪ್ರಸಾರ ಮಾಡಿತ್ತು. ಅದರಲ್ಲಿ ಸರಕಾರದ ಅಧಿಕತ ರಹಸ್ಯ ದಾಖಲೆಗಳನ್ನು ಬಳಸಿಕೊಂಡು ಚರ್ಚಾ ಕಾರ್ಯಕ್ರಮದ ಮೂಲಕ ಅದನ್ನು ಪ್ರಸಾರ ಮಾಡಲಾಗಿತ್ತು. 2017ರ ಆಗಸ್ಟ್ 31ರಂದು ರಾತ್ರಿ 10 ಗಂಟೆಯ ಸಮಯದಲ್ಲಿ ನ್ಯೂಸ್ ಹೌರ್ ಎಂಬ ಹೆಸರಿನ ಚರ್ಚಾ ಕಾರ್ಯಕ್ರಮ ಏರ್ಪಡಿಸಿ, ಅದರಲ್ಲಿ ಚಾನೆಲ್‍ನ ಹಿರಿಯ ಸಂಪಾದಕರಾದ ಅನಂದ್ ನರಸಿಂಹನ್ ಈ ರೀತಿ ಹೇಳಿಕೆ ನೀಡಿದ್ದರು. ‘…. ವರದಿಯ ದಾಖಲೆಯ ಕುರಿತು ನಾವು ಅವಲೋಕಿಸಿದಂತೆ…” ಮತ್ತು ಇದರ ಜೊತೆಗೆ ಪರದೆಯಲ್ಲಿ ‘ಮಹತ್ವದ ರಹಸ್ಯ ವರದಿ ದೊರಕಿದೆ’. ‘ಸ್ಫೋಟಕ ರಹಸ್ಯ ವರದಿ ದೊರಕಿದೆ” ಎಂದು ತೋರಿಸಲಾಗಿತ್ತು.

ಚರ್ಚೆಯಲ್ಲಿ ಪ್ರಧಾನ ಸಂಪಾದಕ ಮತ್ತು ಕಾರ್ಯಕ್ರಮದ ಸಂಯೋಜಕ ರಾಹುಲ್ ಶಿವಶಂಕರ್ ಇಬ್ಬರೂ, ‘… ನಮ್ಮಲ್ಲಿ ಯಾವ ರೀತಿಯ ರಹಸ್ಯ ದಾಖಲೆಗಳಿದೆ ಎಂದರೆ ಅದನ್ನು ಯಾರೂ ಕಂಡಿಲ್ಲ…” ಎಂದು ಹೇಳಿದರು. ಕಾರ್ಯಕ್ರಮ ನಡೆಯುದ್ದಂತೆಯೇ ಪರದೆಯಲ್ಲಿ, ‘ಗೃಹ ಸಚಿವಾಲಯವು ಭಯೋತ್ಪಾದನಾ ವಿರೋಧಿ ದಳ ಎನ್‍ಐಎಯಿಂದ ಪಿಎಫ್‍ಐ ಕುರಿತು ವರದಿ ಕೇಳಿದೆ” ಎಂದು ಬರೆಯಲಾಗಿತ್ತು. ಪಿಎಫ್‍ಐ ಕುರಿತು ಮೊಕದ್ದಮೆಯ ವಿವರಣೆಯನ್ನು ಆಧರಿಸಿ ಎನ್‍ಐಎಯ ವರದಿ ಗೃಹ ಸಚಿವಾಲಯಕ್ಕೆ ತಲುಪಿಸಲಾಗಿದೆ.” ಬಹಳಷ್ಟು ರಹಸ್ಯ ವರದಿ ದೊರಕಿದೆ.” ‘ಪಿಎಫ್‍ಐಯ ಕುರಿತು ನಡೆಸಿದ ಮೌಲ್ಯಮಾಪನವನ್ನು ಆಧರಿಸಿದ ಎನ್‍ಐಎಯ ವರದಿಯು ಟೈಮ್ಸ್ ನೌಗೆ ದೊರಕಿದೆ” ಎಂಬುದನ್ನು ತೋರಿಸಲಾಯಿತು.

