ಬಿಜೆಪಿಯನ್ನು ಬೆಂಬಲಿಸಿದ ಮತದಾರರಿಗೆ ತಮ್ಮ ತಪ್ಪಿನ ಅರಿವಾಗಿದೆ : ಪ್ರಕಾಶ್ ರೈ

ವರದಿಗಾರ : ಕೇಂದ್ರ ಸರಕಾರ ಮತ್ತು ಬಿಜೆಪಿಯ ವಿರುದ್ಧದ ತನ್ನ ಟೀಕಾ ಸರಣಿಯನ್ನು ಮುಂದುವರಿಸಿರುವ ಖ್ಯಾತ ನಟ ಪ್ರಕಾಶ ರೈ, ಕಳೆದ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲವಾಗಿ ನಿಂತು ಮತ ಹಾಕಿದ ಪ್ರಜ್ಞಾವಂತ ಮತದಾರರಿಗೆ ತಮ್ಮ ತಪ್ಪಿನ ಅರಿವಾಗಿದೆ ಎಂದು ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಪ್ರಕಾಶ್ ರೈ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ,  ಅಧಿಕಾರಕ್ಕೆ ಗಂಟು ಬಿದ್ದು ತನ್ನ ವಿರುದ್ಧ ಮಾತನಾಡುವವರ ಧ್ವನಿಯನ್ನು ಅಡಗಿಸುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಇದು ಬಹಳ ಸಮಯದಿಂದ ನಡೆದುಕೊಂಡು ಬರುತ್ತಿದೆ. ಬಾಲಿವುಡ್ ನಟ ಶಾರೂಖ್ ಖಾನ್’ರ ಮೇಲೆ ದಾಳಿಯಾಯಿತು, ಅಮೀರ್ ಖಾನ್’ರನ್ನು ನೇಪತ್ಯಕ್ಕೆ ಸರಿಸುವ ಪ್ರಯತ್ನ ನಡೆಸಲಾಯಿತು. ಒಂದು ಸರ್ಕಾರೀ ಜಾಹೀರಾತಿನ ರಾಯಭಾರಿಯಾಗಿದ್ದ ಅವರನ್ನು ಅಲ್ಲಿಂದ ತೆಗೆದು ಹಾಕಲಾಯಿತು. ಅವರ ಕೆಲವೊಂದು ಜಾಹೀರಾತುಗಳನ್ನು ರದ್ದುಗೊಳಿಸಲಾಯಿತು. ಮಾತ್ರವಲ್ಲ ನನ್ನದೂ ಕೆಲವೊಂದು ಜಾಹೀರಾತುಗಳನ್ನು ನಿಲ್ಲಿಸಿದ್ದಾರೆ. ಆದರೆ ಅದರಲ್ಲಿ ಹಣದ ವ್ಯವಹಾರ ಒಳಗೊಂಡಿದೆ. ಆದುದರಿಂದ ಅದರ ಕುರಿತು ನಾನೀಗ ಮಾತನಾಡುವಂತಿಲ್ಲ ಎಂದು ಪ್ರಕಾಶ್ ರೈ ಹೇಳಿದ್ದಾರೆ.

ಜನರ ನಡುವೆ ಭಯದ ವಾತಾವರಣವನ್ನು ನಿರ್ಮಿಸಿರುವ ಹಿಂದುತ್ವ ಶಕ್ತಿಗಳ ಕುರಿತು ಕಿಡಿ ಕಾರಿದ ಪ್ರಕಾಶ್ ರೈ, ಗೋವಿನ ಕುರಿತು ಕಾನೂನು ರಚಿಸುವವರು ಮನುಷ್ಯರನ್ನು ಹತ್ಯೆ ಮಾಡಿದಾಗ ಸುಮ್ಮನಿರುತ್ತಾರೆ. ಯುವ ಜೋಡಿಗಳನ್ನು ಸಾರ್ವಜನಿಕವಾಗಿ ಥಳಿಸಲಾಗುತ್ತದೆ ಮತ್ತು ಅಂತಹಾ ಘಟನೆಗಳ ಕುರಿತು ಸಮರ್ಥನೆ ನೀಡುತ್ತಾರೆ. ಈ ಎಲ್ಲಾ ಕೃತ್ಯಗಳು ಭಾರತೀಯತೆಯನ್ನು ಪ್ರತಿನಿಧಿಸುತ್ತಿಲ್ಲವೆಂದು ಪ್ರಕಾಶ್ ರೈ ತೀಕ್ಷ್ಣವಾಗಿ ಟೀಕಿಸಿದ್ದಾರೆ.

error: Content is protected !!
%d bloggers like this:
Inline
Inline