ರಾಷ್ಟ್ರೀಯ ಸುದ್ದಿ

ಕಪ್ಪು ಹಣ : ಮೋದಿ ಸರ್ಕಾರದ ಕರಾಳ ಮುಖದರ್ಶನ ಮಾಡಿಸಿದ ಆರ್ ಟಿ ಐ ಮಾಹಿತಿ!

►ಆರೋಪಿಗಳ ಮೇಲೆ ಇದು ವರೆಗೂ ಒಂದೇ ಒಂದು ಎಫ್ ಐ ಆರ್ ದಾಖಲಾಗಿಲ್ಲ !

ವರದಿಗಾರ : ಚುನಾವಣೆಗೆ ಮುನ್ನ ಕಪ್ಪು ಹಣದ ವಿರುದ್ಧ ಯುದ್ಧ ಸಾರಿದ ರೀತಿಯಲ್ಲಿ ಭಾಷಣ ಮಾಡುತ್ತಿದ್ದ ನರೇಂದ್ರ ಮೋದಿಯವರ ನೇತೃತ್ವದಲ್ಲಿರುವ ಕೇಂದ್ರ ಸರಕಾರದ ಪೊಳ್ಳುತನವನ್ನು ಆರ್ ಟಿ ಐ ಅರ್ಜಿಯು ಬಯಲುಗೊಳಿಸಿದೆ. ಇದುವರೆಗೂ ಕಪ್ಪು ಹಣಕ್ಕೆ ಸಂಬಂಧಿಸಿ ಯಾವುದೇ ಎಫ್ ಐ ಆರ್ ದಾಖಲಾಗಿಲ್ಲ ಎಂದು ಆರ್ ಟಿ ಐ ಅರ್ಜಿಯೊಂದಕ್ಕೆ ಲಭಿಸಿದ ಉತ್ತರದಲ್ಲಿ ಸ್ಪಷ್ಟಪಡಿಸಲಾಗಿದೆ.

ಕಳೆದ ವರ್ಷದ ಏಪ್ರಿಲ್ ತಿಂಗಳಲ್ಲಿ ವಿವಿಧ ತನಿಖಾ ಸಂಸ್ಥೆಗಳ ಗುಂಪೊಂದನ್ನು ಪ್ರಾರಂಭಿಸಲಾಗಿತ್ತು. ಜಗತ್ತಿನಾದ್ಯಂತ ಕೋಲಾಹಲವೆಬ್ಬಿಸಿದ ‘ಪನಾಮಾ ಲೀಕ್ಸ್’ ನಲ್ಲಿ ಹೆಸರಿಸಲ್ಪಟ್ಟ ಭಾರತೀಯರ ಶೀಘ್ರ ತನಿಖೆಗಾಗಿ ಇದನ್ನು ಪ್ರಾರಂಭಿಸಲಾಗಿತ್ತು. ಈ ಬಗ್ಗೆ ಮಾಹಿತಿ ಕೋರಿ ಸಲ್ಲಿಸಿದ್ದ ಅರ್ಜಿಯೊಂದಕ್ಕೆ ಉತ್ತರಿಸುತ್ತಾ, ಕಪ್ಪು ಹಣ್ದ ಕುರಿತಂತೆ ಸರ್ಕಾರ ಇದುವರೆಗೂ ಯಾವೊಬ್ಬನ ಮೇಲೂ ಎಫ್ ಐ ಆರ್ ದಾಖಲಿಸಲಿಲ್ಲ ಎಂದು ಕೇಂದ್ರ ಹಣಕಾಸು ಸಚಿವಾಲಯವು ವ್ಯಕ್ತಪಡಿಸಿದೆ. ಪ್ರಸಕ್ತ ಕಾನೂನಿನಡಿಯಲ್ಲಿ ಎಫ್ ಐ ಆರ್ ದಾಖಲಿಸಲು ಯಾವುದೇ ಅವಕಾಶವಿಲ್ಲ ಎನ್ನುವುದಾಗಿತ್ತು ಕಾರಣ.

ಇತ್ತೀಚೆಗೆ ಸುದ್ದಿಯಾದ ‘ಪಾರಡೈಸ್ ಲೀಕ್ಸ್’ನಲ್ಲಿ ಹೆಸರಿಸಲ್ಪಟ್ಟ 714 ಭಾರತೀಯರನ್ನೂ ಈ ತನಿಖಾ ಸಂಸ್ಥೆಗಳ ಗುಂಪು  ತನಿಖೆ ನಡೆಸುವುದಾಗಿ ತಿಳಿಸಿದ್ದರೂ, ಎಫ್ ಐ ಆರ್ ದಾಖಲಿಸಲು ಅವಕಾಶವಿಲ್ಲದಿದ್ದಲ್ಲಿ ಯಾವುದೇ ತನಿಖೆ ನಡೆಸಿಯೂ ಏನು ಪ್ರತಿಫಲ ಎನ್ನುವುದು ಪ್ರಜ್ಞಾವಂತರ ಪ್ರಶ್ನೆ.

ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಉತ್ತರ ಪ್ರದೇಶದ ಚುನಾವಣಾ ರಾಲಿಯನ್ನುದ್ದೇಶಿಸಿ ಮಾತನಾಡುತ್ತಾ ಮೋದಿ, ಅಕ್ರಮ ಸಂಪತ್ತನ್ನು ಹೊಂದಿರುವ ಸಿರಿವಂತರನ್ನು ಜೈಲಿಗೆ ಕಳುಹಿಸಲು ಪ್ರಯತ್ನಿಸುತ್ತಿರುವುದಾಗಿ ತಿಳಿಸಿದ್ದರು. ಆದರೆ, ಎಫ್ ಐ ಆರ್ ದಾಖಲಿಸದೆ ಜೈಲಿಗೆ ಕಳುಹಿಸುವುದು ಸಾಧ್ಯವೇ?? ಎನ್ನುವುದು ಪ್ರತಿಯೊಬ್ಬ ಪ್ರಜ್ಞಾವಂತ ಮತದಾರನ ಪ್ರಶ್ನೆಯಾಗಿದೆ.

To Top
error: Content is protected !!
WhatsApp chat Join our WhatsApp group