ಎರಡನೇಯ ಉದಾಹರಣೆ, 2017ರ ಸೆಪ್ಟೆಂಬರ್ 27ರಂದು ರಾತ್ರಿ 8 ಗಂಟೆಯ ವೇಳೆಗೆ ‘ಇಂಡಿಯಾ ಅಪ್ ಫ್ರಂಟ್’ ಎಂಬ ಚರ್ಚೆಯನ್ನು ಪ್ರಸಾರ ಮಾಡಲಾಯಿತು. ಇದರಲ್ಲಿ ರಾಹುಲ್ ಶಿವಶಂಕರ್ ವರದಿಯನ್ನು ತೋರಿಸುತ್ತಾ, ‘…ಮೂಲಗಳಿಂದ ನಮಗೆ ಇದು ದೊರಕಿದೆ. ನಿಕುಂಜ್ ಗರ್ಗ್ ಈ ಕಥೆಯನ್ನು ಬಹಿರಂಗಪಡಿಸಿದರು. ನಮಗೆ ಈ ಮಾಹಿತಿಯು ಮೂಲಗಳಿಂದ ದೊರಕಿದೆ. ಇನ್ನು ಕೆಲವೇ ದಿನಗಳಲ್ಲಿ ಪಿಎಫ್‍ಐ ನಿಷೇಧವಾಗಲಿದೆ ಮತ್ತು ಈಗ ಈ ಕಡತ ನನ್ನ ಬಳಿಯಿದೆ. ನಾವು ಅದನ್ನು ನಮ್ಮ ವೀಕ್ಷಕರಿಗೆ ತೋರಿಸಲು ಹೋಗುತ್ತಿದ್ದೇವೆ.” ನಂತರ ಟೈಮ್ಸ್ ನೌ ವರದಿಗಾರ ನಿಕುಂಜ್ ಗರ್ಗ್ ಮುಂದುವರಿಸುತ್ತಾ, “ರಾಹುಲ್, ದೇಶದ ಅತ್ಯಂತ ದೊಡ್ಡ ಭಯೋತ್ಪಾದನಾ ವಿರೋಧಿ ಏಜೆನ್ಸಿ ರಾಷ್ಟ್ರೀಯ ತನಿಖಾ ತಂಡ, ಕೇರಳ ಪೊಲೀಸ್, ಕಾನೂನು ಸುವ್ಯವಸ್ಥೆಯನ್ನು ಜಾರಿ ಮಾಡುವ ಮತ್ತು ಗುಪ್ತಚರ ಏಜೆನ್ಸಿಗಳ ತನಿಖೆಯಲ್ಲಿ ಎರಡು ಅತ್ಯಂತ ಘಾತಕ ನಿಷ್ಕರ್ಷಕ್ಕೆ ಬರಲಾಗಿದೆ. ಇವೆಲ್ಲದರ ಮಾಹಿತಿಗಳನ್ನು ಗೃಹ ಸಚಿವಾಲಯದ ದಾಖಲೆಗಳೊಂದಿಗೆ ಸೇರಿಸಲಾಗಿದೆ. ಇದನ್ನು ಮತ್ತೊಮ್ಮೆ ನ್ಯಾಯಾಧೀಕರಣದಲ್ಲಿ ಪ್ರಸ್ತುತಪಡಿಸಿದರೆ ನಿಷೇಧ ಹೇರಬಹುದಾಗಿದೆ ಮತ್ತು ಪಿಎಫ್‍ಐ ಮೇಲಿನ ನಿಷೇಧವು ಕೆಲವೇ ದಿನಗಳ ಮಾತಾಗಲಿದೆ. ಇದೀಗ ಅದಕ್ಕಾಗಿ ನಾವು, ಮತ್ತೊಮ್ಮೆ ನಾವು ನೋಡುತ್ತಿದೇವೆ….” ನಿರಂಕುಜ್ ಗಾರ್ಗ್ ತನ್ನ ಮಾತುಗಳನ್ನು ಮುಂದುವರಿಸುತ್ತಾ, “…ಇದನ್ನು ನಾನೋ, ನೀವೋ ಹೇಳುತ್ತಿಲ್ಲ, ಇದು ನಾವು ಇಂದು ಸಚಿವಾಲಯದಿಂದ ಪಡೆದುಕೊಂಡ ಕಡತದ ಭಾಗವಾಗಿದೆ.”

