ರಾಷ್ಟ್ರೀಯ ಸುದ್ದಿ

125ಕೋಟಿ ಭಾರತೀಯರಿಗೆ ಉದ್ಯೋಗ ನೀಡಲು ಸಾಧ್ಯವಿಲ್ಲ ಎಂದು ಹೇಳಿ ಕೈ ತೊಳೆದುಕೊಂಡ ಅಮಿತ್ ಶಾ

ವರದಿಗಾರ: ಗುಜರಾತ್ ನ ಯುವ ಜನತೆಗೆ ಸರಿಯಾದ ಉದ್ಯೋಗ ನೀಡಲಾಗಿಲ್ಲ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿರುವುದಕ್ಕೆ ಪ್ರತಿಕ್ರಿಯಿಸಿರುವ ಭಾರತೀಯ ಜನತಾ ಪಾರ್ಟಿ (ಬಿಜೆಪಿ)ಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, 125 ಕೋಟಿ ಭಾರತೀಯರಿಗೆ ಉದ್ಯೋಗ ನೀಡಲು ಸಾಧ್ಯವಿಲ್ಲ ಎಂದು ಹೇಳಿ ಕೈ ತೊಳೆದುಕೊಂಡಿದ್ದಾರೆ.

ನೋಟು ನಿಷೇಧ, ಜಿಎಸ್ ಟಿ ಒಮ್ಮೆಲೇ ಜಾರಿಗೆ ಬಂದ ಕಾರಣ ಜನರು ಸಮಸ್ಯೆ ಎದುರಿಸುವಂತಾಗಿದೆ ಮತ್ತು ಮುಂದಿನ ದಿನಗಳಲ್ಲಿ ಈ ಯೋಜನೆಗಳು ಜನರಿಗೆ ಉಪಯೋಗವಾಗಲಿದೆ ಎಂದು ಹೇಳಿದ್ದಾರೆ.

ನೋಡಿ, 125 ಕೋಟಿ ಭಾರತೀಯರಿಗೆ ಉದ್ಯೋಗ ನೀಡಲು ಸಾಧ್ಯವಿಲ್ಲ. ನಿರುದ್ಯೋಗಕ್ಕೆ ಸ್ವ ಉದ್ಯೋಗವೇ ಪರಿಹಾರ. ಕೇಂದ್ರದ ಮುದ್ರ ಯೋಜನೆಯ ಮೂಲಕ 9ಕೋಟಿ ಜನರು ಲಾಭ ಪಡೆದಿದ್ದಾರೆ. ನೌಕರಿ ಹಾಗೂ ಉದ್ಯೋಗ ಎರಡು ಪ್ರತ್ಯೇಕ ವಿಷಯವಾಗಿದೆ ಎಂದು ಶಾ ಹೇಳಿಕೊಂಡಿದ್ದಾರೆ.

To Top
error: Content is protected !!
WhatsApp chat Join our WhatsApp group