ಮುಹಮ್ಮದ್ ಫರ್ವೆಝ್ ಮುಂದುವರಿದು ತನ್ನ ದೂರಿನಲ್ಲಿ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಈ ನೆಲದ ಕಾನೂನು ಮತ್ತು ದೇಶದ ಕಾನೂನು ವ್ಯವಸ್ಥೆಯ ಮೇಲೆ ನಂಬಿಕೆಯಿಟ್ಟಿದೆ. ಆದ್ದರಿಂದ ಎನ್‍ಐಎ ಸೇರಿದಂತೆ ಎಲ್ಲಾ ತನಿಖಾ ಸಂಸ್ಥೆಗಳ ತನಿಖೆಗಳನ್ನು ಎದುರಿಸಲು ಮತ್ತು ಚಾನೆಲ್ ಉಲ್ಲೇಖಿಸಿದ ಎಲ್ಲಾ ಸುಳ್ಳು ಆರೋಪಗಳಿಂದ ಮುಕ್ತರಾಗಲು ಕಾನೂನು ಹೋರಾಟಕ್ಕೆ ನಾವು ಸಿದ್ದರಿದ್ದೇವೆ. ಚಾನೆಲ್‍ನಲ್ಲಿ ಪ್ರಸಾರವಾದ ಮೇಲಿನ ವಿಷಯಗಳ ಪ್ರಕಾರ, ಒಂದೋ ಟೈಮ್ಸ್ ನೌ ಗೃಹ ವ್ಯವಹಾರಗಳ ಸಚಿವಾಲಯದ ರಹಸ್ಯ ಮಾಹಿತಿಗಳನ್ನು ಕದ್ದಿದೆ ಅಥವಾ ಗೃಹ ಸಚಿವಾಲಯದ ಯಾರೇ ವ್ಯಕ್ತಿಗಳು ಟೈಮ್ಸ್ ನೌ ಗೆ ಸೋರಿಕೆ ಮಾಡಿದ್ದಾರೆ ಮತ್ತು ಅದನ್ನು ಸಾರ್ವಜನಿಕವಾಗಿ ಪ್ರಸಾರ ಮಾಡಲಾಗಿದೆ. ಈ ಕತ್ಯವು ರಾಷ್ಟ್ರ ವಿರೋಧಿ ಚಟುವಟಿಕೆಯಾಗಿದ್ದು, ಅದು ದಂಡ ಸಂಹಿತೆಯ ನಿಬಂಧನೆಗಳ ಮೇಲೆ ಪ್ರಭಾವ ಬೀರುತ್ತದೆ. ಇದು ಆಡಳಿತಾತ್ಮಕ ಶಿಷ್ಟಾಚಾರ, ಗೌಪ್ಯತೆ ಮತ್ತು ಮಾಧ್ಯಮಗಳ ನೀತಿಶಾಸ್ತ್ರಗಳ ಅತ್ಯಂತ ಗಂಭೀರ ಉಲ್ಲಂಘನೆಯಾಗಿದೆ ಎಂಬುದು ಸ್ಪಷ್ಟವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Click to comment

Leave a Reply

Your email address will not be published. Required fields are marked *

To Top
error: Content is protected !!
WhatsApp chat Join our WhatsApp group